ದಾಖಲೆ ನಿರ್ಮಿಸಿದ ಮಕ್ಕಳ ಕಮರ್ಷಿಯಲ್​ ಚಿತ್ರ – IMDB ನೀಡಿದ ಭಾರತದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ 5 ನೇ ಸ್ಥಾನ ಪಡೆದ ಗಿರ್ಮಿಟ್

ಐಎಮ್​ ಡಿಬಿಯ ನಿರೀಕ್ಷಿತ ಚಿತ್ರಗಳ ಅಗ್ರಪಟ್ಟಿಯಲ್ಲಿ 5 ನೇ ಸ್ಥಾನ ಪಡೆದ ಗಿರ್ಮಿಟ್​, ಭಾರತೀಯ ಚಿತ್ರಗಳ ಜೊತೆ ಗುರುತಿಸಿಕೊಂಡು ನಿರೀಕ್ಷೆ ಮೂಡಿಸಿದ ಚಿತ್ರ

ಭಾರತೀಯ ಚಿತ್ರರಂಗದಲ್ಲಿ ಮೊದಲು ಎನ್ನಲಾದ ಮಕ್ಕಳ ವಾಣಿಜ್ಯಾತ್ಮಕ ಚಿತ್ರಕ್ಕೆ ಮತ್ತೊಂದು ಗರಿ ಮೂಡಿದೆ.

ಮಕ್ಕಳ ಮೊಟ್ಟ ಮೊದಲ ಕಮರ್ಷಿಯಲ್​ ಚಿತ್ರವೆಂದು ಹೆಸರು ಪಡೆದಿರುವ ರವಿ ಬಸ್ರೂರು ಮತ್ತು ತಂಡದ ಪರಿಶ್ರಮದ ಗಿರ್ಮಿಟ್​ ಚಿತ್ರವು ಈಗ ಮತ್ತೊಂದು ದಾಖಲೆ ಬರೆದಿದೆ. ​​ಚಲನಚಿತ್ರಗಳ ಮಾನದಂಡ ಸಂಸ್ಥೆಯಾದ ಐಎಂಡಿಬಿ ನೀಡಿದ ಬಹು ನಿರೀಕ್ಷಿತ ಭಾರತೀಯ ಚಿತ್ರಗಳ ಪೈಕಿ ಬಸ್ರೂರು ಚಿತ್ರ 5 ನೇ ಸ್ಥಾನವನ್ನು ಪಡೆದಿದೆ.

ಶನಿವಾರ, ನ.2 ರ ಹೊತ್ತಿಗೆ ಜಾಲತಾಣ ಮಾನದಂಡ ಸಂಸ್ಥೆಯು ನೀಡಿದ ಪಟ್ಟಿಯಲ್ಲಿ ಸ್ಟಾರ್​ ನಟರ ಚಿತ್ರಗಳ ಜೊತೆ ಗುರುತಿಸಿಕೊಂಡಿರುವುದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಅಲ್ಲದೆ ಚಿತ್ರದ ಬಗ್ಗೆ ನಿರೀಕ್ಷೆಯನ್ನೂ ಹೆಚ್ಚಿಸಿದೆ.

ಜಾಲತಾಣ ಮಾನದಂಡ ಸಂಸ್ಥೆಯು ನೀಡಿರುವ ಜನರು ನೋಡಲು ಬಯಸುತ್ತಿರುವ ಚಿತ್ರಗಳ ಪೈಕಿ ಬಾಲಿವುಡ್​ ನ ಮಾರ್ಜಾವಾನ್ ಚಿತ್ರವು ಮೊದಲ ಸ್ಥಾನ ಪಡೆದಿದೆ. ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಈ ಚಿತ್ರವನ್ನು ಶೇ.22.8 ರಷ್ಟು ಮಂದಿ ನೋಡುವ ನಿರೀಕ್ಷೆಯಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿ ಸಲ್ಮಾನ್ ಖಾನ್​ ಅಭಿನಯದ ದಬಾಂಗ್​ 3 ಇದೆ. ಇದನ್ನು ಶೇ.21.9 ರಷ್ಟು ಮಂದಿ ನೋಡಲು ಕಾತರರಾಗಿದ್ದಾರೆ. ಮೂರನೇ ಸ್ಥಾನದಲ್ಲಿ ಬಾಲಾ ಚಿತ್ರವಿದೆ. ಇದು ಶೇ.20.6 ರಷ್ಟು ಜನರ ಬೇಡಿಕೆ ಚಿತ್ರವಾಗಿದೆ. ನಾಲ್ಕನೇ ಸ್ಥಾನದಲ್ಲಿ ಪಾಗಲ್​ ಪಂತಿ ಚಿತ್ರವಿದೆ. ಶೇ.17 ರಷ್ಟು ಜನರು ಈ ಚಿತ್ರವನ್ನು ನೋಡಲು ಬಯಸುತ್ತಿದ್ದಾರೆ.

5 ನೇ ಸ್ಥಾನದಲ್ಲಿ ಇರುವ ಕನ್ನಡದ ಗಿರ್ಮಿಟ್​ ಚಿತ್ರವು ಶೇ.11.1 ರಷ್ಟು ಜನರ ನಿರೀಕ್ಷೆಯಲ್ಲಿದ್ದು ಭರವಸೆ ಮೂಡಿಸಿದೆ.

ಜಾಲತಾಣ ಮಾನದಂಡ ಸಂಸ್ಥೆಯು ನೀಡುವ ಈ ಅಂಕಿ ಅಂಶಗಳ ಮಾಹಿತಿಯು ಕನ್ನಡ ಸಿನಿಮಾಗಳ ಹಿರಿಮೆಯನ್ನು ಹೆಚ್ಚಿಸುತ್ತಿದೆ. ಬಸ್ರೂರು ಅವರ ಹೊಸ ಶೈಲಿಯ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಏನಿದು ಜಾಲತಾಣ ಮಾನದಂಡ?

ಐಎಮ್​ ಡಿಬಿ ಎಂದರೆ ಇಂಟರ್ನೆಟ್​ ಮೂವಿ ಡೇಡಾ ಬೇಸ್​ ಎಂದರ್ಥ. ಅಂದರೆ ಚಲನಚಿತ್ರಗಳ ಬಗ್ಗೆ ಜಾಲತಾಣಿಗರು ವ್ಯಕ್ತಪಡಿಸುವ ಅಭಿಪ್ರಾಯಗಳು, ನೀಡುವ ವಿಮರ್ಶೆಗಳ ಬಗ್ಗೆ ತಿಳಿಸುವ ಒಂದು ಜಾಲತಾಣ ಮಾನದಂಡ ಸಂಸ್ಥೆಯಾಗಿದೆ.

ಇದು ಚಲನಚಿತ್ರಗಳು ಮಾತ್ರವಲ್ಲದೆ ದೂರದರ್ಶನ ಕಾರ್ಯಕ್ರಮಗಳು, ವಿಡಿಯೋ ಗೇಮ್​ ಗಳಿಗೆ ಸಂಬಂಧಿಸಿದ ಜಾಲತಾಣಿಗರ ಅಭಿಪ್ರಾಯದ ದತ್ತಾಂಶವನ್ನು ನೀಡುತ್ತದೆ.

ಶನಿವಾರ, ಅ.26 ರಂದು ಬಿಡುಗಡೆಯಾದ ಗಿರ್ಮಿಟ್​ ಟ್ರೈಲರ್​ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಸಂಗೀತ ನಿರ್ದೇಶಕ ಬಸ್ರೂರು ಮತ್ತು ತಂಡದ ಪ್ರಯತ್ನದ ಫಲವಾಗಿದ್ದು ಬಸ್ರೂರು ಅವರ ಶ್ರಮದ ನಾಲ್ಕನೇ ಚಿತ್ರವಾಗಿದೆ.

ಟ್ರೈಲರ್​ ಮೂಲಕ ಕುತೂಹಲ ಮೂಡಿಸಿರುವ ಚಿತ್ರ ಇದೇ ತಿಂಗಳ 8 ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರದ ಟ್ರೈಲರ್​ ನಲ್ಲಿ ನಾಯಕ, ನಾಯಕಿಯಾಗಿರುವ ಮಕ್ಕಳು ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ರಾಕಿಸ್ಟಾರ್​ ಯಶ್​, ರಾಧಿಕಾ ಪಂಡಿತ್​ ಸೇರಿದಂತೆ ಹಿರಿಯ ಕಲಾವಿದರು ಮಕ್ಕಳ ಪ್ರಧಾನ ಪಾತ್ರಗಳಿಗೆ ಹಿನ್ನಲೆ ದನಿ ನೀಡಿರುವುದು ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು.

ಬಸ್ರೂರು ಚಿತ್ರಕ್ಕೆ ಸಂಗೀತ ನೀಡುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚಿತ್ರದ ‘ಆರಂಭವೇ ಆನಂದವೇ’ ಎಂಬ ಲಿರಿಕಲ್ ವಿಡಿಯೋ ಗೀತೆ ಅ.21 ರ ಸಂಜೆ 7 ಕ್ಕೆ ಬಿಡುಗಡೆಯಾಗಿತ್ತು. ಕಿನ್ನಾಳ ರಾಜ್ ಸಾಹಿತ್ಯ ಇದ್ದು ಸಂತೋಷ್ ವೆಂಕಿ ಗೀತೆಗೆ ಧ್ವನಿಯಾಗಿದ್ದಾರೆ.

ಚಿತ್ರದಲ್ಲಿ ಮಕ್ಕಳೇ ನಾಯಕ, ನಾಯಕಿ, ತಂದೆ, ತಾಯಿ, ಅಜ್ಜಿ, ಸ್ನೇಹಿತರು ಹೀಗೆ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಒಂದು ವಿಶಿಷ್ಟ ಪ್ರಯತ್ನವಾದ ಈ ಚಿತ್ರವನ್ನು ಮಕ್ಕಳ ಮೂಲಕವೇ ಚಿತ್ರಿಸಿ ತೆರೆಗೆ ತರಲಾಗುತ್ತಿದೆ. ಒಂದು ಕಮರ್ಷಿಯಲ್ ಚಿತ್ರದಲ್ಲಿ ಇರುವ ಅಂಶಗಳೆಲ್ಲವೂ ಇದರಲ್ಲಿದೆ. ನಾಯಕ, ನಾಯಕಿಯ ವಾಗ್ಯುದ್ಧಗಳು, ನಾಯಕನ ಖಡಕ್ ಡೈಲಾಗ್ ಗಳು, ನಾಯಕ, ನಾಯಕಿಯ ಪ್ರೇಮ ಸಲ್ಲಾಪಗಳು ಎಲ್ಲವೂ ಚಿತ್ರದಲ್ಲಿದೆ. ದೊಡ್ಡವರ ಪೋಷಾಕಿನಲ್ಲಿ ಕಾಣಿಸಿಕೊಂಡಿರುವ ಮಕ್ಕಳ ಪೋಸ್ಟರ್ ಮತ್ತು ಟೀಸರ್ ಗಮನ ಸೆಳೆದಿತ್ತು.

ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಟಾರ್ ನಟರು ಪ್ರಧಾನ ಪಾತ್ರಗಳಿಗೆ ಕಂಠದಾನ ನೀಡಿದ ಗಿರ್ಮಿಟ್ ಡಬ್ಬಿಂಗ್​ ಟ್ರೈಲರ್ ಶನಿವಾರ, ಅ.19 ರಂದು ರಿಲೀಸ್ ಆಗಿತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸುವ ಈ ಚಿತ್ರವು ಓಂಕಾರ್ ಮೂವೀಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ. ಚಿತ್ರಕ್ಕೆ ಎನ್ ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸೂರಜ್ ಚೌಧರಿ ಮತ್ತು ನರೇನ್ ಚಂದ್ರ ಚೌಧರಿಯು ಸಹ ನಿರ್ಮಾಪಕರಾಗಿದ್ದಾರೆ.

ಪ್ರಮೋದ್ ಮರವಂತೆ, ಕಿನ್ನಲ್ ರಾಜ್, ಸಂದೀಪ್ ಶಿರಸಿ, ಸುಚನ್ ಶೆಟ್ಟಿ ಮತ್ತು ಮಂಜುನಾಥ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಅಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮಾ, ಆರಾಧ್ಯ ಶೆಟ್ಟಿ, ತನಿಶಾ ಕೋನಿ, ಜಯೇಂದ್ರ, ನಾಗರಾಜ್ ಜಪ್ತಿ, ಆದಿತ್ಯ ಕುಂದಾಪುರ ಮತ್ತು ಸಿಂಚನಾ ಕೋಟೇಶ್ವರ ಮೊದಲಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಅವರ ತಂಡ ಭಿನ್ನ ಪ್ರಯತ್ನದ ಮೂಲಕ ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ನ್ನು ತಯಾರಿಸಿದ್ದಾರೆ.

ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಲಾದಲ್ಲಿ ನವೆಂಬರ್​ 8 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: