Advertisements

ಕಿವಿಲಿ ರಕ್ತ ಬರೋದ್ ಬಾಕಿ ಇದೆ ಅ ಯಮ್ಮನ ಹಾಡು ಕೇಳಿ – ಕನ್ನಡ ಕೋಗಿಲೆ ವಿರುದ್ಧ ವೀಕ್ಷಕರ ಆಕ್ರೋಶ

ಕನ್ನಡ ಕೋಗಿಲೆ, ಕರ್ಲಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಒಳ್ಳೆಯ ಸಂಗೀತ ಕಾರ್ಯಕ್ರಮ. ಚಂದನ್ ಶೆಟ್ಟಿ ತೀರ್ಪುಗಾರನಾಗಿರುವುದನ್ನು ಬಿಟ್ಟರೆ ಅದೊಂದು ಉತ್ತಮ ಕಾರ್ಯಕ್ರಮ ಅನ್ನುವುದರಲ್ಲಿ ಎರಡು ಮಾತಿಲ್ಲ.

ಚಂದನ್ ಶೆಟ್ಟಿ ಒಳ್ಳೆಯ Rapper. ಒಳ್ಳೆಯ Rap ಸಾಂಗ್ ಗಳನ್ನು ಅವರು ಕೊಟ್ಟಿದ್ದಾರೆ. ಯುವ ಜನತೆ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಕನ್ನಡದಲ್ಲು ಅದ್ಭುತ RAP ಮಾಡಬಹುದು ತೋರಿಸಿದವರು ಚಂದನ್ ಶೆಟ್ಟಿ. ಹಾಗಂತ ಅವರು ಕನ್ನಡ ಕೋಗಿಲೆಗೆ ಸೂಕ್ತ ತೀರ್ಪುಗಾರನಲ್ಲ.

ಈ ನಡುವೆ ಮೈಸೂರು ದಸರಾದಲ್ಲಿ ನಿಶ್ಚಿತಾರ್ಥ ಜಾತ್ರೆ ನಡೆಸಿದ್ದ ಚಂದನ್ ಶೆಟ್ಟಿ ಜನರ ಆಕ್ರೋಶಕ್ಕೂ ತುತ್ತಾಗಿದ್ದರು. ಬಳಿಕ ಅವರಿಬ್ಬರು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡರು.

ಇದೀಗ ಕನ್ನಡ ಕೋಗಿಲೆ ವೇದಿಕೆಗೆ ನಿವೇದಿತಾರನ್ನು ಕಲರ್ಸ್ ವಾಹಿನಿಯವರು ಕರೆಸಿಕೊಂಡು TRP ಗಿಟ್ಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹಾಗೇ ಬಂದು ಹೋಗಿದ್ರೆ ಪರವಾಗಿರಲಿಲ್ಲ. ಹಾಡೊಂದನ್ನು ಬೇರೆ ಹಾಡಿಸಿದ್ದಾರೆ. ಹಾಡನ್ನು ಕೇಳಿದ ವೀಕ್ಷಕರೊಬ್ಬರು ಕಿವಿಯಲ್ಲಿ ರಕ್ತ ಬರೋದು ಬಾಕಿ ಎಂದು ಕಮೆಂಟ್ ಮಾಡಿದ್ದಾರೆ.

ವಾಹಿನಿಯ ಫೇಸ್ ಬುಕ್ ಪುಟದಲ್ಲಿ ಬಂದಿರುವ ಕಮೆಂಟ್ ಗಳನ್ನು ನೋಡಿದ್ರೆ ಜವಬ್ದಾರಿಯುತ ವಾಹಿನಿಯೊಂದು ಅರ್ಥ ಮಾಡಿಕೊಳ್ಳುವುದು ತುಂಬಾ ಇದೆ. ಅರ್ಥ ಮಾಡಿಕೊಂಡಿಲ್ಲ ಅಂದ್ರೆ ಅವರು ದಪ್ಪ ಚರ್ಮದ ಮಂದಿ, ವೀಕ್ಷಕರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಾರೆ ಅನ್ನುವುದರಲ್ಲಿ ಸಂಶಯವಿಲ್ಲ.

ಕಮೆಂಟ್ ಗಳನ್ನು ಓದಲು ಲಿಂಕ್ ಇಲ್ಲಿದೆ.

Advertisements

Leave a Reply

%d bloggers like this: