Advertisements

ಬೃಹತ್ ಗಾಂಜಾ ಜಾಲ ಬೇಧಿಸಿದ ಕುಡ್ಲ ಪೊಲೀಸರು

ಮಂಗಳೂರು ನಗರಕ್ಕೆ ಗಾಂಜಾ ಪೂರೈಕೆ ಮಾಡುತ್ತಿದ್ದ ಬೃಹತ್ ಜಾಲವನ್ನು ಮಂಗಳೂರು ನಗರ ಪೊಲೀಸರು ಬೇಧಿಸಿದ್ದಾರೆ.

ಮಂಗಳೂರು ನಗರದಲ್ಲಿ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿರುವುದನ್ನು ಗಮನಿಸಿದ ಪೊಲೀಸರು ಈ ಬಗ್ಗೆ ನಿಗಾ ವಹಿಸಿದ್ದರು. ಪೂರೈಕೆ ಜಾಲದ ಬೆನ್ನು ಹತ್ತಿದ ಪೊಲೀಸರು ಕಾಸರಗೋಡು ಮಂಜೇಶ್ವರ ನಿವಾಸಿ ಅಬೂಬಕರ್ ಸಮದ್ (24), ಮಂಜೇಶ್ವರ ಕಡಂಬಾರು ನಿವಾಸಿಗಳಾದ ಮಹಮ್ಮದ್ ಅಶ್ರಫ್ (30), ಮೊಹಮ್ಮದ್ ಅಫ್ರಿದಿ (22) ಹಾಗೂ ಮಹಮ್ಮದ್ ಅರ್ಷದ್ (18) ಎಂಬವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 2 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾ, ಸಾಗಾಟಕ್ಕೆ ಬಳಸುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಕಾರು, ಸ್ಕೂಟರ್ ಮತ್ತು 3 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೊತ್ತ ಸುಮಾರು 5 ಲಕ್ಷ ಎಂದು ಅಂದಾಜಿಸಲಾಗಿದೆ.

 Get upto 70% off on Home and Kitchen Appliances

ಇನ್ನು ಇದೇ ಗ್ಯಾಂಗ್ ಕೇರಳ, ಮುಂಬಯಿಗಳನ್ನು ಸಂಪರ್ಕ ಹೊಂದಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.

Advertisements

Leave a Reply

%d bloggers like this: