Advertisements

ಕಮಲ ಪಕ್ಷದ ಪರ ಪ್ರಚಾರ ಕೈಗೊಂಡ ಕಮಲಿ

ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಅನರ್ಹಗೊಂಡ ಶಾಸಕರು ಈ ಬಾರಿ ಕಣದಲ್ಲಿರುವುದರಿಂದ ಈ ಬಾರಿ ಪೈಪೋಟಿ ಜೋರಾಗಿದೆ. ಮೂರು ಪಕ್ಷಗಳಿಗೂ ಇದು ಪ್ರತಿಷ್ಟೆಯ ಪ್ರಶ್ನೆಯಾಗಿದ್ದು ಗೆಲ್ಲವುದು ಎಲ್ಲರಿಗೂ ಅನಿವಾರ್ಯವಾಗಿದೆ.

ಈ ಕಾರಣದಿಂದ ಈ ಬಾರಿ ರಣತಂತ್ರಗಳು ಬದಲಾಗಿದ್ದು, ಅಭಿವೃದ್ಧಿ, ಮೂಲಭೂತ ಸೌಕರ್ಯದ ಹೆಸರಿನಲ್ಲಿ ನಡೆಯಬೇಕಾಗಿದ್ದ ಸ್ಪರ್ಧೆಯಲ್ಲಿ ಸೆಲೆಬ್ರೆಟಿಗಳೇ ಕಾಣಿಸಿಕೊಳ್ಳುತ್ತಿದ್ದಾರೆ.

ಅತ್ತ ಸುಧಾಕರ್ ಪರ ಹರಿಪ್ರಿಯಾ, ಹರ್ಷಿಕಾ ಪೂಣಚ್ಚ ಸೇರಿದಂತೆ ಅನೇಕ ಟಾಪ್ ಸೆಲೆಬ್ರೆಟಿಗಳು ಪ್ರಚಾರ ಕೈಗೊಂಡು ಬಂದಿದ್ದಾರೆ.

ಇದೀಗ ಕೆ ಆರ್ ಪೇಟೆ ನಾರಾಯಣಗೌಡರ ಸರದಿ.  ಕೆ.ಆರ್.ಪೇಟೆ ವಿಧಾನಸಭೆಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆಸಿ ನಾರಾಯಣಗೌಡರ ಪರ ನಟಿ ರಾಗಿಣಿ , ಅಶಿಕಾ ರಂಗನಾಥ್ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು ಪ್ರಚಾರ ಕೈಗೊಂಡಿದ್ದಾರೆ.

ವಿಶೇಷ ಅಂದ್ರೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯ ನಾಯಕಿ ಅಮೂಲ್ಯ ಗೌಡ ಕೂಡಾ ಇದೀಗ ನಾರಾಯಣಗೌಡ ಪರ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಇವರೊಂದಿಗೆ ಹಾಸ್ಯ ನಟ ಡಿಗ್ರಿ ನಾಗರಾಜು ಸೇರಿದಂತೆ ಅನೇಕ ಕಿರು ತೆರೆ ಕಲಾವಿದರು ಕೈ ಜೋಡಿಸಿದ್ದಾರೆ.

ಹಾಗಾದ್ರೆ ಸೆಲೆಬ್ರೆಟಿಗಳ ಪ್ರಚಾರಕ್ಕೆ ಜನ ಮರಳಾಗುತ್ತಾರೆಯೇ ಅನ್ನುವುದಕ್ಕೆ ಫಲಿತಾಂಶದ ತನಕ ಕಾಯಬೇಕಾಗಿದೆ.

Advertisements

Leave a Reply

%d bloggers like this: