ಸುವರ್ಣ ನ್ಯೂಸ್ ನಲ್ಲಿ ಮಾಜಿ ಕಾಂಗ್ರೆಸ್ ಶಾಸಕರಿಗೆ ಬಂದ ಸ್ಥಿತಿ ಯಾರಿಗೂ ಬಾರದಿರಲಿ….

ಮಂಗಳೂರಿನಲ್ಲಿ ಗೋಲಿಬಾರ್ ನಡೆದ ದಿನದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಜಿದ್ದಿಗೆ ಬಿದ್ದಂತೆ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಪ್ರಾರಂಭಿಸಿದ್ದರು.

ಗೋಲಿಬಾರ್ ನಲ್ಲಿ ಮೃತಪಟ್ಟವರು ಗಲಭೆಯಲ್ಲಿ ಕೈ ಜೋಡಿಸಿದ್ದರೆ, ಅಮಾಯಕರೇ ಅನ್ನುವುದನ್ನು ಅರಿತುಕೊಳ್ಳುವ ಮುನ್ನ ಅಲ್ಪಸಂಖ್ಯಾತರ ಒಲೈಕೆ ಸಲುವಾಗಿ ಪರಿಹಾರ ಘೋಷಿಸಿತ್ತು. ಪರಿಹಾರವನ್ನು ಕೊಡುವುದರಲ್ಲಿ ತಪ್ಪೇನಿಲ್ಲ. ಹಾಗಂತ ತರಾತುರಿ ಬೇಕಿರಲಿಲ್ಲ.

ಈ ನಡುವೆ ಇಂದು ಮಂಗಳೂರಿನ ಭಸ್ಮಾಸುರರ ಅಟ್ಟಹಾಸ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಅಂದು ಪೊಲೀಸರನ್ನು ಟೀಕಿಸಿದವರು ಅದುರಿ ಹೋಗಿದ್ದರು. ಭಸ್ಮಾಸುರರ ಬೆನ್ನಿಗೆ ನಿಂತವರು ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನುವಂತೆ ವರ್ತಿಸತೊಡಗಿದರು.

ಕನಿಷ್ಟ ಪಕ್ಷ ತನಿಖೆಯ ಪ್ರಾಥಮಿಕ ವರದಿ ಬರೋ ತನಕ ಕಾಯೋ ವ್ಯವಧಾನವಿಲ್ಲದ್ದ ಮಾಜಿ ಸಿಎಂ ಗಳು ದಿವ್ಯ ಮೌನಕ್ಕೆ ಶರಣಾಗಿದ್ದರು.

ಈ ನಡುವೆ ಕಾಮಿಡಿ ಪೀಸ್ ಆಗಿ ಕಂಡಿದ್ದು ಮಂಗಳೂರಿನ ಶಾಸಕ ಮೊಯ್ದೀನ್ ಭಾವ. ಸುವರ್ಣ ವಾಹಿನಿಯಲ್ಲಿ ಮಂಗಳೂರಿನ ಭಸ್ಮಾಸುರರ ಪರ ಬ್ಯಾಟಿಂಗ್ ನಡೆಸಲು ಕೂತ ಅವರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಪೊಲೀಸರು ದಾಂಧಲೆ ನಡೆಸಿದ್ದಾರೆ ಅಂದರು. ಆದರೆ ಅದೇ ಆಸ್ಪತ್ರೆಗೆ ಹಲವು ಆರೋಪಿಗಳು ನುಗ್ಗಿ ರೋಗಿಗಳಿಗೆ ತೊಂದರೆ ಕೊಟ್ಟಿರುವುದನ್ನು ಖಂಡಿಸಲಿಲ್ಲ.

ಅವತ್ತು ಪೊಲೀಸರು ನಡೆಸಿದ್ದು ಸರಿ ಎಂದು ವೈದ್ಯರ ಒಕ್ಕೂಟ, ಆಸ್ಪತ್ರೆಗಳ ಸಂಘಟನೆಗಳೇ ಸಾರಿದೆಯಲ್ಲ ಅಂದ್ರೆ ಅವರೆಲ್ಲಾ ಆರ್ ಎಸ್ ಎಸ್ ಮಂದಿ. ಹೈಲ್ಯಾಂಡ್ ಆಸ್ಪತ್ರೆ ಮುಖ್ಯಸ್ಥರು ಬಂದು ಹೇಳಲಿ ಅಂದರು.

ಹೀಗೆ ಮಾತು ಬೆಳೆಯುತ್ತಿದ್ದಂತೆ ಸ್ಟುಡಿಯೋದಲ್ಲಿ ಕೂತಿದ್ದ ನಿರೂಪಕ ಅಜಿತ್ ಹನುಮಕ್ಕನವರ್ ಟೆರರಿಸ್ಟ್ ಅನ್ನುವ ಪದವನ್ನು ಬಳಸಿದರು ( ವಿಡಿಯೋ ನೋಡಿ)

ಅದು ‘ಬಾವ’ ಅವರನ್ನು ಉದ್ದೇಶಿಸಿ ಹೇಳಿದ ಶಬ್ಧವಾಗಿರಲಿಲ್ಲ. ಆದರೆ ಇದನ್ನು ತಪ್ಪಾಗಿ ಗ್ರಹಿಸಿದ ಮಾಜಿ ಶಾಸಕರು ಅಜಿತ್ ಮೇಲೆ ಎಗರಿ ಬಿದ್ದರು. ಅಜಿತ್ ವಿವರಿಸಿ ಹೇಳುತ್ತಿದ್ದಂತೆ ಮತ್ತೆಲ್ಲೋ ಮಾತು ತಿರುಗಿಸಿದರು.

ಇವತ್ತು ಮೊಯ್ದೀನ್ ಬಾವ ನೇರ ಪ್ರಸಾರದಲ್ಲಿ ಆಡಿದ ಆಟ ನೋಡಿದ್ರೆ ಸಾಕಷ್ಟು ಅನುಮಾನಗಳು ಬಂದಿದೆ. ಪೊಲೀಸರ ಮೇಲೆ ದೌರ್ಜನ್ಯ ಮಾಡಿದವರ ಪರ ಅವರು ಬ್ಯಾಟಿಂಗ್ ಮಾಡುವುದನ್ನು ನೋಡಿದರೆ ಅವರದ್ದೇ ಬೆಂಬಲಿಗರು ಭಸ್ಮಾಸುರರ ಪಟ್ಟಿಯಲ್ಲಿ ಇರುವ ಹಾಗಿತ್ತು.

ಈ ಬಗ್ಗೆ ಪೊಲೀಸ್ ತನಿಖೆಯೊಂದು ನಡೆದು ಮೊಯ್ದೀನ್ ಬಾವ ಕ್ಲೀನ್ ಹ್ಯಾಂಡ್ ಆಗಿ ಹೊರ ಬಂದ್ರೆ ಮುಂಬರುವ ಚುನಾವಣೆಯಲ್ಲಿ ಅವರಿಗೆ ಸ್ಪರ್ಧಿಸುವ ನೈತಿಕತೆ ಇರುತ್ತದೆ. ಯಾಕಂದ್ರೆ ಕಾನೂನು ಪ್ರಕಾರ ನಿರಪರಾಧಿ ಅನ್ನಿಸಿಕೊಂಡರೆ ನಮಗೂ ನೆಮ್ಮದಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: