ಎಲ್ಲಾ ಫಿಲ್ಮಂ ಸ್ಟೋರಿಯನ್ನು ಮೀರಿಸುವಂತಿದೆ ಶ್ರೀಮುರಳಿಯ ಲವ್ ಸ್ಟೋರಿ…

ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮ, ಪ್ಯಾರ್, ಇಸ್ಕ್, ಮೊಹಬ್ಬತ್, ಲವ್ ಇವೆಲ್ಲಾ ಮಾಮೂಲಿ. ಆದರೆ ನಮ್ಮ ರೋರಿಂಗ್ ಸ್ಟಾರ್ ಖ್ಯಾತಿಯ ಶ್ರೀಮುರಳಿಯ ಲವ್ ಸ್ಟೋರಿ ಸ್ವಲ್ಪ ಅಲ್ಲ ಫುಲ್ ಢಿಪರೆಂಟ್.

10ನೇ ತರಗತಿಯನ್ನು ಹೇಗೋ ಮುಗಿಸಿದ ಮುರಳಿ ಪಿಯುಸಿಗೆ ಎಂಟ್ರಿ ಕೊಟ್ರು. ಮೊದಲೇ ಪಾಠ ಕೇಳುವುದೆಂದರೆ ಅಲರ್ಜಿ. ಕಷ್ಟ ಪಟ್ಟು ಫಸ್ಟ್ ಪಿ ಯು ಸಿ ಮುಗಿಸಿ ದ್ವೀತಿಯ ಪಿಯುಸಿಗೆ ಎಂಟ್ರಿಯಾಗಿದ್ದಾರೆ.

ಎರಡನೇ ವರ್ಷಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಕಾಲೇಜ್ ನಲ್ಲಿ ಒಬ್ಬಳು ಪ್ರೀಯತಮೆ ಇದ್ದರೆ ಚಂದ ಅಂತ ಅನ್ನಿಸಿತೊಡಗಿದೆ.

ಹಾಗೇ ನೋಡಿದರೆ ಶ್ರೀಮುರಳಿಯ ಪರ್ಸನಾಲಿಟಿಗೆ ಹುಡುಗಿಯರು ಪ್ರೀತಿಸಲು ರೆಡಿ ಇದ್ರು. ಆದರೆ ಮುರಳಿ ಇಷ್ಟವಾಗಬೇಕಲ್ವ.

ಗರ್ಲ್ ಫ್ರೆಂಡ್ ಇಲ್ಲವಲ್ಲಾ ಅನ್ನುವ ಫೀಲಿಂಗ್ಸ್ ನಲ್ಲೇ ದ್ವಿತಿಯ ಪಿ ಯು ಸಿಗೆ ಎಂಟ್ರಿ ಆಗಿದ್ದ ಮುರಳಿಗೆ ಕಾಲೇಜಿಗೆ ಕಾಲಿಟ್ಟ ಮೊದಲ ದಿನವೇ ಶ್ರೀಮುರಳಿ ಕಣ್ಣಿಗೆ ಒಬ್ಬಳು ಸುಂದರಿ ಕಂಡಿದ್ದಾಳೆ.

ಮೆಟ್ಟಿಲುಗಳನ್ನು ಇಳಿದು ಕೆಳಗೆ ಬರುತ್ತಿದ್ದ ಆಕೆಯನ್ನು ನೋಡಿದ ರೋರಿಂಗ್ ಸ್ಟಾರ್ ಗೆ ಲವ್ ಅಟ್ ಫಸ್ಟ್ ಆಗಿದೆ. ಅಲ್ಲೆ ಆ ಕ್ಷಣವೆ ಮದುವೆ ಆದ್ರೆ ಇವಳನ್ನೇ ಎಂದು ನಿರ್ಧರಿಸಿದ್ದಾರೆ. ಅಂದ ಹಾಗೇ ಅವತ್ತು ಶ್ರೀಮುರಳಿಯ ಹೃದಯಕ್ಕೆ ಲಗ್ಗೆ ಇಟ್ಟಿದ್ದು ಶ್ರೀವಿದ್ಯಾ.

ಹೀಗೆ one way ಲವ್ ಶುರುವಿಟ್ಟುಕೊಂಡಿದ್ದ ಮುರಳಿ, ಶ್ರೀವಿದ್ಯಾ ಅವರಿಗೆ ಪ್ರೀತಿಸುತ್ತಿರುವ ವಿಚಾರ ಹೇಳಲು ಅನೇಕ ತಿಂಗಳು ಅಲೆದಾಡಿದ್ದರು.

ಸರಿ ಇನ್ನು ಕಾಲ ಸವೆಸುವುದರಲ್ಲಿ ಅರ್ಥವಿಲ್ಲ ಎಂದು ನಿರ್ಧರಿಸಿದ ಮುರಳಿ ಕೊನೆಗೂ ಶ್ರೀವಿದ್ಯಾ ಅವರನ್ನು ಮಾತನಾಡಿಸಲೇಬೇಕು ಎಂದು ನಿರ್ಧರಿಸಿದರು. ಶ್ರೀವಿದ್ಯಾ ಕ್ಯಾಂಟೀನ್ ನಲ್ಲಿದ್ದಾರೆ ಅನ್ನುವ ಮಾಹಿತಿ ಸಂಗ್ರಹಿಸಿ ಅಲ್ಲೇ ಹೋಗಿ ಶ್ರೀವಿದ್ಯಾ ಬಳಿ ಹೋಗಿ ಪರಿಚಯ ಮಾಡಿಕೊಂಡಿದ್ದಾರೆ. ಆದ್ರೆ ಮುರಳಿ ಮಾತಿಗೆ ಶ್ರೀವಿದ್ಯಾ ಕಡೆಯಿಂದ ಸಿಕ್ಕಿದ್ದು ತಿರಸ್ಕಾರದ ನೋಟ. ಆ ಕಡೆಯಿಂದ ಸರಿಯಾಗಿ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಸಿಟ್ಟಿಗೆದ್ದ ಮುರಳಿ ಇಡೀ ಕಾಲೇಜಿಗೆ ಪ್ರೀತಿ ವಿಚಾರ ಹೇಳಿದ್ದಾರೆ.

ಆದರೂ ಶ್ರೀವಿದ್ಯಾ ಮುರಳಿಯನ್ನು ಸತಾಯಿಸುತ್ತಿದ್ದರೆ ಹೊರತು ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಹೀಗಾಗಿ 1999 ಡಿಸೆಂಬರ್ 30ರಂದು ನೇರವಾಗಿ ಶ್ರೀವಿದ್ಯಾ ಮನೆ ಬಳಿ ಹೋದ ಮುರಳಿ ಮದುವೆ ಆಗ್ತೀಯಾ ಎಂದು ಕೇಳಿದ್ದಾರೆ.

ಇನ್ನೇನು ಹೊಸ ವರ್ಷಕ್ಕೆ ಕೆಲವೆ ಕ್ಷಣಗಳು ಬಾಕಿ ಇದ್ದ ಕಾರಣ ರಾತ್ರಿ ಫೋನ್ ಮಾಡಿದ್ರೆ ರಿಸೀವ್ ಮಾಡಿ ಮಾತನಾಡಬೇಕು. ಮಾತನಾಡಿದ್ರೆ ಪ್ರೀತಿ ಒಪ್ಪಿಕೊಂಡಹಾಗೆ ಅಂತ ಕಂಡೀಶನ್ ಹಾಕಿ ಹೋರಟು ಹೋಗಿದ್ರಂತೆ.

ಹೊಸ ವರ್ಷಾಚರಣೆಯ ಸಂತಸದಲ್ಲಿ ರಾತ್ರಿ 12 ಗಂಟೆಗೆ ಫೋನ್ ಮಾಡಿದ ಮುರಳಿಗೆ ಪ್ರೀತಿಸಿದ ಹುಡುಗಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು.

ಪ್ರೀತಿಯ ಪಯಣವೇನೋ ಶುರುವಾಯ್ತು. ಮದುವೆ ಮನೆಯವರಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಮನೆಯವರು ಪ್ರೀತಿಯನ್ನೇ ಒಪ್ಪಿಕೊಂಡಿಲ್ಲ. ಇನ್ನು ಮದುವೆಯ ಮಾತು ಎಲ್ಲಿ.

ಹೇಗಾದ್ರೂ ಮನೆಯವರನ್ನು ಒಪ್ಪಿಸಲೇಬೇಕು ಎಂದು ನಿರ್ಧರಿಸಿದ ಮುರಳಿ ತಮ್ಮ ಮನೆಯಲ್ಲಿ ಆಯೋಜಿಸಲಾಗಿದ್ದ ಪೂಜೆಯೊಂದಕ್ಕೆ ವಿದ್ಯಾ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅವತ್ತು ವಿದ್ಯಾ ಅವರನ್ನು ನೋಡಿದ ಮನೆಯವರು ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಒಕೆ ಅಂದಿದ್ದಾರೆ.

ಸುಮಾರು 9 ವರ್ಷದ ಪ್ರೀತಿಯ ನಂತರ 2008ರಲ್ಲಿ ಶ್ರೀಮುರಳಿ ಮತ್ತು ವಿದ್ಯಾ ಹಸೆಮಣೆ ಏರಿದ್ರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: