ಅಸಲಿ ಪತ್ರಕರ್ತರಿಗೆ ನಕಲಿ ಪತ್ರಕರ್ತರ ಪಟ್ಟ ಕಟ್ಟಿದ ಟಿವಿ9….

ಪೌರತ್ವ ಕಾಯ್ದೆ ತಿದ್ದುಪಡಿ 2019 ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸ್ ಫೈರಿಂಗ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯ ವರದಿ ಮಾಡಲು ಮಂಗಳೂರಿಗೆ ಆಗಮಿಸಿದ್ದ ಕೇರಳದ ಪತ್ರಕರ್ತರ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ಫ್ಯೂ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪತ್ರಕರ್ತರು ವೆನ್ಲಾಕ್ ಆಸ್ಪತ್ರೆಯತ್ತ ಆಗಮಿಸಿದ ಕಾರಣ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇದೇ ವೇಳೆ ಕೇರಳದಿಂದ ಬಂದ ಪತ್ರಕರ್ತರಿಂದ ಸೂಕ್ತ ದಾಖಲೆಗಳನ್ನು ಪೊಲೀಸರು ಕೇಳಿದ್ದಾರೆ. ಆದರೆ ಬಂದ ಪತ್ರಕರ್ತರು ತಮ್ಮ ಸಂಸ್ಥೆಯ ಐಡಿ ಕಾರ್ಡ್ ತೋರಿಸಿದರೇ ಹೊರತು ಸರ್ಕಾರದಿಂದ ಅಧಿಕೃತವಾಗಿ ಪತ್ರಕರ್ತರು ಎಂದು ಸಾಬೀತು ಮಾಡುವ ದಾಖಲೆಗಳನ್ನು ತೋರಿಸಲಿಲ್ಲ ( ಆಯಾ ರಾಜ್ಯದ ವಾರ್ತಾ ಇಲಾಖೆ ಪತ್ರಕರ್ತರಿಗೆ ಮಾನ್ಯತ ಪತ್ರವನ್ನು ನೀಡುತ್ತದೆ)

ಹೀಗಾಗಿ ಪೊಲೀಸರು ಕೇರಳದಿಂದ ಬಂದ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ. ದಯವಿಟ್ಟು ಕರ್ಫ್ಯೂ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಆದರೆ ರಾಜ್ಯದ ನಂಬರ್ 1 ಸುದ್ದಿ ವಾಹಿನಿ ಟಿವಿ9 ಇದೇ ಪತ್ರಕರ್ತರಿಗೆ ನಕಲಿ ಪತ್ರಕರ್ತರ ಪಟ್ಟ ಕಟ್ಟಿತು. ಅವರ ಕೈಯಲ್ಲಿ ಮಾರಾಕಾಸ್ತ್ರಗಳಿರಬಹುದು ಎಂದು ಸಂಶಯಿಸಿತು.

ಇದನ್ನು ನೋಡಿದ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡರು. ಹಿಂದೂ ಮುಂದೂ ನೋಡದೆ ಅವರು ಮಾಡಿದ ಎಡವಟ್ಟು ಟಿವಿ9 ವಾಹಿನಿಯ ತಪ್ಪು ಸುದ್ದಿಯನ್ನು ಸರಿ ಅನ್ನುವಂತೆ ಬಿಂಬಿಸಿತು.

ಇನ್ನು ಕೇರಳ ಪತ್ರಕರ್ತರನ್ನು ಮಂಗಳೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಅನ್ನುವುದು ಗೊತ್ತಾಗುತ್ತಿದ್ದಂತೆ ಕೇರಳ ಪತ್ರಕರ್ತರ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅಸಲಿ ಕಥೆಯನ್ನು ವಿವರಿಸಿತು. ಕೇರಳ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ತಕ್ಷಣ ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿತು.

ಅಂಗೀಕೃತ ದಾಖಲೆಗಳನ್ನು ಪತ್ರಕರ್ತರು ಹೊಂದಿರುತ್ತಿದ್ರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಕರ್ಫ್ಯೂ ಸೇರಿದಂತೆ ಅನೇಕ ಅತೀ ಸೂಕ್ಷ್ಮ ಸಂದರ್ಭದಲ್ಲಿ ಪೊಲೀಸರು ಕಟ್ಟು ನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಇದು ಪತ್ರಕರ್ತರಿಗೂ ಅನ್ವಯಿಸುತ್ತದೆ.

ಆದರೆ ಕರ್ನಾಟಕದ ನಂಬರ್ 1 ವಾಹಿನಿ ಅಸಲಿ ಪತ್ರಕರ್ತರಿಗೆ ನಕಲಿ ಪತ್ರಕರ್ತರು ಅನ್ನುವ ಪಟ್ಟ ಕಟ್ಟಿದ್ದು ದುರಂತವೇ ಸರಿ. ಕನಿಷ್ಟ ಈ ಸುದ್ದಿಯ ಬಗ್ಗೆ ಕ್ಷಮೆ ಕೇಳುವ ನೈತಿಕತೆಯಾದರೂ ಟಿವಿ9ಗೆ ಇರಬೇಕಿತ್ತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: