Advertisements

ಗೋವಾದ ಈ ಗ್ರಾಮದಲ್ಲಿ ಒಂದು ಫೋಟೋ ಕ್ಲಿಕಿಸಲು 500 ರೂಪಾಯಿ ಶುಲ್ಕ

ಉತ್ತರ ಗೋವಾದ ಪರ್ರಾ ಗ್ರಾಮದಲ್ಲಿ ಒಂದು ಫೋಟೋ ಕ್ಲಿಕಿಸಬೇಕಾದರೆ 100 ರೂ.ನಿಂದ 500 ರೂ. ಶುಲ್ಕ ತೆರಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯತ್ ಆದೇಶ ಹೊರಡಿಸಿದೆ.

ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರು ಹುಟ್ಟಿದ ಊರಾಗಿರುವ ಪರ್ರಾ ಗ್ರಾಮದಲ್ಲಿ ಸ್ವಚ್ಛತಾ ತೆರಿಗೆ ಹೆಸರಿನಲ್ಲಿ ಫೋಟೋ ತೆಗೆಸಿಕೊಳ್ಳುವವರಿಂದ ಕಾಸು ಪೀಕಲಾಗುತ್ತಿದೆ.

ಗ್ರಾಮ ಪಂಚಾಯತ್ ನ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ವಾಣಿಜ್ಯ ಉದ್ದೇಶಕ್ಕೆ ಶೂಟಿಂಗ್ ನಡೆಯುತ್ತಿದ್ದರೆ ಅವರಿಂದ ಶುಲ್ಕ ಪಡೆಯುವುದರಲ್ಲಿ ಅರ್ಥವಿದೆ ಆದರೆ ಪ್ರವಾಸಕ್ಕೆಂದು ಬಂದವರು ಸವಿ ನೆನಪಿಗಾಗಿ ಫೋಟೋ ತೆಗೆದುಕೊಳ್ಳುವುದಕ್ಕೂ ಶುಲ್ಕ ವಿಧಿಸುವುದು ಸರಿಯಲ್ಲ ಅಂದಿದ್ದಾರೆ.

ಇನ್ನು ಗ್ರಾಮ ಪಂಚಾಯತ್ ನ ಈ ನಿರ್ಧಾರವನ್ನು ಮಾಜಿ ಸರಪಂಚ್ ಬೆನ್ಡಿಕ್ಟ್ ಸೋಜಾ ಖಂಡಿಸಿದ್ದು, ತೆಂಗಿನ ಮರಗಳಿಂದ ಕಂಗೊಳಿಸುತ್ತಿರುವ ಈ ಗ್ರಾಮದ ರಸ್ತೆಗಳು ಬಾಲಿವುಡ್ ಮತ್ತು ಹಾಲಿವುಡ್ ಮಂದಿಯನ್ನು ಸೆಳೆದಿದೆ. ಹಾಗಂತ ಪ್ರವಾಸಕ್ಕೆಂದು ಬಂದವರಿಂದ ಫೋಟೋ ಸಲುವಾಗಿ ಶುಲ್ಕ ಪಡೆಯುವುದು ಸರಿಯಲ್ಲ. ಕರ್ಮಷಿಯಲ್ ಶೂಟಿಂಗ್ ಗಳಿಗೆ ಶುಲ್ಕ ವಿಧಿಸಲಿ ಅಂದಿದ್ದಾರೆ.

ಇನ್ನು ಗ್ರಾಮ ಪಂಚಾಯತ್ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಹಾಲಿ ಸರಪಂಚ್ ಲೋಬೋ, ಪಂಚಾಯತ್ ನಿರ್ಧಾರ ಸರಿಯಾಗಿದೆ. ದಂಡ ಹಾಕಿದ್ರೆ ಮಾತ್ರ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಭಾರತೀಯರದ್ದು. ತೆಂಗಿನ ಮರಗಳ ಸಾಲಿನಿಂದ ಕೂಡಿರುವ ಈ ರಸ್ತೆಯಲ್ಲಿ ಪ್ರವಾಸಿಗಳ ಉಪಟಳ ಹೆಚ್ಚಾಗಿದೆ. ಪ್ರವಾಸಿ ಸ್ಥಳವನ್ನು ಅಸ್ವಾದಿಸಿ ಹೋಗುವ ಪ್ರವಾಸಿಗರು nuisance ಉಂಟು ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಸಲುವಾಗಿ ಶುಲ್ಕ ವಿಧಿಸುವುದು ಅನಿವಾರ್ಯ ಅಂದಿದ್ದಾರೆ.

ಅಂದ ಹಾಗೆ ‘Dear Zindagi’ ಮತ್ತು ‘Finding Fanny’ ಚಿತ್ರಗಳು ಇದೇ ಗ್ರಾಮದಲ್ಲಿ ಚಿತ್ರೀಕರಣಗೊಂಡಿದೆ.

Advertisements

Leave a Reply

%d bloggers like this: