Advertisements

ತಂದೆ ಸಾವನ್ನು ಮುಚ್ಚಿಟ್ಟು ಮಗಳ ಮದುವೆ ಮಾಡಿದರು…

ಮದುವೆ ನಿಲ್ಲಬಾರದೆಂಬ ಕಾರಣದಿಂದ ತಂದೆಯ ಸಿವಾನ ವಿಶಯವನ್ನು ಮಗಲಿಂದ ಮುಚ್ಚಿಟ್ಟು ಮದುವೆ ಮಾಡಿಸಿರುವ ಘಟನೆ ತಿರುಪತಿಯಲ್ಲಿ ನಡೆದಿದೆ.

ಮಡಿಕೇರಿಯ ದಾಮೋದರ ಅವರ ಪುತ್ರಿಯ ವಿವಾಹ ನವೆಂಬರ್ 3 ರಂದು ತಿರುಪತಿಯ ಸನ್ನಿಧಿಯಲ್ಲಿ ನಿಗದಿಯಾಗಿತ್ತು. ನವೆಂಬರ್ 2 ರಂದು ಎಲ್ಲರೂ ತಿರುಪತಿ ತಲುಪಿದ್ದರು.

ಆದರೆ ನವೆಂಬರ್ 2ರ ಮಧ್ಯರಾತ್ರಿ ದಾಮೋದರ ಅವರಿಗೆ ಎದೆನೋವು ಕಾಣಿಸಿಕತೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯ್ತು, ಆದರೂ ಮಗಳ ಮದುವೆ ನೋಡುವ ಸೌಭಾಗ್ಯ ಅವರಿಗೆ ಉಳಿದಿರಲಿಲ್ಲ.

ಈ ವೇಳೆ ಒಂದಿಷ್ಟು ಎಚ್ಚೆತ್ತುಕೊಂಡ ಸಂಬಂಧಿಕರು ಮಗಳಿಂದ ತಂದೆಯ ಸಾವಿನ ಸುದ್ದಿ ಮುಚ್ಚಿಟ್ಟಿದ್ದಾರೆ. ತಂದೆಗೆ ಹುಷಾರಿಲ್ಲ ಸ್ವಲ್ಪ ಹೊತ್ತಿನಲ್ಲೇ ಬರುತ್ತಾರೆ ಎಂದು ನಂಬಿಸಿ ಧಾರೆ ಎರೆದಿದ್ದಾರೆ. ನಂತ್ರ ಆಕೆಗೆ ನಿಜ ವಿಷಯ ತಿಳಿಸಲಾಗಿದೆ. ಇದೀಗ ದಾಮೋದರ ಅವರ ಮೃತೇಹವನ್ನು ಮಡಿಕೇರಿಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

Advertisements

Leave a Reply

%d bloggers like this: