ಡಿಸೆಂಬರ್​ ನಲ್ಲಿ ತೆರೆಗೆ ಅಪ್ಪಳಿಸಲಿರುವ ‘ಅವನೇ ಶ್ರೀಮನ್ನಾರಾಯಣ’ – ಚಿತ್ರದ ವಿಶೇಷತೆಗಳೇನು ಗೊತ್ತಾ…?

ಉಳಿದವರು ಕಂಡಂತೆ ಚಿತ್ರದ ನಿರ್ದೇಶಿಸಿ ಸೈ ಎನಿಸಿಕೊಂಡ ನಟ ರಕ್ಷಿತ್​ ಮತ್ತೊಂದು ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಬರಲು ಸಜ್ಜಾಗಿದ್ದಾರೆ.

ಕಿರಿಕ್​ ಪಾರ್ಟಿ ಚಿತ್ರದ ಖ್ಯಾತಿಯ ನಟ ರಕ್ಷಿತ್​ ಶೆಟ್ಟಿ ಈಗ ‘ಅವನೇ ಶ್ರೀಮನ್ನಾರಾಯಣ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಕ್ಷಿತ್​ ರ ಬಹು ನಿರೀಕ್ಷಿತ ಚಿತ್ರವಾಗಿರುವ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್​ ವಿಭಿನ್ನ ಲುಕ್​ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಪ್ರಾರಂಭವಾದಾಗಿನಿಂದ ಗಮನ ಸೆಳೆದಿರುವ ಚಿತ್ರವು ಪೋಸ್ಟರ್​ ಮೂಲಕ ಗಮನ ಸೆಳೆದಿದೆ.

ಈ ಹಿಂದಿನ ಚಿತ್ರಗಳಿಗಿಂತ ಭಿನ್ನ ಮ್ಯಾನರಿಸಂನಲ್ಲಿ ರಕ್ಷಿತ್​ ಕಾಣಿಸಲಿದ್ದಾರೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸುವ ಮೂಲಕ ರಕ್ಷಿತ್​ ಅಭಿಮಾನಿಗಳ ಕುತೂಹಲವನ್ನು ತಣಿಸಿದ್ದಾರೆ.

ಶ್ರೀಮನ್ನಾರಾಯಣ ಈ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್ 27 ರಂದು ಬಹುಭಾಷೆಗಳಲ್ಲಿ ಕರ್ನಾಟಕ ಸೇರಿ ಇತರ ರಾಜ್ಯಗಳಲ್ಲಿಯೂ ತೆರೆ ಕಾಣಲಿದೆ. ಈ ಮಾಹಿತಿಯನ್ನು ಸ್ವತಃ ರಕ್ಷಿತ್​ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಡಿ.27 ರಂದು ಕಿರಿಕ್​ ಪಾರ್ಟಿ ಚಿತ್ರವು ಬಿಡುಗಡೆಯಾಗಿ ನಾಲ್ಕು ವರ್ಷಗಳಾಗುತ್ತವೆ.ಈ ಸಂಭ್ರವನ್ನೂ ಇದೇ ದಿನ ಆಚರಿಸಲಾಗುತ್ತದೆ ಎಂದು ರಕ್ಷಿತ್​ ಹೇಳಿದ್ದಾರೆ.

ಚಿತ್ರವು ಹಲವು ವಿಶೇಷಗಳಿಂದ ಕೂಡಿದೆ. ಚಿತ್ರವು ಬಹುಭಾಷೆಯಲ್ಲಿ ನಿರ್ಮಾಣವಾಗಿದೆ. ತೆಲುಗು ಅವತರಣಿಕೆಯ ಚಿತ್ರಕ್ಕೆ ಟಾಲಿವುಡ್​ ನ ಖ್ಯಾತ ನಾಮ ಚಿತ್ರ ಸಾಹಿತಿಯಾದ ರಾಮಜೋಗಯ್ಯ ಶಾಸ್ತ್ರಿ ಗೀತ ರಚನೆ ಮಾಡಿದ್ದಾರೆ. ಇವರು ಈ ಮುನ್ನ ದರ್ಶನ್​ ರ ಕುರುಕ್ಷೇತ್ರ ಮತ್ತು ಸುದೀಪ್​ ರ ಪೂಲ್ವಾನ್​ ಚಿತ್ರದ ತೆಲುಗು ಅವತರಣಿಕೆಯ ಚಿತ್ರಗಳಿಗೂ ರಾಮಜೋಗಯ್ಯ ಲೇಖನಿ ಹಿಡಿದಿದ್ದರು.

ಶ್ರೀಮನ್ನಾರಾಯಣ ಚಿತ್ರತಂಡವು ಅ.1 ರಿಂದಲೇ ಅಧಿಕೃತವಾಗಿ ಚಿತ್ರಕ್ಕೆ ಪ್ರಮೋಷನ್ ಕಾರ್ಯ ಆರಂಭಿಸಿದೆ. ನಿರ್ಮಾಪಕ ಮಲ್ಲಿಕಾರ್ಜುನಯ್ಯ ಹಲವು ನಿರ್ಮಾಣ ಸಂಸ್ಥೆಗಳೊಂದಿಗೆ ಚಿತ್ರ ಹಂಚಿಕೆಯ ಕುರಿತಂತೆ ಮಾತುಕತೆ ನಡೆಸಿದ್ದಾರೆ.

ಚಿತ್ರದ ಇತರೆ ಭಾಷೆಗಳ ಡಬ್ಬಿಂಗ್​ ಕಾರ್ಯವು ಪ್ರಗತಿಯಲ್ಲಿದೆ. ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಡಬ್ಬಿಂಗ್​ ಕಾರ್ಯ ಪೂರ್ಣಗೊಂಡಿದೆ. ತೆಲುಗಿನಲ್ಲೂ ಪೂರ್ಣಗೊಳ್ಳುವ ಹಂತದಲ್ಲಿದೆ. ಹಿಂದಿ ಭಾಷೆಯಲ್ಲಿ ಆರಂಭವಾಗಿದೆ.

ಸಚಿನ್​ ರವಿ ಮೊದಲ ಬಾರಿಗೆ ಶ್ರೀಮನ್ನಾರಾಯಣನಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಮನ್ನಾರಾಯಣ ಚಿತ್ರಕ್ಕೆ ಪುಷ್ಕರ ಮಲ್ಲಿಖಾರ್ಜುನಯ್ಯ ಮತ್ತು ಎ ಕೆ ಪ್ರಕಾಶ್​ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್​ ಲೋಕನಾಥ್​ ಮತ್ತು ಚರಣ್​ ರಾಜ್​ ರಾಗ ಸಂಗೀತ ನೀಡಿದ್ದಾರೆ.

ಶ್ರೀಮನ್ನಾರಾಯಣ ನವಿರು ಪ್ರೇಮ ಮತ್ತು ಹಾಸ್ಯ ಮಿಶ್ರಿ ಕಥೆಯಾಗಿದೆ. ಕರ್ಮ್​ ಚಾವ್ಲಾ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್​ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಬಾಲಾಜಿ ಮನೋಹರ್​ ತಾರಾಗಣದಲ್ಲಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: