Peruser!!! It is a trendy supermarket: read articles on day to day basis in English & Kannada. Read,Share & Care
ಚಂದ್ರಯಾನ-2 ಯೋಜನೆ ನಿರೀಕ್ಷಿತ ಗುರಿ ತಲುಪದಿರುವ ಹಿನ್ನಲೆಯಲ್ಲಿ ಚಂದ್ರಯಾನ 3 ನ್ನು ಯಶಸ್ವಿಗೊಳಿಸಲೇಬೇಕು ಎಂದು ಇಸ್ರೋ ಪಣ ತೊಟ್ಟಿದೆ. ಈ ಹಿನ್ನಲೆಯಲ್ಲಿ ಹಳೆಯ ತಪ್ಪುಗಳು ಮರು ಕಳಿಸದಂತೆ ವಿಜ್ಞಾನಿಗಳು ಎಚ್ಚರಿಕೆ ವಹಿಸಿದ್ದಾರೆ. ಹೀಗಾಗಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಲು ತಜ್ಞರುಗಳ ಸಮಿತಿ, ಸಂಘಟನೆಗಳು ಮತ್ತು ಹಿರಿಯ ವಿಜ್ಞಾನಿಗಳು ಸತತ ಕೆಲಸ ಮಾಡುತ್ತಿದ್ದಾರೆ.
ಚಂದ್ರನ ಶೋಧನೆ ಕಾರ್ಯಾಚರಣೆಗೆ ಇಸ್ರೊ ನೀಲನಕ್ಷೆ ತಯಾರಿಸಿದ್ದು ಅದಕ್ಕಾಗಿ ಅಗತ್ಯ ತಂತ್ರಜ್ಞಾನಗಳನ್ನು ರಚಿಸುತ್ತಿದೆ. ಈ ನೀಲನಕ್ಷೆಯನ್ನು ಅಂತರಿಕ್ಷ ಆಯೋಗಕ್ಕೆ ಸಲ್ಲಿಸಲಾಗಿದೆ. ಅಂತಿಮ ವಿಶ್ಲೇಷಣೆ ಮತ್ತು ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮುಂದಿನ ಚಂದ್ರನ ಪರಿಶೋಧನೆ ಕಾರ್ಯಾಚರಣೆಗೆ ಕೆಲಸ ಮುಂದುವರಿಯುತ್ತಿದೆ ಎಂದು ಅಣುಶಕ್ತಿ ಮತ್ತು ಅಂತರಿಕ್ಷ ಕೇಂದ್ರ ಇಲಾಖೆಯ ರಾಜ್ಯ ಇಲಾಖೆ ಸಚಿವ ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ನಿನ್ನೆ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.