50 ದಿನ ಪೂರೈಸಿದ ಸಂಭ್ರಮದಲ್ಲಿ ಮಹಾಮನೆ : ಕನ್ನಡಿಗರ ಮನ ಗೆದ್ದ ಕಿಶನ್

ಪ್ರತಿ ವರ್ಷದಂತೆ ಈ ವರ್ಷವೂ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ವೀಕ್ಷಕರ ಮನ ಗೆದ್ದಿದೆ.

7ನೇ ಸೀಸನ್ ಇದೀಗ 50 ದಿನಗಳನ್ನು ಪೂರೈಸಿದ್ದು, ಒಂದೇ ಮನೆಯಲ್ಲಿ ಸೇರಿರುವ ಸೆಲೆಬ್ರಿಟಿಗಳು ಟಾಸ್ಕ್ ಗಳನ್ನು ಎದುರಿಸುತ್ತಿದ್ದು ನಾನೇ ಗೆಲ್ಲಬೇಕು ಅನ್ನೋ ಛಲದೊಂದಿಗೆ ಪರಿಶ್ರಮ ಹಾಕುತ್ತಿದ್ದಾರೆ.

ಕಳೆದ 7 ವಾರಗಳಲ್ಲಿ ಎಲಿಮಿನೇಷನ್ ಆದವರು, ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಮತ್ತೆ ಮನೆಗೆ ಬಂದವರನ್ನು ಸೇರಿಸಿದರೆ ಸದ್ಯ 13 ಮಂದಿ ಮಹಾಮನೆಯಲ್ಲಿದ್ದಾರೆ.

ನಿನ್ನೆಯಷ್ಟೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಯೊಳಗೆ ಬಂದಿದ್ದ ಆರ್ ಜೆ ಪೃಥ್ವಿ ಮನೆಯಿಂದ ಮನೆಯಿಂದ ಹೊರಬಂದಿದ್ದಾರೆ. ನಾಮಿನೇಟ್ ಆಗಿ ಹೊರಬಂದು ಮತ್ತೆ ಬಿಗ್ ಮನೆಯಲ್ಲಿ ಮರುಜನ್ಮ ಪಡೆದಿರುವ ಚೈತ್ರಾ ಕೋಟೂರ್ ಅವರನ್ನು ಮುಂದಿನ ವಾರಕ್ಕೆ ನೇರ ನಾಮಿನೇಟ್ ಮಾಡಿದ್ದಾರೆ ಪೃಥ್ವಿ.

ಈವರೆಗಿನ 50 ದಿನಗಳಲ್ಲಿ ಅದ್ಭುತವೆನಿಸುವ, ಅತ್ಯಮೂಲ್ಯ ಎನಿಸುವ, ಎಮೋಷನಲ್ ಎನಿಸುವ ಕ್ಷಣಗಳು ಯಾವುದು ಅಂತ ನೋಡಲು ಹೋದ್ರೆ ನಮಗೆ ನೆನಪಾಗುವುದು, ಕಿಶನ್. ಇನ್ನು ಮುಂದಿನ ಸೀಸನ್  ಪ್ರಸಾರವಾಗುವಾಗಲೂ ನೆನಪಿನಲ್ಲಿಟ್ಟುಕೊಳ್ಳುವಂತಹ ಸ್ಪರ್ಧಿ ಅಂದ್ರೆ ಅದು ಕಿಶನ್. ಡ್ಯಾನ್ಸರ್ ಕೊರಿಯೋಗ್ರಾಫರ್ ಆಗಿರುವ ಕಿಶನ್ ಆಟ ಇದೀಗ ಕನ್ನಡಿಗರ ಮನ ಗೆದ್ದಿದೆ.

ಆವರ ಆಟ ಮತ್ತು ನಡವಳಿಕೆ ಜನರಿಗೆ ಇಷ್ಟವಾಗಿದ್ದು, ವೀಕ್ಷಕರು ಅವರನ್ನು ಮನೆಯೊಳಗೆ ನೋಡಲು ಬಯಸುತ್ತಿದ್ದಾರೆ. ಹೀಗಾಗಿ ಮನೆ ಮಂದಿಯೆಲ್ಲಾ ನಾಮಿನೇಷನ್ ಮಾಡಿದ್ರು ವೀಕ್ಷಕರು ಅವರ ರಕ್ಷಣೆಗೆ ಧಾವಿಸುತ್ತಿದ್ದಾರೆ.

ಹೌದು,  ಹೀಗೆ ಕೆಲ ದಿನಗಳ ಹಿಂದೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದರಂತೆ ಸ್ಪರ್ಧಿಗಳು ತಾವು ಯಾರ ಬಳಿಯಾದ್ರೂ ಕ್ಷಮೆಯಾಚಿಸಬೇಕು ಅಂದ್ರೆ ಕೇಳಬಹುದು ಅನ್ನುವುದು ಆ ಟಾಸ್ಕ್ ಆಗಿತ್ತು. ಅದರಂತೆ ತಮ್ಮ ಜೀವನದಲ್ಲಾದ ಕೆಲ ಘಟನೆಗಳನ್ನು ಮೆಲುಕು ಹಾಕುತ್ತಾ ಎಲ್ಲ ಸ್ಪರ್ಧಿಗಳೂ ಒಬ್ಬೊಬ್ಬರ ಬಳಿ ಕ್ಷಮೆ ಕೇಳಿದ್ರು. ಆದ್ರೆ ಕಿಶನ್ ಅವ್ರ ಅಂದಿನ ಮಾತು, ಮೌನ, ಡ್ಯಾನ್ಸ್ ಎಲ್ಲವೂ ಸ್ಪರ್ಧಿಗಳಷ್ಟೇ ಅಲ್ಲ, ನೋಡುಗರ ಕಣ್ಣಲ್ಲೂ ನೀರು ತರಿಸಿತ್ತು.

ತಾಯಿಯ ಬಳಿ ಕ್ಷಮೆ ಕೇಳಿದ್ದೇಕೆ ಕಿಶನ್ ?

ಕಿಶನ್. ಒಬ್ಬ ಪ್ರತಿಭಾನ್ವಿತ ಯುವಕ. ತಮ್ಮ ಡ್ಯಾನ್ಸ್ ನಿಂದ ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ಮನೆ ಮಾತಾಗಿರುವ ಹುಡುಗ. ಆದ್ರೂ ಅವ್ರ ಬಗ್ಗೆ ಹೆಚ್ಚು ಜನರಿಗೆ ಹೆಚ್ಚು ತಿಳಿದಿರಲಿಲ್ಲ.  ಆದ್ರೆ ಅಂದಿನ ಕಿಶನ್ ತಮ್ಮ ಮನಸ್ಸನ್ನು ಬಿಚ್ಚಿಟ್ಟಿದ್ದರು. ತಮ್ಮ ತಾಯಿಯನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು. ಡ್ಯಾನ್ಸ್ ಮಾಡುವ ಅರ್ಧದಲ್ಲೇ ಭಾವೋದ್ವೇಗಕ್ಕೆ ಒಳಗಾಗಿ ಅಳುತ್ತಾ ಕುಳಿತುಬಿಟ್ಟಿದ್ದರು. ನಂತರ ಎಲ್ಲ ಸ್ಪರ್ಧಿಗಳೂ ಅವ್ರನ್ನು ಮತ್ತೆ ಹುರಿದುಂಬಿಸಿದ್ರು. ಆ ದಿನವೇ ಕಿಶನ್ ಅಂದ್ರೆ ಏನು ಅನ್ನುವುದು ಎಲ್ಲರಿಗೂ ಅರಿವಾಗಿತ್ತು.

 ಅಂದು ತನ್ನ ನಗುಮುಖದ ಹಿಂದಿನ ನೋವಿನ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಕಿಶನ್ ತಾನು ಮೂರು ತಿಂಗಳ ಮಗುವಾಗಿದ್ದಾಗಲೇ ತಾಯಿ ಅವಘಡಕ್ಕೆ ಗುರಿಯಾಗಿದ್ದರು. ಇದರಿಂದ ಕಿಶನ್ ತಾಯಿಯ ದೇಹದ ಅರ್ಧ ಭಾಗ ಸುಟ್ಟಿತ್ತು. ಮೊದಲು ಹೇಗಿದ್ದೆ, ಈಗ ಹೀಗಾದೆನಲ್ಲಾ ಅನ್ನೋ ನೋವಿನಲ್ಲೇ ಅವರ ತಾಯಿ ಮದ್ಯಪಾನ ಮಾಡತೊಡಗಿದ್ರಂತೆ. ಆ ಬಳಿಕ ಕಿಶನ್ ಸಹ ಮುಂಬೈಗೆ ಹೋದ ಕಾರಣ, ತಾಯಿಯ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ಒಮ್ಮೆ ಕರೆ ಮಾಡಿದ್ದಾಗ ಅವ್ರ ತಾಯಿ ಕಿನ್ ಗೆ ಬಟ್ಟೆ ತಗೋ ದುಡ್ಡು ಕಳಿಸ್ತೀನಿ ಅಂದಿದ್ರಂತೆ, ಅದಾದ ಮಾರನೆಯ ದಿನವೇ ಕಿಶನ್ ತಾಯಿ ವಿಧಿವಶರಾದ ಸುದ್ದಿ ಬಂದಿತ್ತಂತೆ.

ಐ ಯಾಮ್ ಸಾರಿ ಅಮ್ಮಾ..

ತಮ್ಮ ತಾಯಿ ಹೇಗೆಲ್ಲಾ ಮಾನಸಿಕ ಯಾತನೆ ಪಡುತ್ತಿದ್ದರು, ನೊಂದಿದ್ದರು ಎಂಬುದನ್ನು ಅರಿಯದೇ ಆಗ ನಾನು ಅವರಿಗೆ ಹೆಚ್ಚು ಸಮಯ ಕೊಡುತ್ತಿರಲಿಲ್ಲ. ಆದ್ರೆ ಈಗ ಅವ್ರು ನನ್ನ ಜೊತೆಯಿಲ್ಲ. ಆದ್ರೆ ಅವ್ರ ಆಶೀರ್ವಾದ ನನ್ನ ಬಳಿ ಕೊನೆವರೆಗೂ ಇದ್ದೇ ಇರುತ್ತೆ. ಅವ್ರು ಇದ್ದಾಗ ಅವ್ರ ಬೆಲೆ ಗೊತ್ತಾಗಲಿಲ್ಲ, ಅವ್ರೀಗ ಇಲ್ಲ… ಐ ಯಾಮ್ ಸಾರಿ ಅಮ್ಮಾ… ಎಂದು ಬಿಕ್ಕಳಿಸಿದ್ರು.

ಕಿಶನ್ ಅವರ ಡ್ಯಾನ್ಸ್  ಹಾಗೂ ನೋವಿನ ಮಾತುಗಳನ್ನು ಕೇಳಿ ಬಿಗ್ ಬಾಸ್ ಮನೆಯ ಇತರ ಅಷ್ಟೂ ಸ್ಪರ್ಧಿಗಳೂ ಕಣ್ಣೀರಾದ್ರು. ಕಿಶನ್ ಪರ್ಫಾಮೆನ್ಸ್ ಪ್ರಾರಂಭದಿಂದ ಮಾತು ಮುಗಿಸಿದ ಕ್ಷಣದವರೆಗೂ ಆ ಹತ್ತು ನಿಮಿಷಗಳ ಕಾಲ ಎಲ್ಲರ ಕಣ್ಣಂಚಿನಲ್ಲೂ ನೀರಿತ್ತು.. ಬಿಗ್ಬಾಸ್ ಮನೆಯ ಲಕ್ಕಿ ಹುಡುಗ ಎನಿಸಿಕೊಂಡಿದ್ದ ಕಿಶನ್, ಏನೂ ಕಷ್ಟಗಳಿಲ್ಲದೇ ಬೆಳೆದು ಬಂದ ಹುಡುಗ ಅಂತ ಅಂದುಕೊಂಡಿದ್ದವರಿಗೆ ಕಿಶನ್ರ ಮಾತುಗಳನ್ನು ಕೇಳಿ ಗದ್ಗದಿತರಾಗಿದ್ದರು. ಅಂದೇ ಕಿಶನ್ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಮಾತ್ರವಲ್ಲ ಪ್ರೇಕ್ಷಕರ ಹೃದಯವನ್ನೂ ಗೆದ್ದರು.

ಪ್ರತೀಯೊಂದು ಟಾಸ್ಕ್ ಗಳನ್ನು ಶ್ರದ್ಧೆಯಿಂದ ಎದುರಿಸುವ ಕಿಶನ್ ಕೇವಲ ಶಕ್ತಿ ಮಾತ್ರವಲ್ಲ ಯುಕ್ತಿಯನ್ನೂ ಪ್ರಯೋಗಿಸುತ್ತಿದ್ದಾರೆ. ಅಷ್ಟೇ ಯಾಕೆ ಜನರನ್ನು ರಂಜಿಸುವಲ್ಲೂ ಅವರ ಹಿಂದೆ ಬಿದ್ದಿಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: