Advertisements

ರೇಮೊಗಾಗಿ ಡಬಲ್ ಡೆಕ್ ಗಿಟಾರ್ ತರಬೇತಿ ಪಡೆದಿದ್ದ ನಿಶಾನ್

ಇಶಾನ್‌ ಮತ್ತು ಆಶಿಕಾ ರಂಗನಾಥ್‌ ನಟನೆಯ ರೇಮೊ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ, ಇದು ಪವನ್ ಒಡೆಯರ್ ಚಿತ್ರ ಅನ್ನುವ ಕಾರಣಕ್ಕೆ ಚಿತ್ರ ಪ್ರೇಮಿಗಳು ರೇಮೊ ಟೀಂ ಕಡೆಗೆ ಮುಖ ಮಾಡಿದ್ದಾರೆ.

ಮತ್ತೊಂದು ಕಡೆ ಚಿತ್ರಗಳಿಗೆ ಬಿಂದಾಸ್ ಆಗಿ ದುಡ್ಡು ಸುರಿಯುವ ಸಿ.ಆರ್. ಮನೋಹರ್ ರೇಮೊಗಾಗಿ ಬಂಡವಾಳ ಹೂಡಿದ್ದಾರೆ. ಹೇಳಿ ಕೇಳಿ ಮನೋಹರ್ ಸಹೋದರನೇ ಇದರಲ್ಲಿ ನಾಯಕ ನಟ. ಹೀಗಾಗಿ ಈ ಚಿತ್ರ ಅದ್ದೂರಿಯಾಗಿರುತ್ತದೆ ಅನ್ನುವುದು ಎಲ್ಲರ ನಿರೀಕ್ಷೆ.

ಈ ನಡುವೆ ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರದ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಚಿತ್ರ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಇದೀಗ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದೆ.

ರಾಕ್‌ ಬ್ಯಾಂಡ್‌ ಸಿಂಗರ್‌ ಆಗಿ ಇಶಾನ್‌ ನಟಿಸುತ್ತಿದ್ದಾರೆ. ಫಂಕಿ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ನಟ ಇಶಾನ್ ಈ ಚಿತ್ರದಲ್ಲಿ ಗಿಟಾರ್ ವಾದಕನಾಗಿ ಕಾಣಿಸಿಕೊಳ್ಲಲು ಡಬಲ್ ಡೆಕ್ ಗಿಟಾರ್ ಅನ್ನು ನಿರ್ವಹಿಸಲು ವಿಶೇಷ ತರಬೇತಿಯನ್ನು ಪಡೆದಿದ್ದಾರೆ.

ಕನ್ನಡ ಚಿತ್ರಗಳಲ್ಲಿ ಮೊದಲ ಬಾರಿಗೆಇಂತಹಾ ಪಾತ್ರ ತೆರೆ ಮೇಲೆ ಬರುತ್ತಿದೆ. ಹೀಗಾಗಿಯೇ “ರೇಮೋ” ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ನಿರ್ದೇಶಕ ಪವನ್ ಒಡೆಯರ್ ಹೊಂದಿದ್ದಾರೆ.

Advertisements

Leave a Reply

%d bloggers like this: