ಸಂಜನಾ ವಂದನಾ ಗಲಾಟೆಗೆ ಸಚಿನ್ ತೆಂಡೂಲ್ಕರ್ ಹೆಸರು ಎಳೆದು ತಂದ ಗಂಡ ಹೆಂಡತಿ ನಟಿ

ಎಣ್ಣೆ ಏಟಿನ ಜಡೆ ಜಗಳ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಗಂಡ ಹೆಂಡತಿ ಖ್ಯಾತಿಯ ನಟಿಟಿ ಸಂಜನಾ ಹಾಗೂ ಬಾಲಿವುಡ್ ನಿರ್ಮಾಪಕಿ ವಂದನಾ ಗಲಾಟೆ ಪ್ರಕರಣ ಇದೀಗ ಮಾನನಷ್ಟ ಮೊಕದ್ದಮೆಯನ್ನು ದಾಖಲು ಮಾಡುವ ತನಕ ಹೋಗಿದೆ.

ಸಂಜನಾ ಆಡಿರುವ ಮಾತಿನಿಂದ ನೋಡಿರುವ ವಂದನಾ, ಸಂಜನಾ ವಿರುದ್ಧ 4 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

ಇದಕ್ಕೆ ಕಾರಣವಾಗಿರೋದು ಸಂಜನಾ ಕ್ರಿಕೆಟರ್ ಒಬ್ಬರನ್ನು ಈ ಜಗಳಕ್ಕೆ ಎಳೆದು ತಂದಿರುವುದು. ಕೆಲ ದಿನಗಳ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಂಜನಾ ಕ್ರಿಕೆಟರ್ ಒಬ್ಬರ ಹೆಸರಿನ ಜೊತೆಗೆ ವಂದನಾ ಹೆಸರನ್ನು ಥಳುಕು ಹಾಕಿದ್ದರು.

ಅಮಿತ್ ಮಿಶ್ರಾ ಹೆಸರನ್ನು ಈ ವಿವಾದಕ್ಕೆ ಎಳೆದು ತಂದಿದ್ದ ಸಂಜನಾ ಸಚಿನ್ ತೆಂಡೂಲ್ಕರ್ ಹೆಸರನ್ನು ಪ್ರಸ್ತಾಪಿಸಿದ್ದರು.

ವಂದನಾ ಸಂಜನಾ ಗಲಾಟೆ ಏನೇ ಇರಬಹುದು, ಹಾಗಂತ ಈ ಎಣ್ಣೆ ಗಲಾಟೆಯಲ್ಲಿ ಸಚಿನ್ ಹೆಸರನ್ನು ಎಳೆದು ತಂದಿರುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಸಚಿನ್ ಜಗತ್ತು ಮೆಚ್ಚಿದ ಕ್ರಿಕೆಟ್ ಆಟಗಾರ. ತನ್ನ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯನ್ನು ಸೇರಿಸಿಕೊಂಡವರಲ್ಲ. ತನ್ನ ಆಟ ನಡೆ, ನುಡಿಯ ಮೂಲಕ ಜನ ಮನ ಗೆದ್ದ ಆಟಗಾರನ ಹೆಸರು ಪ್ರಸ್ತಾಪಿಸಿರುವುದನ್ನು ದುರಂತವೇ ಸರಿ.

ಘಟನೆಗೆ ಸಂಬಂಧವೇ ಇಲ್ಲದ ವ್ಯಕ್ತಿಯ ಹೆಸರನ್ನು ಎಳೆದು ತರುವ ಮುನ್ನ ಸಂಜನಾ ನೂರಲ್ಲ, ಸಾವಿರ ಸಲ ಯೋಚಿಸಬೇಕಿತ್ತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: