ಸಂವಿಧಾನ ರಕ್ಷಣೆಗೆ ಮತ್ತೊಂದು ಸ್ವಾತಂತ್ರ್ಯ ಚಳವಳಿ ಬೇಕಂತೆ ಇದು ರಮಾನಾಥ ರೈ ಮಾತು…

ಕೆಲ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದ್ರೆ ನಗುವುದೋ ಅಳುವುದೋ ಎಂದು ಗೊತ್ತಾಗುತ್ತಿಲ್ಲ. ಇದಕ್ಕೊಂದು ಉದಾಹರಣೆ ಮಾಜಿ ಸಚಿವ ರಮಾನಾಥ ರೈ ಮಂಗಳೂರಿನಲ್ಲಿ ಹೇಳಿದ ಮಾತು.

ಡಿ.19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್, ಘರ್ಷಣೆ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಇಂದು ಪುರಭವನದ ಅಂಬೇಡ್ಕರ್ ಪ್ರತಿಮೆಯ ಎದುರು ಏರ್ಪಡಿಸಿದ್ದ ಒಂದು ದಿನದ ಸಾಮೂಹಿಕ ಧರಣಿ ಉದ್ದೇಶಿಸಿ ಮಾತನಾಡಿದ ರಮಾನಾಥ ರೈ ದೇಶದ ಸಂವಿಧಾನ ವಿರೋಧಿಯಾದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಕೇಂದ್ರದ ಸರಕಾರದ ವಿರುದ್ಧ ದೇಶದ ಎಲ್ಲಾ ವರ್ಗಗಳ ಜನರು ಎರಡನೆ ಸ್ವಾತಂತ್ರ ಚಳವಳಿ ನಡೆಸುವುದು ಅಗತ್ಯವಿದೆ ಅಂದಿದ್ದಾರೆ.

ಪೌರತ್ವ ಕಾಯಿದೆಯಿಂದ ಭಾರತೀಯರಿಗೆ ತೊಂದರೆ ಇಲ್ಲ. ತೊಂದರೆ ಇರುವುದು ನುಸುಳುಕೋರರಿಗೆ ಎಂದು ಸಾವಿರ ಸಲ ಸಾರಲಾಗಿದೆ.

ಅಷ್ಟು ಮಾತ್ರವಲ್ಲದೆ ಸಂವಿಧಾನದ ರಕ್ಷಣೆಗಾಗಿ ದೇಶದಲ್ಲಿ ಸರ್ವೋಚ್ಛ ನ್ಯಾಯಾಲಯವಿದೆ. ಸಂವಿಧಾನಕ್ಕೆ ಯಾರಾದ್ರೂ ಅಪಚಾರ ಎಸಗುತ್ತಾರೆ, ಸಂವಿಧಾನಕ್ಕೆ ಅಪಾಯ ಬಂದಿದೆ ಅಂದಾಗ ಸರ್ವೋಚ್ಛ ನ್ಯಾಯಾಲಯ ಮಧ್ಯ ಪ್ರವೇಶಿಸುತ್ತದೆ.

ಇನ್ನು ಪೌರತ್ವ ವಿಷಯ ಕುರಿತಂತೆ ಹೋರಾಟ ನಡೆಯಬೇಕಾಗಿರುವುದು ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರ ತಪ್ಪು ಮಾಡುತ್ತಿದೆ ಅನ್ನುವುದನ್ನು ಸಾಬೀತು ಮಾಡಬೇಕಾಗಿರುವುದು ನ್ಯಾಯಾಲಯದಲ್ಲಿ ಅದನ್ನು ಬಿಟ್ಟು ಪೌರತ್ವದಂತಹ ಗಂಭೀರ ವಿಷಯಗಳ ಬಗ್ಗೆ ಬೀದಿಗಳಲ್ಲಿ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ.

ಬದಲಾಗಿ ಅತ್ಯಾಚಾರಿಗಳಿಗೆ ತಕ್ಷಣ ಗಲ್ಲು, ರೈತರ ಸಂಕಷ್ಟಕ್ಕೆ ತಕ್ಷಣ ಪರಿಹಾರ, ಕುಸಿಯುತ್ತಿರುವ ದೇಶದ ಆರ್ಥಿಕ ಸ್ಥಿತಿ ಚೇತರಿಕೆಗೆ ಕ್ರಮ ಹೀಗೆ ಹತ್ತು ಹಲವು ವಿಷಯಗಳಿವೆ ಹೋರಾಟಕ್ಕೆ ಅದನ್ನು ಬಿಟ್ಟು ಮತ್ತೊಂದು ಸ್ವಾತಂತ್ರ್ಯ ಚಳವಳಿ ಬೇಕು ಅನ್ನೋದು ನಗೆ ಹನಿಯೇ ಸರಿ.

ಇನ್ನು ಮಂಗಳೂರಿನ ಗೋಲಿಬಾರ್ ಗೆ ಸಂಬಂಧಿಸಿದಂತೆ ಬಂದಿರುವ ವಿಡಿಯೋಗಳು ಸಾಕ್ಷಿ ಕೊಟ್ಟಿವೆ. ಭಸ್ಮಾಸುರರು ಕರಾವಳಿಯನ್ನು ಸುಡಲು ಹೇಗೆ ಹುನ್ನಾರ ನಡೆಸಿದ್ದರು, ಸಿಸಿಟಿವಿಗಳನ್ನು ಧ್ವಂಸಗೊಳಿಸಿ ಗಲಭೆಗೆ ಸಿದ್ದತೆ ಹೇಗೆ ನಡೆಸಿದ್ದರು ಅನ್ನುವುದೂ ಗೊತ್ತಾಗಿದೆ. ಹಾಗಿದ್ದ ಮೇಲೂ ಪ್ರತಿಭಟನೆಯ ಅಗತ್ಯವೇನಿದೆ.

ಇನ್ನು ಘಟನೆ ಕುರಿತಂತೆ ಈಗ ರಾಜ್ಯ ಸರ್ಕಾರ ಆದೇಶಿಸಿರುವ ತನಿಖೆ ಬಗ್ಗೆ ರಮಾನಾಥ ರೈ ಗಳಿಗೆ ಸಮಾಧಾನವಿಲ್ಲ ಅನ್ನುವುದಾದರೆ ಅವರು ನ್ಯಾಯಾಲಯಕ್ಕೆ ಮೊರೆ ಹೋಗಲು ಅವಕಾಶವಿದೆ. ಸೂಕ್ತವಾದ ತನಿಖೆಗೆ ಸರ್ಕಾರಕ್ಕೆ ಆದೇಶ ಕೊಡಿ ಎಂದು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದಾಗಿದೆ. ಹಾಗಿದ್ದ ಮೇಲೆ ಈ ಹೋರಾಟದ ಅಗತ್ಯವೇನಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: