Advertisements

ಯಡಿಯೂರಪ್ಪ ನಮಗೇನು ಶತ್ರುವೇ…. ಸಿಎಂ ಬಗ್ಗೆ ಮೆತ್ತಾಗದ ಹೆಚ್.ಡಿ.ಡಿ

ರಾಜ್ಯ ರಾಜಕಾರಣದಲ್ಲಿ ಏನುಬೇಕಾದರೂ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಅನ್ನುವ ಏಕೈಕ ಕಾರಣದಿಂದ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಗೆ ಇದೀಗ ಬಿಜೆಪಿ ಮೇಲೆ ಇದೀಗ ಸಿಕ್ಕಾಪಟ್ಟೆ ಲವ್ ಆಗಿರೋ ತರ ಕಾಣಿಸುತ್ತಿದೆ.

ಕಾಂಗ್ರೆಸ್ ಪಕ್ಷವನ್ನು ಅಪ್ಪ ಮಕ್ಕಳು ಸೇರಿ ಮುಳುಗಿಸುತ್ತಾರೆ ಎಂದು ಗುಡುಗಿದ್ದ ಯಡಿಯೂರಪ್ಪ ಕೂಡಾ ದಳಪತಿಗಳ  ಬಗ್ಗೆ ತಣ್ಣಗಾಗಿದ್ದಾರೆ.

ದೇವೇಗೌಡರು ಫೋನ್ ಮಾಡಿದ್ದರು, ನನ್ನ ಜೊತೆ ಮಾತನಾಡಿದ್ದರು ಎಂದು ನಿನ್ನೆ ಹೇಳಿದ್ದ ಯಡಿಯೂರಪ್ಪ ಇಂದು ಉಲ್ಟಾ ಹೊಡೆದಿದ್ದಾರೆ. ಅಯ್ಯೋ ಅವರು ಮಾತನಾಡಿಯೇ ಇಲ್ಲ ಅಂದಿದ್ದಾರೆ.

ಮತ್ತೊಂದು ಕಡೆ ನಾನು ಯಡಿಯೂರಪ್ಪ ಜೊತೆ ಮಾತನಾಡಿಲ್ಲ ಎಂದು ನಿನ್ನೆ ಹೇಳಿದ್ದ ದೇವೇಗೌಡರು ಇಂದು ಉಲ್ಟಾ ಹೊಡೆದಿದ್ದು, ಹೌದು ನಾನು ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಿದ್ದೆ, ಪುಸ್ತಕ ಮೇಳಕ್ಕೆ ಸಂಬಂಧಿಸಿದ ಕಡತವೊಂದರ ಕುರಿತಂತೆ ಮಾತುಕತೆಯಾಗಿದೆ. ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಈ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಅವರ ಜೊತೆಗೂ ಮಾತನಾಡಿದ್ದೇನೆ ಅಂದಿದ್ದಾರೆ.

ಯಡಿಯೂರಪ್ಪ ಜೊತೆಗಿನ ದೂರವಾಣಿ ಮಾತುಕತೆಯನ್ನು ದೃಢಪಡಿಸಿರುವ ದೇವೇಗೌಡರು, ನನ್ನ ಹೇಳಿಕೆಗಳಿಗೆ ನಾನು ಬದ್ಧನಾಗಿರುತ್ತೇನೆ. ಯಡಿಯೂರಪ್ಪ ನಮಗೇನು ಶತ್ರು ಅಲ್ಲ. ಹಿಂದೆ ಸಿದ್ದರಾಮಯ್ಯ ಜೊತೆಗೂಡಿ ಹೋರಾಟ ಮಾಡಿದ್ದೇವೆ. ಕೆಲವು ಸಂದರ್ಭದಗಳಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇವೆ. ರಾಜಕೀಯದಲ್ಲಿ ಯಾವಾಗಲೂ ಶತ್ರುಗಳು ಆಗಲ್ಲ, ಮಿತ್ರರೂ ಆಗಲ್ಲ. ಆಯಾ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯವಾಗಿ ಮಾಡಿರುತ್ತೇವೆ. ಸಿದ್ದರಾಮಯ್ಯ ನನಗೆ ಆ ಜನ್ಮ ಶತ್ರುವಲ್ಲ. ರಾಜಕೀಯ ಬದಲಾವಣೆಯಲ್ಲಿ ಇದೆಲ್ಲ ಸಾಮಾನ್ಯ ಅಂದಿದ್ದಾರೆ.

ಅಲ್ಲಿಗೆ ಎರಡೂ ಪಕ್ಷದ ಕಾರ್ಯಕರ್ತರ ಕಥೆ ಏನೂ, ಪರಿಸ್ಥಿತಿ ಅನುವುದನ್ನು ಊಹಿಸಬಹುದಾಗಿದೆ.

Advertisements

Leave a Reply

%d bloggers like this: