Advertisements

ಈ ಮೂವರಲ್ಲಿ ಯಾರು….ಬಿಎಸ್ವೈ ಆಡಿಯೋ ಸೋರ್ಸ್ ಬಗ್ಗೆ ಸ್ಪೋಟಕ ಮಾಹಿತಿ ಕೊಟ್ಟ ಸಿದ್ದರಾಮಯ್ಯ…!

ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ ಆಡಿದ ಮಾತುಗಳು ಇದೀಗ ವೈರಲ್ ಆಗಿದೆ. ಇದು ಬಿಜೆಪಿ ನಾಯಕರ ಉನ್ನತ ಮಟ್ಟದ ಸಭೆಯಲ್ಲಿ ರೆಕಾರ್ಡ್ ಆಗಿರುವ ಆಡಿಯೋ. ಹೀಗಾಗಿ ಇದನ್ನು ಬಿಜೆಪಿ ನಾಯಕರೇ ರೆಕಾರ್ಡ್ ಮಾಡಿರಬಹುದು ಅನ್ನುವುದರಲ್ಲಿ ಸಂಶಯವಿಲ್ಲ.

ಈ ನಡುವೆ ಆಡಿಯೋ ರಂಪಾಟ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಈ ಆಡಿಯೋವನ್ನು ನಳಿನ್ ಕುಮಾರ್ ಕಟೀಲ್ ಮಾಡ್ಸಿರಬೇಕು, ಇಲ್ಲಾ ಲಕ್ಷ್ಮಣ ಸವದಿ ಮಾಡ್ಸಿರಬೇಕು, ಇಲ್ಲಾ ಬೊಮ್ಮಾಯಿ ಮಗ ಮಾಡ್ಸಿರಬೇಕು ಎಂದಿದ್ದಾರೆ.

 ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಸಿದ್ದರಾಮಯ್ಯ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಹೇಳಿಕೆ ಎಂದು ಸುಮ್ಮನಾಗುವ ಹಾಗಿಲ್ಲ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕು.

Advertisements

Leave a Reply

%d bloggers like this: