Advertisements

KPL ಮ್ಯಾಚ್ ಫಿಕ್ಸಿಂಗ್ ನ ಹನಿಟ್ರ್ಯಾಪ್ ನಲ್ಲಿ ಸಿಕ್ಕಿ ಹಾಕಿಕೊಂಡ ಸ್ಯಾಂಡಲ್‍ವುಡ್ ನಟಿಯರು ಯಾರು ಗೊತ್ತಾ…?

ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತರಾಗಿರುವ ಕ್ರಿಕೆಟಿಗರ ಜೊತೆ ಚಲನಚಿತ್ರರಂಗದ ಕೆಲ ನಟ-ನಟಿಯರು ಸಂಪರ್ಕ ದಲ್ಲಿರುವುದು ಕಂಡುಬಂದಿದ್ದು, ಅವರನ್ನೂ ವಿಚಾರಣೆಗೊಳಪಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಭಾಸ್ಕರರಾವ್ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಮ್ಯಾಚ್ ಬಳಿಕ ನಡೆಯುವ ಪಾರ್ಟಿಯಲ್ಲಿ ಚಲನಚಿತ್ರರಂಗದ ಕೆಲ ನಟ-ನಟಿಯರು ಭಾಗವಹಿಸಿದ್ದಾರೆ. ಈ ಮೂಲಕ ಆಟಗಾರರು ಹಾಗೂ ಆಡಳಿತ ಮಂಡಳಿಯ ಜೊತೆ ಸಿನಿಮಾ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ಅವರಿಗೆಲ್ಲ ಹಣದ ಮೂಲ ಹೇಗೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ.

ಎರಡು ಸಿನಿಮಾ ಮಾಡಿದ ತಕ್ಷಣ ಅಷ್ಟೊಂದು ಹಣ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಭಾಸ್ಕರರಾವ್ ಅವರು, ಕ್ರಿಕೆಟಿಗರ ಜೊತೆ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿರುವ ನಟ-ನಟಿಯರನ್ನು ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಹನಿ ಟ್ರ್ಯಾಪ್‍ನಲ್ಲಿ ಸಿಲುಕಿರುವ ಮೊದಲ ನಟಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದಳು. 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದ ಈಕೆ ಕರ್ನಾಟಕದವಳಲ್ಲ. ಹಲವು ನಿರ್ಮಾಪಕರ ಜೊತೆ ನಂಟು ಹೊಂದಿದ ಈಕೆಗೆ ಇತ್ತೀಚೆಗೆ ಅವಕಾಶಗಳ ಕೊರತೆ ಇತ್ತು.

ಎರಡನೇ ನಟಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ನಾಯಕಿ ಜೊತೆಗೆ ಸಹ ನಟಿಯಾಗಿ ನಟಿಸಿರುವ ಈಕೆಯ ಮೂಲ ಕರ್ನಾಟಕ. ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ಕಾಣಿಸಿಕೊಂರುವ ಈಕೆಗೆ ಬಹಳ ಬೇಡಿಕೆ ಇತ್ತು.

ಇನ್ನು ಮೂರನೇಯ ನಟಿ ಹಸಿ ಬಿಸಿ ದೃಶ್ಯಗಳಿಗೆ ಸಿಕ್ಕಾಪಟ್ಟೆ ಹೆಸರು ವಾಸಿ. ಬಹುಭಾಷಾ ನಟಿಯಾಗಿರು ಈಕೆ ಉದ್ಯಮಿಗಳು, ಅಧಿಕಾರಿಗಳಿಗೆ ಸಿಕ್ಕಾಪಟ್ಟೆ ಕ್ಲೋಸ್. ಇನ್ನು ಈ ನಟಿ ಹಿಂದೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಳು.

Advertisements

Leave a Reply

%d bloggers like this: