Advertisements

ರಕ್ಷಿತ್ ಶೆಟ್ಟಿ ಕೋಟೆಗೆ ಲಗ್ಗೆ ಇಟ್ಟ ಒಳ್ಳೆ ಹುಡುಗ : ಮಾರ್ಕ್ಸ್ ಕಾರ್ಡ್ ನೋಡಿ ಹತ್ತಿರ ಸೇರಿಸಿದ್ರಂತೆ

ರಕ್ಷಿತ್ ಶೆಟ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರದ ತಯಾರಿಯಲ್ಲಿ ನಿರತರಾಗಿದ್ದಾರೆ. ಇನ್ನು ನಾಲ್ಕೈದು ದಿನಕ್ಕೆ ಚಿತ್ರದ ಟ್ರೈಲರ್ ಕೂಡಾ ಬಿಡುಗಡೆಯಾಗಲಿದೆ. ಹೀಗಾಗಿ ಕಿರಿಕ್ ಶೆಟ್ರು ಪುಲ್ ಬ್ಯುಸಿಯಾಗಿದ್ದಾರೆ.

ಈ ನಡುವೆ ಒಳ್ಳೆ ಹುಡುಗ, ಬಿಗ್ ಬಾಸ್ ಮನೆಯ ಸರ್ವಾಧಿಕಾರಿ ಪ್ರಥಮ್ ಗಾಗಿ ಟೈಮ್ ಮಾಡಿಕೊಂಡಿರುವ ರಕ್ಷಿತ್ ಶೆಟ್ಟಿ, ಪ್ರಥಮ್ ಅಭಿನಯದ ನಟ ಭಯಂಕರ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ಭಾನುವಾರ ಈ ಹಾಡು ಲಹರಿ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈಗಿರುವ ಲಕ್ಷಣ ನೋಡಿದರೆ ಹಾಡು ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.

ಸಿನಿಮಾ ಆರಂಭವಾದ ದಿನದಿಂದ ಚಿತ್ರಮಂದಿರದಲ್ಲಿ ಟೈಟಲ್ ಮೇಲೆ ಬೆಳಕು ಬೀಳುವ ತನಕ ಹೊಸತನದಿಂದ ಕೂಡಿರಬೇಕೆಂಬುದು ಪ್ರಥಮ್ ಅವರ ಯೋಚನೆ. ಅದೇ ರೀತಿಯಲ್ಲಿ ಹಂತ ಹಂತವಾಗಿ ನಟ ಭಯಂಕರ ಸದ್ದು ಮಾಡುತ್ತಿದೆ.

ಹೀಗಾಗಿ ನಟ ಭಯಂಕರ ಸಲುವಾಗಿ ಸಿಕ್ಕಾಪಟ್ಟೆ ಬೆವರು ಸುರಿಸುತ್ತಿರುವ ಪ್ರಥಮ್ ಎಲ್.ಕೆ.ಅಡ್ವಾಣಿ ಅವರಿಂದ ಚಿತ್ರಕ್ಕೆ ಕ್ಲಾಪ್ ಮಾಡಿಸಿದ್ದರು.

ರಿಯಲ್ ಸ್ಟಾರ್ ಉಪೇಂದ್ರ ಟೈಟಲ್ ಟ್ರ್ಯಾಕ್ ಹಾಡಿಸಿದ್ದ ಪ್ರಥಮ್, ಗೋಲ್ಡನ್ ಸ್ಟಾರ್ ಗಣೇಶ್ ರನ್ನು ನಟ ಭಯಂಕರ ಸೆಟ್ ಗೆ ಬರುವಂತೆ ಮಾಡಿದ್ದರು.

ಇದೀಗ ರಕ್ಷಿತ್ ಶೆಟ್ಟಿ ಕಡೆಯಿಂದ ಪ್ರಥಮ್ ಹಾಡು ಬಿಡುಗಡೆ ಮಾಡಿಸುತ್ತಿದ್ದಾರೆ. ಅದರಲ್ಲಿ ಏನು ವಿಶೇಷ ಅಂತಾ ಕೇಳಬಹುದು. ರಕ್ಷಿತ್ ಶೆಟ್ಟಿ ಬೇರೆಯವರ ಸಿನಿಮಾ ಕಾರ್ಯಕ್ರಮಗಳಿಗೆ ಹೋಗುವುದು ತೀರಾ ಅಪರೂಪ. ಅಂತಹ ಆತ್ಮೀಯ ಬಳಗವಿದ್ರೆ ಮಾತ್ರ ಅವರು ಹಾಜರಿ ಹಾಕುತ್ತಾರೆ. ಇನ್ನು ಎಲ್ಲರನ್ನೂ ಹತ್ತಿರ ಸೇರಿಸಿಕೊಳ್ಳುವ ಜಾಯಾಮಾನವೂ ರಕ್ಷಿತ್ ಅವರದ್ದಲ್ಲ. ರಕ್ಷಿತ್ ಕೋಟೆಯ ಬಾಗಿಲು ತಟ್ಟಲು ಸಾಧ್ಯವಾಗೋದು ಕೆಲವೇ ಕೆಲವು ಮಂದಿಗೆ. ಇನ್ನು ಮಾಧ್ಯಮಗಳನ್ನೇ ಅವರು ದೂರವಿಟ್ಟಿದ್ದಾರೆ ಅಂದ್ರೆ ಅವರ ತಾಕತ್ತೇನು ಅನ್ನುವುದನ್ನು ಊಹಿಸಬಹುದಾಗಿದೆ.

ಹಾಗಾದ್ರೆ ಪ್ರಥಮ್ ಅವರ ನಟ ಭಯಂಕರನ ಕಾರ್ಯಕ್ರಮಕ್ಕೆ ಬರಲು ಹೇಗೆ ಒಪ್ಪಿದ್ರು ಅನ್ನುವುದೇ ಕುತೂಹಲ. ಅದರ ಹಿಂದೆಯೂ ಕಥೆಯಿದೆ. ಹೇಳಿ ಕೇಳಿ ಪ್ರಥಮ್ ಮಾತಿನ ಮಲ್ಲ. ಮಾಜಿ ಪ್ರಧಾನಿ, ಹಾಲಿ ಸಿಎಂ ಅಷ್ಟು ಮಾತ್ರವಲ್ಲ ಕನ್ನಡದ ಸ್ಟಾರ್ ನಟರ ಮನೆಗೆ ನೇರವಾಗಿ ನುಗ್ಗುವ ತಾಕತ್ತಿನ ಮನುಷ್ಯ. ಆದರೆ ಇಂತಹ ಮಾತಿನ ಮಲ್ಲನಿಗೆ ರಕ್ಷಿತ್ ಶೆಟ್ಟಿ ಕೋಟೆಗೆ ಲಗ್ಗೆ ಇಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಅದನ್ನೂ ಸಾಧ್ಯ ಎಂದು ತೋರಿಸಿದ್ದಾರೆ.

ಅವನೇ ಶ್ರೀಮನ್ನಾರಾಯಣ ಟ್ರೈಲರ್ ಬಿಡುಗಡೆಗಾಗಿ ಸಿದ್ದತೆ ಮಾಡಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿಗೆ ಒಂದು ಕ್ಷಣವೂ ಟೈಮ್ ಇಲ್ಲ. ಅದು ಯಾವಾಗ ರಕ್ಷಿತ್ ಶೆಟ್ಟಿ ಮೊಬೈಲ್ ನಲ್ಲಿ ಪ್ರಥಮ್ ಮೊಬೈಲ್ ನಂಬರ್ ಮೂಡಿ ಬಂತೋ, ಹಾಡು ಬಿಡುಗಡೆ ಬರಬೇಕು ಎಂದು ಪ್ರಥಮ್ ವಿನಂತಿಸಿದ್ದಾರೆ. ಆದರೆ ಪ್ರಥಮ್ ಹೇಳಿದ ತಕ್ಷಣ ರಕ್ಷಿತ್ ಒಪ್ಪಿಕೊಂಡಿರಲಿಲ್ಲ. ಈ ವೇಳೆ ನನ್ನ ಕೆಲಸ ನೋಡಿ ಆಮೇಲೆ ಡಿಸೈಡ್ ಮಾಡಿ ಅಂದವರು ಪ್ರಥಮ್. ನಟ ಭಯಂಕರನ ಹಾಡು ಕೇಳಿದ ರಕ್ಷಿತ್ ಶೆಟ್ಟಿ, ತಾನೇ ಈ ಹಾಡನ್ನು ಬಿಡುಗಡೆ ಮಾಡಲು ಬರುವುದಾಗಿ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಪ್ರಥಮ್ ಅವರ ನಟ ಭಯಂಕರ ಹಾಡನ್ನು ಮೆಚ್ಚಿಕೊಂಡಿದ್ದಾರೆ ಅಂದ ಮೇಲೆ ಅಲ್ಲೇನೋ ಸಮ್ ಥಿಂಗ್ ಸ್ಪೆಷಲ್ ಇದೆ ಅಂದಾಯ್ತು.

ಏನಿವೇ ಬೆಸ್ಟ್ ಆಫ್ ಲಕ್ ಟು ಪ್ರಥಮ್.

Advertisements

Leave a Reply

%d bloggers like this: