Advertisements

ಐಎಂಡಿಬಿ ನಲ್ಲಿ 5ನೇ ಸ್ಥಾನ ಆಲಂಕರಿಸಿದ ರೇಮೊ

ಹೊಸ ಸಂಭ್ರಮದ ನಡುವೆ ಕನ್ನಡ ಸಿನಿಲೋಕದಲಿ ಸದ್ದು ಮಾಡುತ್ತಿರುವ ರೇಮೊ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದೆ.

ಈಗಾಗಲೇ ಟ್ವೀಟರ್ ನಲ್ಲಿ ರೇಮೊ ಹ್ಯಾಷ್ ಟ್ಯಾಗ್ ಟಾಪ್ ಸ್ಥಾನವನ್ನು ಆಲಂಕರಿಸಿತ್ತು. ಇದೀಗ ಐಎಂಡಿಬಿ ಜಾಲತಾಣದಲ್ಲಿ ರೇಮೊ 5 ನೇ ಪಟ್ಟ ಆಲಂಕರಿಸಿದೆ.

ಏನಿದು IMDB

ಐಎಂಡಿಬಿ ಅಂದರೆ ಇಂಟರ್ನೆಟ್ ಮೂವಿ ಡೇಟಾ ಬೇಸ್ ಎಂದರ್ಥ. ಅಂದರೆ ಚಲನಚಿತ್ರಗಳ ಬಗ್ಗೆ ಜಾಲತಾಣಿಗರು ವ್ಯಕ್ತಪಡಿಸುವ ಅಭಿಪ್ರಾಯ, ವಿಮರ್ಶಿಸುವ ಮಾನದಂಡ ಸಂಸ್ಥೆ ಇದು.

ಇಲ್ಲಿ ಯಾವುದೇ ಚಿತ್ರಗಳಿಗೆ ಒಳ್ಳೆಯ ಗೌರವ ಸಿಕ್ಕಿದೆ, ಚಿತ್ರ ಟ್ರೆಂಡಿಗ್ ಆಗುತ್ತಿದೆ ಅಂದ್ರೆ ಚಿತ್ರದ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ ಎಂದೇ ಅರ್ಥ.

ಹೀಗಾಗಿ ರೇಮೊ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾದ ದಿನದಿಂದ ರೇಮೊ ಟೈಟಲ್ ಟ್ರೆಂಡಿಂಗ್ ನಲ್ಲಿದೆ ಅಂದ್ರೆ ಪವನ್ ಒಡೆಯರ್ ಕಮಾಲ್ ಬಗ್ಗೆ ಕರ್ನಾಟಕ ಕುತೂಹಲದಲ್ಲಿದೆ ಅಂದಾಯ್ತು.

Advertisements

Leave a Reply

%d bloggers like this: