Hands UP​… ಇದು ಚರಿತ್ರೆ ಸೃಷ್ಟಿಸೋ ಅವತಾರ..!

‘ಸಿಂಪಲ್​ ಸ್ಟಾರ್’​ ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಭಾರತೀಯ ಚಿತ್ರರಂಗದ ಮತ್ತೊಂದು ಮಾಸ್ಟರ್ ಪೀಸ್ ಆಗೋದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ‘ಶ್ರೀಮನ್ನಾರಾಯಣ’ನ ಚಿತ್ರದ ತುಣುಕುಗಳನ್ನು ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೊಂದು ಫ್ಯಾಂಟಸಿ ಅಡ್ವೆಂಚರ್ ಕಾಮಿಡಿ ಚಿತ್ರವಾಗಿದ್ರೂ, ನವರಸಗಳು ತುಂಬಿರೋ ಪರ್ಫೆಕ್ಟ್​ ಎಂಟರ್ಟೈನರ್ ಸಿನಿಮಾ. ಟೀಸರ್​, ಟ್ರೈಲರ್​ನಿಂದಲೇ ಈಗಾಗಲೇ ಸಿನಿರಸಿಕರ ಎದೆಯಲ್ಲಿ ಕಿಚ್ಚು ಹಚ್ಚಿದೆ. ಇದೀಗ ಹಾಡಿನಿಂದ​ ಹ್ಯಾಂಡ್ಸಪ್​ ಅಂತಾ ಗುಂಡಿಗೆಗೆ ಗುಂಡು ಹೊಡೆಯೋಕೆ ಬಂದಿದೆ.

ತ್ರಿಮೂರ್ತಿಗಳ ಸೆನ್ಸೇಷನಲ್​ ಕಾಂಬಿನೇಷನ್

ರಕ್ಷಿತ್ ಶೆಟ್ಟಿ, ವಿಜಯ್ ಪ್ರಕಾಶ್,- ಅಜನೀಶ್​ ಲೋಕನಾಥ್​ ಮೂವರದ್ದು ಸೆನ್ಸೇಷನಲ್​ ಕಾಂಬಿನೇಷನ್​. ಮೂವರು ಒಟ್ಟಿಗೆ ಬಂದ್ರು ಅಂದ್ಮೇಲೆ ಸಂಥಿಂಗ್ ಸ್ಪೆಷಲ್ ಇರಲೇಬೇಕು.

ಈ ಮಾತನ್ನು ಮತ್ತೊಮ್ಮೆ ‘ಅವನೇ ಶ್ರೀ ಮನ್ನಾರಾಯಣ’ ಫಸ್ಟ್​ ಹಾಡು ನಿಜವಾಗಿಸಿದೆ. ‘ಹ್ಯಾಂಡ್ಸಪ್​…’  ಹಾಡು ತುಂಬಾನೇ ಕ್ಲಾಸಿಯಾಗಿ ಮೂಡಿಬಂದಿದ್ದು,ಹಾಡಿನ ಜೊತೆಗೆ ಕಥೆಯ ಒಂದಷ್ಟು ಎಳೆಯನ್ನು ಬಿಚ್ಚಿಟ್ಟಿದೆ.

ಈಗಾಗಲೇ ಹಾಡಿಗೆ ಒಳ್ಳೆಯ ರಿವ್ಯೂವ್ಸ್ ಸಿಗೋಕೆ ಪ್ರಾರಂಭವಾಗಿದ್ದು, ‘ಕನ್ನಡ ಸಾಹಿತ್ಯಕ್ಕೆ ಯಾವತ್ತೂ ಸೋಲಿಲ್ಲ ಅನ್ನುವುದನ್ನು ನಿರೂಪಿಸಿದೆ.

ಇನ್ನು ಕಮೆಂಟ್ ಬಾಕ್ಸ್ ಗೆ ಹರಿದು ಬರುತ್ತಿರುವ ಕಾಮೆಂಟ್ ಗಳನ್ನು ನೋಡಿದ್ರೆ ಇದು ಚರಿತ್ರೆ ಸೃಷ್ಟಿಸೊ ಅವತಾರ ಅನ್ನುವುದನ್ನು ವೀಕ್ಷಕರೇ ಒಪ್ಪಿಕೊಂಡಿದ್ದಾರೆ.

ಒಟ್ಟಿನಲ್ಲಿ ಈ ಮೂಲಕ ಹಾಡಿನಲ್ಲೂ ‘ಅವನೇ ಶ್ರೀಮನ್ನಾರಾಯಣ’ ಜಪ ಮುಂದುವರಿಯುವಂತೆ ಮಾಡಿದ ಹಿರಿಮೆ ರಕ್ಷಿತ್ ಮತ್ತು ತಂಡದ್ದು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: