Advertisements

ಆಂಧ್ರದಲ್ಲಿ ಗರ್ಜಿಸಿದ ಕನ್ನಡ ಸಿಂಹ…. ಇದು ರಾಕಿಭಾಯ್ ಚಂಡ ಮಾರುತ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದ ಕಾರಣದಿಂದ ಇಡೀ ವಿಶ್ವ ಚಂದನವನದತ್ತ ತಿರುಗಿ ನೋಡಿತ್ತು. ಅಷ್ಟು ಮಾತ್ರವಲ್ಲದೆ ಯಶ್ ಈ ಮೂಲಕ ತಮ್ಮ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಂಡಿದ್ದರು.

ಕೆಜಿಎಫ್ ದಂಡಯಾತ್ರೆಯಿಂದ ದಕ್ಷಿಣದ ಚಿತ್ರ ಅಭಿಮಾನಿಗಳು ಮಾತ್ರವಲ್ಲ ಇಡೀ ಭಾರತದ ಚಿತ್ರ ಪ್ರೇಮಿಗಳು ಯಶ್ ಅವರಿಗೆ ಬಹುಪರಾಕ್ ಅಂದಿದ್ದರು.

ಇದೀಗ ಯಶ್ ಎಲ್ಲೇ ಹೋಗಲಿ ಅವರನ್ನು ನೋಡಲು ಸರತಿ ಸಾಲಿನಲ್ಲಿ ಜನ ನಿಂತಿರುತ್ತಾರೆ. ಇತ್ತೀಚೆಗಷ್ಟೇ ಕೇರಳ ತಮಿಳುನಾಡಿನಿಂದ ಬಂದ ಅಭಿಮಾನಿಗಳು ನೆಚ್ಚಿನ ನಟನ ಹೆಸರಿನಲ್ಲಿ ಅಭಿಮಾನಿ ಸಂಘ ಕಟ್ಟಿರುವುದಾಗಿ ಹೇಳಿದ್ದರು.

ಈ ನಡುವೆ ಆಂಧ್ರದ ರಾಯಲ ಸೀಮೆಯ ಕಡಪದಲ್ಲಿ ‘ಕೆಜಿಎಫ್ ಚಾಪ್ಟರ್-2’ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದಲ್ಲಿ ಯಶ್ ಭಾಗಿಯಾಗಿದ್ದು, ಶೂಟಿಂಗ್ ಸ್ಪಾಟ್‍ಗೆ ಸ್ಥಳೀಯರು ಭೇಟಿ ಕೊಟ್ಟಿದ್ದಾರೆ.

ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮಂದಿ ರಾಕಿಭಾಯ್ ಜೊತೆ ಸೆಲ್ಫಿಗೆ ಬೇಡಿಕೆ ಇಟ್ಟಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಯಶ್, ಶೂಟಿಂಗ್‍ಗೆ ಬ್ರೇಕ್ ಹಾಕಿ ಬಂದ ಎಲ್ಲಾ ಅಭಿಮಾನಿಗಳಿಗಳ ಕ್ಯಾಮಾರಗೆ ಸ್ಮೈಲ್ ಕೊಟ್ಟಿದ್ದಾರೆ.

Advertisements

Leave a Reply

%d bloggers like this: