Advertisements

ನೈಸ್ ರಸ್ತೆಯಲ್ಲಿ ಗಾಡಿ ಸೈಡಿಗೆ ಹಾಕಿದ್ರೆ ಹುಷಾರ್….!

ಬೆಂಗಳೂರಿನ ನೈಸ್ ರಸ್ತೆ ಸಂಚಾರಕ್ಕೆ ತುಂಬಾ ಚೆನ್ನಾಗಿದೆ. ಆದರೆ ಇದು ಅಷ್ಟೇ ಅಪಾಯಕಾರಿ ರಸ್ತೆಯೂ ಹೌದು. ಈಗಾಗಲೇ ಇಲ್ಲಿ ನಡೆದ ಹಲವು ಆಪರಾಧ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಅವೆಲ್ಲದರ ಇತಿಹಾಸ ತೆಗೆದು ನೋಡಿದರೆ ನೈಸ್ ರಸ್ತೆ ಸೇಫ್ ಅಲ್ಲ ಅನ್ನುವುದು ಸ್ಪಷ್ಟವಾಗುತ್ತದೆ.

ಇದೀಗ ನೈಸ್ ರಸ್ತೆಯಲ್ಲಿ ದೋಚುವ ಮತ್ತೊಂದು ಗ್ಯಾಂಗ್ ಹುಟ್ಟುಕೊಂಡಿದ್ದು, ಯಾರಾದರೂ ಸವಾರರು ಗಾಡಿ ಸೈಡಿಗೆ ಹಾಕಿದ್ರೆ ಸಾಕು ಎಂಟ್ರಿ ಕೊಡುತ್ತದೆ.

ಹೀಗೆ ನೈಸ್ ರಸ್ತೆಯಲ್ಲಿ ವಾಹನ ನಿಲ್ಲಿಸುವವರ ಬಳಿ ಹೋಗಿ ನಾವು ಸಿಸಿಬಿ ಪೊಲೀಸರು ಎಂದು ಹೆದರಿಸಿ ಹಣ ವಸೂಲಿ ಮಾಡ್ತಿದ್ದ ಇಬ್ಬರು ಖದೀಮರನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ….

ಬಂಧಿತರನ್ನು ಕನಕಪುರ ತಾಲೂಕಿನ ನರಸಿಂಹಯ್ಯನದೊಡ್ಡಿ ಗ್ರಾಮದ ನಿವಾಸಿ ರಘು ಮತ್ತು ಹಾಗೂ ರಾಮನಗರ ತಾಲೂಕಿನ ತುಂಬೇನಹಳ್ಳಿ ನಿವಾಸಿ ರವೀಶ್ ಎಂದು ಗುರುತಿಸಲಾಗಿದೆ.

ಇವರಿಬ್ಬ ತಂಡ ತಮ್ಮ ಬಳೀ ಕೈಕೋಳವೊಂದನ್ನು ಇಟ್ಟುಕೊಳ್ಳುತ್ತಿದ್ದರು. ನೈಸ್ ರಸ್ತೆಯಲ್ಲಿ ನಿಲ್ಲಿಸಿಕೊಂಡಿರುತ್ತಿದ್ದ ವಾಹನಗಳ ಬಳಿ ತೆರಳಿ ತಾವು ಸಿಸಿಬಿ ಪೊಲೀಸರು ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದರು. ಅದರಲ್ಲೂ ಜೋಡಿಗಳು ಸಿಕ್ರೆ ಈ ಸಮಾಜಘಾತುಕರಿಗೆ ಹಬ್ಬ.

ಜೋಡಿ ಬಳಿ ತೆರಳಿ ಬೆದರಿಸುತ್ತಿದ್ದ ಖರೀದಿಮರು ನಿಮ್ಮನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ, ಸ್ವಲ್ಪ ದೂರ ಕರೆದೊಯ್ದು ಬಳಿಕ ಅವರ ಫೋಟೋಗಳನ್ನು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ. ನಿಮ್ಮ ಮನೆಯವರಿಗೆ ಕಳುಹಿಸುತ್ತೇವೆ ಎಂದು ಬೆದರಿಸಿ  ಹಣ ವಸೂಲಿ ಮಾಡುತ್ತಿದ್ದರು.

Advertisements

Leave a Reply

%d bloggers like this: