ಜಮ್ಮು ಕಾಶ್ಮೀರದಲ್ಲಿ ದುಬಾರಿಯಾದ ರಾಜಕೀಯ ನಾಯಕರು : 2.65 ಕೋಟಿಯ ಗಡಿ ದಾಟಿದ ಹೋಟೆಲ್ ಬಿಲ್

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವೇಳೆ ಅಲ್ಲಿನ ರಾಜಕೀಯ ಮುಖಂಡರನ್ನು ಬಂಧಿಸಿ, ಗೃಹ ಬಂಧನದಲ್ಲಿರಿಸಲಾಗಿತ್ತು.

ನ್ಯಾಷನಲ್​ ಕಾನ್ಫರೆನ್ಸ್​​(ಎನ್​ಸಿ), ಪೀಪಲ್ಸ್​ ಡೆಮಾಕ್ರಟಿಕಲ್​ ಪಾರ್ಟಿ(ಪಿಡಿಪಿ) ಮತ್ತು ಪೀಪಲ್ಸ್​​ ಕಾನ್ಫರೆನ್ಸ್​ ಸೇರಿದಂತೆ ವಿವಿಧ ಪಕ್ಷಗಳ ಸುಮಾರು 31 ಪ್ರಮುಖ ರಾಜಕೀಯ ನಾಯಕರು ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಐಟಿಡಿಸಿ)ದ ಹೆಸರಾಂತ ಸೆಂಟಾರ್​​​ ಹೋಟೆಲ್​ನಲ್ಲಿ ಇರಿಸಲಾಗಿದೆ.

ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬ ಮಫ್ತಿ ಮತ್ತು ಓಮರ್​ ಅಬ್ದುಲ್ಲಾ ಅವರ ಗೃಹ ಬಂಧನ ಮುಂದುವರೆದಿದೆ. ಮಫ್ತಿ ಅವರನ್ನು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಚಶ್ಮಾ ಶಾಹಿಯಲ್ಲಿ ಹಾಗೂ ಅಬ್ದುಲ್ಲಾ ಅವರನ್ನು ನೆಹರೂ ಅತಿಥಿ ಗೃಹದಲ್ಲಿ ಇರಿಸಲಾಗಿದೆ.

ಇದೀಗ ಈ ನಾಯಕರನ್ನು ಸಾಕುವುದೇ ದೊಡ್ಡ ಕಲೆ ನೋವಾಗಿದ್ದು, ಸರಿಯಾದ ಸಮಯಕ್ಕೆ ಊಟ ತಿಂಡಿ ಜೊತೆಗೆ ವಾರಕ್ಕೊಮ್ಮೆ ಮಾಂಸಹಾರಿ ಊಟ ನೀಡಲಾಗುತ್ತಿದೆ.

ಹೀಗಾಗಿ ಈಗಾಗಲೇ 3 ತಿಂಗಳಲ್ಲಿ ಖರ್ಚಾದ ಮೊತ್ತ 2.65 ಕೋಟಿ ರೂಪಾಯಿಯ ಗಡಿ ದಾಟಿದೆ. ಒಬ್ಬ ರಾಜಕೀಯ ನಾಯಕನಿಗೆ ದಿನಕ್ಕೆ 5 ಸಾವಿರ ರೂ ಖರ್ಚಾಗುತ್ತಿದ್ದು, ಗೃಹ ಇಲಾಖೆ 800 ರೂ. ಮಾತ್ರ ಮಂಜೂರು ಮಾಡುವುದಾಗಿದೆ ತಿಳಿಸಿದೆ.

ಹೀಗಾಗಿ ಈ ನಾಯಕರನ್ನು ಶಾಸಕರ ಹಾಸ್ಟೆಲ್​​ ಅಥವಾ ಮತ್ತೊಂದು ದುಬಾರಿಯಲ್ಲದ ಹೋಟೆಲ್​​ಗೆ ಸ್ಥಳಾಂತರಿಸಲು ಚಿಂತನೆ ನಡೆದಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: