ಪ್ಯಾರಿಸ್ ಪೊಲೀಸರಿಗೆ ಗೊಂಬೆ ಮೇಲೆ ಪ್ಯಾರ್ಗೆ ಆಗ್ಭುಟೈತೆ…..

ಸಂಚಾರ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಲು ಬೆಂಗಳೂರು ನಗರದ ವಿವಿಧ ಜಂಕ್ಷನ್‌, ವೃತ್ತಗಳಲ್ಲಿ ನಿಲ್ಲಿಸಲಾಗಿರುವ ‘ಪೊಲೀಸ್‌ ಗೊಂಬೆ’ಗಳು ಪ್ಯಾರಿಸ್‌ ಪೊಲೀಸ್‌ ಇಲಾಖೆಯ ಗಮನ ಸೆಳೆದಿದೆ.

ಬೆಂಗಳೂರು ಪೊಲೀಸರ ಕೆಲಸ ಕಂಡ ಪ್ಯಾರಿಸ್ ಪೊಲೀಸರು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಭೇಟಿ ನೀಡಿದ್ದು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಗೊಂಬೆಗಳ ಅಳವಡಿಕೆ ಹಾಗೂ ಅವುಗಳಿಂದ ಆಗಿರುವ ಪರಿಣಾಮದ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಪ್ಯಾರಿಸ್‌ನಲ್ಲೂ ಇಂಥ ಪ್ರಯತ್ನ ಮಾಡಿದ್ರೆ ಹೇಗೆ ಎಂದು ಚಿಂತನೆ ಮಾಡಿದ್ದಾರೆ.

ನಗರದಲ್ಲಿ 80 ಲಕ್ಷ ನೋಂದಣಿಯಾಗಿರುವ ವಾಹನಗಳಿದ್ದು, 2022ರ ವೇಳೆಗೆ 1 ಕೋಟಿ ತಲುಪುವ ನಿರೀಕ್ಷೆ ಇದೆ. ಆದರೆ, 4,500 ಸಿಬ್ಬಂದಿ ಮಾತ್ರ ಇದ್ದಾರೆ. ಸಿಬ್ಬಂದಿ ಕೊರತೆ ನೀಗಿಸಲು ಪೊಲೀಸ್‌ ಗೊಂಬೆಗಳು ನೆರವಾಗುತ್ತಿವೆ.

ಇನ್ನು ನಗರದಲ್ಲಿ 600 ಟ್ರಾಫಿಕ್‌ ಜಂಕ್ಷನ್‌ಗಳಿದ್ದು, 380ರಲ್ಲಿ ಸಿಗ್ನಲ್‌ ದೀಪಗಳಿವೆ. ಅವುಗಳನ್ನು ಪೊಲೀಸ್‌ ಸಿಬ್ಬಂದಿ ನಿಯಂತ್ರಿಸುತ್ತಾರೆ. ನಗರದಲ್ಲಿನ 44 ಸಂಚಾರ ಠಾಣೆಗಳಿಗೆ ತಲಾ 5 ಪೊಲೀಸ್‌ ಗೊಂಬೆ ನೀಡಲಾಗಿದ್ದು, ಪ್ರತೀ ಗೊಂಬೆಗಳಿಗೆ 4,000 ದಿಂದ 6,000 ರೂ. ಖರ್ಚಾಗಿದೆ.

ಇನ್ನು ಗೊಂಬೆಗಳನ್ನು ಕೇವಲ ಭಯ ಹುಟ್ಟಿಸಲು ಮಾತ್ರವಲ್ಲದೆ ಸಂಚಾರ ನಿಯಂತ್ರಣ ಕೆಲಸಕ್ಕೂ ಬಳಕೆ ಮಾಡುವಂತೆ ಅಭಿವೃದ್ಧಿಪಡಿಸುವ ದಿಸೆಯಲ್ಲಿ ಕೆಲವು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಸಲಹೆ ನೀಡಿದ್ದಾರೆ. ಈ ಬಗ್ಗೆಯೂ ಟ್ರಯಲ್ ಕೆಲಸ ಪ್ರಾರಂಭಗೊಂಡಿದೆ.

ಇದರೊಂದಿಗೆ ಗೊಂಬೆಗಳಿಗೆ ರಿಮೋಟ್‌ ಚಾಲಿತ ಕ್ಯಾಮೆರಾ ಅಳವಡಿಸುವ ಬಗ್ಗೆಯೂ ಸಲಹೆಗಳು ಬಂದಿದೆ. ಇದರಿಂದ ನಿಯಮ ಉಲ್ಲಂಘನೆ ಫೋಟೋ ಕ್ಲಿಕ್ಕಿಸಲು ಸಾಧ್ಯವಾಗಲಿದೆ ಎಂದು ಟೆಕ್ಕಿಗಳು ಸಲಹೆ ಕೊಟ್ಟಿದ್ದಾರೆ. ಈ ಬಗ್ಗೆಯೂ ಇಲಾಖೆ ಸಾಧಕ ಬಾಧಕ ಕುರಿತಂತೆ ಯೋಚಿಸುತ್ತಿದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191224194140″); document.getElementById(“div_6020191224194140”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: