Advertisements

ಸೈಲೆಂಟಾಗಿ ಬ್ಲಾಸ್ಟ್ ಆಗ್ತಿದೆ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್

ಸ್ಯಾಂಡಲ್ವುಡ್ ನ ಬಹು ನಿರೀಕ್ಷಿತ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಟೀಸರ್ ನಾಳೆ ಅಂದ್ರೆ 7ನೇ ತಾರೀಖು ರಿಲೀಸ್ ಆಗ್ತಿದೆ.

ಭಾರಿ ನಿರೀಕ್ಷೆ ಮತ್ತು ಕುಚತೂಹಲ ಹುಟ್ಟಿಸಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಈ ಟೀಸರ್ ನ ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಮಾಡಲಾಗ್ತಿದೆ.

ಸೈಲೆಂಟಾಗಿ ಸಿನಿಮಾ ಮಾಡಿ, ಇದೀಗ ಸೈಲೆಂಟಾಗಿ ಟೀಸರ್ ರಿಲೀಸ್ ಮಾಡಿ, ವೈಲೆಂಟಾಗಿ ಸದ್ದು ಸುದ್ದಿ ಮಾಡೋದಕ್ಕೆ ನಿರ್ದೇಶಕ ಸೂರಿ ಸಜ್ಜಾಗಿದ್ದಾರೆ. ಸುರೇಂದ್ರ ನಾಥ್ ಸೂರಿ ಕಥೆ, ಸೂರಿ ಮತ್ತು ಅಮೃತ ಭಾರ್ಗವ್ ಸಂಭಾಷಣೆ ಬರೆದು, ಸೂರಿ ನಿರ್ದೇಶಿಸಿರೋ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್ ಸಾಕಷ್ಟು ವಿಶೇಷತೆಗಳಿಂದ ಕೂಡಿರೋ ಹೊಸ ಮಾಸ್ ಟ್ರೆಂಡಿ ಸಿನಿಮಾ ಅಂತ ಹೇಳಲಾಗ್ತಿರೋ ಈ ಚಿತ್ರದಲ್ಲಿ, ಡಾಲಿ ಧನಂಜಯ ನಾಯಕನಾಗಿ ವಿಶಿಷ್ಠ ಪಾತ್ರದಲ್ಲಿ ಮಿಂಚಿದ್ದಾರೆ.

ಔಟ್ ಅಂಡ್ ಔಟ್ ರಾ ಮಾಸ್ ಸಿನಿಮಾ ವಿಥ್ ಫ್ಯಾಮಿಲಿ ಎಮೋಷನ್ಸ್ ಅಂತ ಹೇಳಲಾಗ್ತಿರೋ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಛಾಯಾಗ್ರಹಣವಿದ್ದು, ಸುಧೀರ್ ಕೆ.ಎಮ್ ಬಂಡವಾಳ ಹೂಡಿದ್ದಾರೆ, ಈಗಾಗ್ಲೇ ಸಾಕಷ್ಟು ವಿಚಾರಗಳಿಂದ ಸದ್ದು ಸುದ್ದಿ ಮಾಡಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ನಿಂದ ಹೊಸ ಅಲೆಯನ್ನೆಬ್ಬಿಸೋ ಸೂಚನೆ ಕೊಡ್ತಿದೆ.

ಸೋ ಸೈಲೆಂಟಾಗಿ ನಾಳೆ ರಿಲೀಸ್ ಆಗ್ತಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಅಸಲಿಯತ್ತೇನು ಅನ್ನೋದು ನಾಳೆ ಗೊತ್ತಾಗಲಿದೆ.

Advertisements

Leave a Reply

%d bloggers like this: