ಜನ್ಮ ಕೊಟ್ಟಿದ್ದು ನಾನು ಆದರೆ ಯಾರು ನನ್ನ ತರ ಕಾಣಿಸುತ್ತಿಲ್ಲ : ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್ ಎರಡನೇ ಮಗುವಿಗೆ ಅಕ್ಟೋಬರ್ 30 ರಂದು ಜನ್ಮ ಕೊಟ್ಟಿದ್ದರು. ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ರಾಧಿಕಾ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ವೇಳೆ ಮಗ ಹಾಗೂ ಮಗಳ ಜೊತೆಗೆ ಬಂದ ದಂಪತಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಎಲ್ಲರಿಗೂ ಧನ್ಯವಾದ ತಿಳಿಸಿದ ಯಶ್, ತಾಯಿ ಮಗು ಇಬ್ಬರೂ ಆರಾಮಾಗಿದ್ದಾರೆ. ಕಳೆದ ಬಾರಿ ರಾಧಿಕಾಗೆ ಮಗುವಾದಾಗ ಅಷ್ಟು ಸಮಯ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಶೂಟಿಂಗ್ ಬಿಟ್ಟು ಕಂಪ್ಲೀಟ್ ಆಗಿ ರಾಧಿಕಾ ಜೊತೆಲಿ ಇದ್ದುಬಿಟ್ಟೆ ಅಂದಿದ್ದಾರೆ.

ಯಾವಾಗಲೂ ಮಕ್ಕಳು ಅನ್ನೋದೇ ಸಂತೋಷ. ಆದರೆ ಮಕ್ಕಳನ್ನು ಲಕ್ ಅಥವಾ ಅದೃಷ್ಟ ಅನ್ನೋ ಮಾನದಂಡದಲ್ಲಿ ಅಳೆಯಲು ಸಾಧ್ಯವೇ ಇಲ್ಲ. ತಮ್ಮನ ಆಗಮನವಾಗಿರುವುದಕ್ಕೆ ಆಯ್ರಾ ಸಖತ್​ ಖಯಷಿಯಾಗಿದ್ದಾಳಂತೆ. “ಆಯ್ರಾ ಖುಷಿಯಾಗಿದ್ದಾಳೆ. ಫ್ಲೈಯಿಂಗ್ ಕಿಸ್ ಎಲ್ಲಾ‌ ಕೊಡುತ್ತಾಳೆ. ನನಗೆ ಹೆಣ್ಣು ಮಗು ಬೇಕು ಎನ್ನುವ ಆಸೆ ಇತ್ತು. ರಾಧಿಕಾಗೆ ಗಂಡು ಮಗು ಬೇಕು ಎನ್ನುವ ಆಸೆ ಇತ್ತು. ಈಗ ಇಬ್ಬರ ಆಸೆಯಂತೆ ಆಗಿದೆ,” ಅಂದಿದ್ದಾರೆ ಯಶ್​.

ರಾಧಿಕಾ ನಾನು ಜನ್ಮ ಕೊಟ್ಟಿದ್ದು, ಆದರೆ ಯಾರು ನನ್ನ ತರ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದರು. ಆದರೆ ಎರಡು ಮಕ್ಕಳು ನನ್ನ ಥರನೇ ಇದ್ದಾರೆ. ಮಕ್ಕಳಾಗುವುದೇ ಭಾಗ್ಯ, ಗಂಡಾಗಲಿ-ಹೆಣ್ಣಾಗಲಿ ಮಕ್ಕಳು ಎಂದರೆ ಸಂತಸ ಎಂದು ಯಶ್ ಖುಷಿಯನ್ನು ಹಂಚಿಕೊಂಡರು.

ಈ ವೇಳೆ ರಾಧಿಕಾ ಮಾತನಾಡಿ, ನನ್ನ ಜೀವನದಲ್ಲಿ ತಾಯಿ ಎನ್ನುವುದು ಮುಖ್ಯವಾದ ಪಾತ್ರವಾಗಿದೆ. ಅದರಲ್ಲೂ ನನಗೆ ಎರಡನೇ ಬಾರಿ ಅವಕಾಶ ಸಿಕ್ಕಿದೆ. ನಿಜಕ್ಕೂ ತುಂಬಾ ಖುಷಿಯಾಗಿದೆ ಎಂದರು ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: