ಪೌರತ್ವ ಕಾಯ್ದೆ ವಿರೋಧಿಗಳೇ ಈ ಸುದ್ದಿ ಒಂದ್ಸಲ ಓದಿ – ಪಾಕ್ ಮುಸ್ಲಿಂ ಮಹಿಳೆಗೆ ಭಾರತೀಯ ಪೌರತ್ವ

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸಲಾಗುತ್ತಿದೆ. ಅದರಲ್ಲೂ ಮುಸ್ಲಿಂ ಸಮುದಾಯದ ಅನೇಕ ಮಂದಿ ಕಾರಣವಿಲ್ಲದೆ ಪೌರತ್ವ ಕಾಯ್ದೆ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಕಾಯ್ದೆ ಕುರಿತಂತೆ ಅರಿವಿನ ಕೊರತೆ ಕಾರಣದಿಂದ ಪ್ರತಿಭಟನೆಗಳು ಹೆಚ್ಚಾಗುತ್ತಿದೆ. ಹಾಗೇ ನೋಡಿದರೆ ಪೌರತ್ವ ಕಾಯ್ದೆಯಲ್ಲಿ ಭಾರತೀಯ ಮುಸ್ಲಿಂರಿಗೆ ಯಾವುದೇ ತೊಂದರೆ ಇಲ್ಲ.  ಅಕ್ರಮವಾಗಿ ಭಾರತದ ಗಡಿ ದಾಟಿ ಬಂದವರಿಗೆ ಮಾತ್ರ ತೊಂದರೆ.

ಈ ನಡುವೆ ಪೌರತ್ವ ಕಾಯ್ದೆಯ ಬಗ್ಗೆ ಆತಂಕಗೊಂಡಿರುವವರ ಕಣ್ಣು ತೆರೆಸುವ ಪ್ರಕರಣವೊಂದು ಗುಜರಾತ್ ನಲ್ಲಿ ನಡೆದಿದೆ.

 ಇದೀಗ ಪಾಕಿಸ್ತಾನಿ ಮೂಲಕ ಮುಸ್ಲಿಂ ಮಹಿಳೆಯೊಬ್ಬರಿಗೆ ಭಾರತೀಯ ಪೌರತ್ವ ನೀಡಲಾಗಿದೆ.

ಹಸೀನಾ ಬೆನ್ ಎಂಬ ಮಹಿಳೆ ಹುಟ್ಟಿದ್ದು ಬೆಳೆದಿದ್ದು ಗುಜರಾತ್ ನ ಭಾನ್ ವಡ್ ತಾಲೂಕಿನಲ್ಲಿ ಮದುವೆಯಾಗಿ ಹೋಗಿದ್ದು ಪಾಕಿಸ್ತಾನಕ್ಕೆ.

1999ರಲ್ಲಿ ಮದುವೆಯಾದ ಬಳಿಕ ಭಾರತೀಯ ಪೌರತ್ವ ತೊರೆದ ಆಕೆ ಪಾಕಿಸ್ತಾನಿ ಪೌರತ್ವ ಪಡೆದುಕೊಂಡರು. ಇದೀಗ ಹಸೀನಾ ಬೆನ್ ತನ್ನ ಗಂಡನನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಮತ್ತೆ ಅವರು ಭಾರತಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿ ಎರಡು ವರ್ಷಗಳ ಹಿಂದೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಪರಿಶೀಲನೆ ನಡೆಸಿದ ಸಂಬಂಧ ಪಟ್ಟ ಇಲಾಖೆಗಳು ಹಸೀನಾ ಅವರಿಗೆ ಭಾರತೀಯ ಪೌರತ್ವ ನೀಡಲು ಹಸಿರು ನಿಶಾನೆ ತೋರಿದೆ.

ಗುಜರಾತ್ ನ ದ್ವಾರಕಾ ಜಿಲ್ಲಾಧಿಕಾರಿ ಡಾ. ನರೇಂದ್ರ ಕುಮಾರ್ ಮೀನಾ ಭಾರತೀಯ ಪೌರತ್ವ ನೀಡಿರುವ ಕುರಿತಂತೆ ಅಧಿಕೃತವಾಗಿ ತಿಳಿಸಿದ್ದಾರೆ. ಜೊತೆಗೆ ಹಸೀನಾ ಬೆನ್ ಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ನೀಡುತ್ತಿರುವ ಫೋಟೋ ಕೂಡಾ ಹಂಚಿಕೊಂಡಿದ್ದಾರೆ.

ಈಗ ಹೇಳಿ ಭಾರತೀಯ ಮುಸ್ಲಿಂಮರಿಗೆ ಪೌರತ್ವ ಕಾಯ್ದೆಯಿಂದ ಆತಂಕವಿದೆ ಎಂದು. ಖಂಡಿತಾ ಇಲ್ಲ ಪೌರತ್ವ ಕಾಯ್ದೆ ಶಾಪವಾಗೋದು ಭಾರತಕ್ಕೆ ಅಕ್ರಮವಾಗಿ ವಲಸೆ ಬಂದವರಿಗೆ ಮಾತ್ರ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: