ಸಂಜನಾ ವಿರುದ್ಧ ಸಿಡಿದೆದ್ದಿರುವ ವಂದನಾ ಮೋದಿಯನ್ನೂ ವಿರೋಧಿಸಿದ್ದರು….

ಸಂಜನಾ ಮತ್ತು ವಂದನಾ ಅವರ ಎಣ್ಣೆ ಗಲಾಟೆ ನಿಲ್ಲುವ ಲಕ್ಷಣಗಳಿಲ್ಲ. ಇದೀಗ 4 ಕೋಟಿ ಮಾನನಷ್ಟದ ನೊಟೀಸ್ ಅನ್ನು ವಂದನಾ ಸಂಜನಾ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.

ಈ ನೋಟೀಸ್ ಸಂಜನಾ ಅವರಿಗೆ ಸಂಕಷ್ಟ ತರುವುದರಲ್ಲಿ ಸಂಶಯವಿಲ್ಲ. ಇದನ್ನು ಅವರು ಹೇಗೆ ಪರಿಹರಿಸಿಕೊಳ್ಳುತ್ತಾರೆ ಅನ್ನುವುದು ಕುತೂಹಲ.

ಈ ನಡುವೆ ವಂದನಾ ಜೈನ್ ಕೇವಲ ವ್ಯವಹಾರಗಳಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಡಾ.ನೌಹಿರಾ ಶೇಖ್ ಅನ್ನುವವರು ಸ್ಥಾಪಿಸಿದ್ದ ಎಂಇಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಇವರು ನೌಹಿರಾ ಜೊತೆ ವೇದಿಕೆ ಹಂಚಿಕೊಂಡಿದ್ದರು.

ಮಾತ್ರವಲ್ಲದೆ MEP ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಪ್ರಚಾರವನ್ನೂ ನಡೆಸಿದ್ದರು. ಎಂಇಪಿ ಹೇಳಿ ಕೇಳಿ ನರೇಂದ್ರ ಮೋದಿಯವರನ್ನು ವಿರೋಧಿಸಿಕೊಂಡು ಬಂದ ಪಕ್ಷವಾಗಿತ್ತು. ಅದರ ನಾಯಕಿಯೇ 2018ರ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ಬಜೆಟ್ ಅನ್ನು ಖಂಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಮಹಿಳಾ ವಿರೋಧಿಯಾಗಿದ್ದು, ಬಜೆಟ್ ನಲ್ಲಿ ಮಹತ್ವದ ಹೊಸ ವಿಚಾರಗಳೇನೂ ಇಲ್ಲ,” ಎಂದು ಆಗ ಅಸಮಾಧಾನ ವ್ಯಕ್ತಪಡಿಸಿದರು.

ನೌಹಿರಾ ಮೋದಿಯವರನ್ನು ವಿರೋಧಿಸುತ್ತಾರೆ ಅಂದ ಮೇಲೆ ಅವರ ಪಕ್ಷವೂ ಮೋದಿ ವಿರೋಧಿಯಾಗಿರುತ್ತದೆ. ಪಕ್ಷವೂ ಮೋದಿ ವಿರೋಧಿ ಅಂದ ಮೇಲೆ ಅದರ ಕಾರ್ಯಕರ್ತರು, ಪದಾಧಿಕಾರಿಗಳು ಹೊರತಲ್ಲ. ಹೀಗಾಗಿಯೇ ಎಂಇಪಿ ಜೊತೆಗೆ ಆಗ ಗುರುತಿಸಿಕೊಂಡ ವಂದನಾ ಜೈನ್ ಕೂಡಾ ಮೋದಿಯನ್ನು ವಿರೋಧಿಸಿದವರು ಎಂದೇ ಲೆಕ್ಕ.

ಆದರೆ ಈಗ ವಂದನಾ ಜೈನ್ ಯಾವ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ ಅನ್ನುವ ಮಾಹಿತಿ ಇಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: