ಸೌತ್ ಆಫ್ರಿಕಾ ಕಡಲ ಕಿನಾರೆಯಲ್ಲಿ ಕನ್ನಡದ ರಾಕ್ ಸ್ಟಾರ್ ರೇಮೊ ಅಬ್ಬರ

ನಿರ್ದೇಶಕ ಪವನ್​ ಒಡೆಯರ್ ಲವ್ ಸ್ಟೋರಿ ಸಿನಿಮಾಗೆ ಲವ್ ಗುರು ಇದ್ದಂತೆ. ಪವನ್​ ನಿರ್ದೇಶನದ ಯಾವುದೇ ಚಿತ್ರವಾದ್ರೂ ಮನಸ್ಸಿಗೆ ಮುದ ನೀಡುವ ನವಿರಾದ ಪ್ರೀತಿಯ ಕಥೆ ಇರುತ್ತದೆ.

ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ‘ಗೂಗ್ಲಿ’ ಈ ತಲೆಮಾರಿನ ಲವ್ ​ಸ್ಟೋರಿಗೆ ಓಂಕಾರ ಬರೆದ ಚಿತ್ರವದು. ಗೂಗ್ಲಿ ಬಾಕ್ಸ್​ ಆಫೀಸ್​ ನಲ್ಲಿ ಕಿಂಗ್ ಆದ ಚಿತ್ರವದು. ನಂತ್ರ ಪವನ್​ ಒಡೆಯರ್​ ಹಾರರ್​, ಆ್ಯಕ್ಷನ್​, ಕಾಮಿಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಇದೀಗ ಹಳೆಯ ಗತ್ತಿನೊಂದಿಗೆ ‘ರೇಮೊ’ದಲ್ಲಿ ಕಂಬ್ಯಾಕ್ ಮಾಡುತ್ತಿದ್ದಾರೆ.

ನಿರ್ಮಾಪಕ  ಸಿ.ಆರ್ ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ಹಾಗೂ ಅಶಿಕಾ ಒಟ್ಟಿಗೆ ನಟಿಸ್ತಿರೋ ‘ರೇಮೊ’ ಶೂಟಿಂಗ್​ ಇದೀಗ ಭರದಿಂದ ಸಾಗುತ್ತಿದೆ. ಸದ್ಯ ರೇಮೊ ಟೀಂ ಸೌತ್​ ಆಫ್ರಿಕಾದಲ್ಲಿ ಬೀಡು ಬಿಟ್ಟಿದ್ದು,  ಜೋಹನ್ಸ್​ಬರ್ಗ್​, ಡರ್ಬನ್​, ಕೇಪ್​ಟೌನ್​ನಲ್ಲಿ ಶೂಟಿಂಗ್ ನಡೆಸ್ತಿದೆ. ಆಫ್ರಿಕಾ ಮಂದಿಯ ಬಾಯಲ್ಲೂ ‘ರೇಮೊ’ ಹೆಸ ಕೇಳಿಸುತ್ತಿದೆ ಅಂದ್ರೆ ಊಹಿಸಿಕೊಳ್ಳಿ.

ಬರೀ ಆಫ್ರಿಕಾವಲ್ಲ ಸಿನಿಮಾದ ಫಸ್ಟ್​ ಹಾಫ್​ ಶೂಟಿಂಗ್​ ಹತ್ತಾರು ದೇಶಗಳಲ್ಲಿ ನಡೆಯಲಿದೆ. ಹಾಡು ಹಾಗೂ ಆ್ಯಕ್ಷನ್​ ಸೀಕ್ವೆನ್ಸ್​ ಚಿತ್ರೀಕರಣವೂ ನಡೀತಿದೆ. ಅದ್ರ ಎಕ್ಸ್ ಕ್ಲೋಸೀವ್ ಝಲಕ್ ನ ಚಿತ್ರತಂಡ ರಿಲೀಸ್ ಮಾಡಿದೆ.

ಇನ್ನು ಸಹೋದರನ ಸಿನಿಮಾವಾಗಿರುವ ಕಾರಣದಿಂದ ಸಿ ಆರ್ ಮನೋಹರ್ ದೊಡ್ಡ ಮೊತ್ತದಲ್ಲೇ ಸಿನಿಮಾ ನಿರ್ಮಿಸುತ್ತಿದ್ದಾರೆ.

ಇನ್ನು ರೇಮೊ ಬಗ್ಗೆ ನಿರ್ದೇಶಕ ಪವನ್​ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಸಿನಿಮಾದ ಮೇಕಿಂಗ್ ರಿಚ್ ಆಗಿ ಬರ್ತಿದೆ. ರಿಚ್ ಸಿನಿಮಾದ ಅನ್ನೋದಲ್ಲೆ ನಮ್ಮ ಸಿನಿಮಾ ಬೆಸ್ಟ್ ಎಕ್ಸಾಂಪಲ್ ಆಗಲಿದೆ. ಯಾಕೆಂದ್ರೆ ರಿಚ್ ಮೇಕಿಂಗ್ ಜೊತೆಗೆ, ರಿಚ್​ ಕಥೆ ಸಿನಿಮಾದಲ್ಲಿದೆ.

ಆಶಿಕಾ – ಇಶಾನ್​​ ಜೋಡಿ ತುಂಬಾನೇ ಫ್ರೆಶ್​ ಆಗಿದ್ದು, ಈ ಜೋಡಿ ದೊಡ್ಡ ಮ್ಯಾಜಿಕ್ ಮಾಡಲಿದೆ. ಇಶಾನ್​ ಪ್ರಾಮಿಸಿಂಗ್ ಸ್ಟಾರ್​ ಆಗಿ ನಿಲ್ತಾರೆ. ನಿರ್ಮಾಪಕ ಸಿ.ಆರ್​.ಮನೋಹರ ಸಿನಿಮಾಗೆ ಸಿಕ್ಕಾಪಟ್ಟೆ ಬಂಡವಾಳ ಹೂಡುತ್ತಿದ್ದಾರೆ. ಸಹೋದರ ಇಶಾನ್​ ಸಿನಿಮಾವಾದ್ರಿಂದ ಮನೋಹರ್ ಪ್ರತಿ ಶೂಟಿಂಗ್​ನಲ್ಲೂ ಜೊತೆಯಲ್ಲಿ ನಿಲ್ತಾರೆ’ ಅಂದಿದ್ದಾರೆ.

 ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದ್ದು ಚಿತ್ರತಂಡ ಕೆಲವೇ ದಿನಗಳಲ್ಲಿ ಕರ್ನಾಟಕಕ್ಕೆ ಮರಳಲಿದೆ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: