Advertisements

ಬಿಗ್ ಬಾಸ್ ಮನೆಯಿಂದ ಹೊರ ಬಂದ ದುನಿಯಾ ರಶ್ಮಿ….?

ಸುದೀಪ್ ನಡೆಸಿಕೊಡುತ್ತಿರುವ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 7 ರಿಂದ ಈಗಾಗಲೇ ಮೊದಲ ವಾರ ಗುರುಲಿಂಗ ಸ್ವಾಮಿ ಹೊರ ಬಂದಿದ್ದಾರೆ. ಎರಡನೇ ವಾರ ಜಂಭದ ಕೋಳಿ, ಎಡವಟ್ಟ್ ರಾಣಿ ಚೈತ್ರಾ ವಾಸುದೇವನ್ ಹೊರ ಬಂದಿದ್ದರು.

ಮೂರನೇ ವಾರದಲ್ಲಿ ದುನಿಯಾ ರಶ್ಮಿ ಮನೆಯಿಂದ ಹೊರ ಬಿದ್ದಿದ್ದಾರೆ ಅನ್ನುವ ಸುದ್ದಿ ಬಂದಿದ್ದು, ನಾಳೆ ಅಧಿಕೃತವಾಗಿ ಕಿಚ್ಚ ಸುದೀಪ್ ಪ್ರಕಟಿಸಲಿದ್ದಾರೆ.

ಈ ವಾರ ಚಂದನ್ ಆಚಾರ್, ದುನಿಯಾ ರಶ್ಮಿ, ಪ್ರಿಯಾಂಕ, ರಾಜು ತಾಳಿಕೋಟೆ, ವಾಸುಕಿ ವೈಭವ್ ನಾಮಿನೇಷನ್ ಆಗಿದ್ದರು.

ಕಾರ್ಯಕ್ರಮ ಪ್ರಾರಂಭದ ದಿನದಿಂದಲೂ ದುನಿಯಾ ರಶ್ಮಿಯ ಕೊಡುಗೆ ಅಷ್ಟಕ್ಕೆ ಅಷ್ಟೇ ಅನ್ನುವಂತಿತ್ತು. ರಶ್ಮಿಗೆ ಜನರನ್ನು ರಂಜಿಸಲು ಸಾಧ್ಯವಾಗಲಿಲ್ಲ. ಹೋಗ್ಲಿ ರಂಪಾಟ ಮಾಡಿಯಾದ್ರೂ ಜನರ ಗಮನ ಸೆಳೆದರೋ ಅದೂ ಇಲ್ಲ. ಹಾಡು, ಡ್ಯಾನ್ಸ್ ಹೀಗೆ ಕ್ಯಾಮಾರ ಕಣ್ಣಿಗೆ ಆಹಾರವಾಗಿದ್ದರೆ ರಶ್ಮಿಯವರನ್ನು ಜನರನ್ನು ರಕ್ಷಿಸುತ್ತಿದ್ದರು.

ಇನ್ನು ಸಾಕಷ್ಟು ನಿರೀಕ್ಷೆಯಿಂದ ಮಹಾಮನೆಗೆ ರಶ್ಮಿಯವರನ್ನು ವಾಹಿನಿಯವರು ಕಳುಹಿಸಿಕೊಟ್ಟಿದ್ದರು. ಆದರೆ ಅವರು ಫೂಟೇಜ್ ಗಳನ್ನು ತಂದುಕೊಟ್ಟಿಲ್ಲ ಅನ್ನುವ ಕೊರಗು ಅವರಿಗೂ ಇದೆ.

ಕನಿಷ್ಟ ಪಕ್ಷ ದುನಿಯಾ ಸೇರಿದಂತೆ ವಿವಿಧ ಸಿನಿಮಾದ ದಿನಗಳನ್ನು ರಶ್ಮಿ ನೆನಪಿಸಿಕೊಂಡಿದ್ದರೆ ಸಾಕಿತ್ತು, ತನ್ನ ಸುತ್ತ ಬೆಳೆದ ವಿವಾದಗಳ ಬಗ್ಗೆ ಮಾತನಾಡಿದ್ದರೆ ಸಾಕಿತ್ತು.

Advertisements

Leave a Reply

%d bloggers like this: