Advertisements

ಕೊಳ್ಳೆಗಾಲದ ಮಂತ್ರವಾದಿಯನ್ನೇ ಹನಿಟ್ರ್ಯಾಪ್ ಗೆ ಕೆಡವಿದ ಖದೀಮರು…!

ಹನಿಟ್ರ್ಯಾಪ್​ ಬಲೆಗೆ ಬಿದ್ದ ಮಂತ್ರವಾದಿಯೊಬ್ಬ ಬರೋಬ್ಬರಿ 18 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. 

ಈ ಸಂಬಂಧ ಬೆಂಗಳೂರಿನ ಹೆಸರಘಟ್ಟ ನಿವಾಸಿಗಳಾದ ಸರೋಜಮ್ಮ, ಬಸವರಾಜು, ನಾಗರತ್ನಮ್ಮ ಎಂಬುವವರನ್ನು ಬಂಧಿಸಲಾಗಿದೆ. 

ಈ ಮೂವರು ಆರೋಪಿಗಳು ಆಗಾಗ್ಗೆ ಮಂತ್ರವಾದಿ ರಾಘವನ್ ಬಳಿ ಪೂಜೆ ಮಾಡಿಸುತ್ತಿದ್ದರು. ಜೊತೆಗೆ ಬೆಂಗಳೂರಿಗೆ ಪೂಜೆಗೆ ತೆರಳಿದ್ದ ವೇಳೆ ಬಲೆಗೆ ಬಿದ್ದ ಇವರಿಂದ ಲಕ್ಷ ಲಕ್ಷ ಪೀಕಿದ್ದಾರೆ.

ನೀನು ಲೈಂಗಿಕ ಕಿರುಕುಳ ನೀಡಿದ್ದೀಯಾ, ಅಶ್ಲೀಲವಾಗಿ ಮಾತನಾಡಿದ್ದೀಯಾ ನಾವು ನಿನ್ನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಬೆದರಿಕೆವೊಡ್ಡಿ 20 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೇ ಸುಮ್ಮನಾಗದೇ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಿಂದ ನ.8 ರಂದು ರಾಘವನ್ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಘವನ್ ಮೂಲಕ ಆರೋಪಿಗಳನ್ನು ಮದ್ದೂರಿನಲ್ಲಿ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisements

Leave a Reply

%d bloggers like this: