ಭಿನ್ನ ಶೀರ್ಷಿಕೆಯ ಚಿತ್ರ ‘ಐ 1’ ಟೀಸರ್​ ರಿಲೀಸ್​​, ಸಸ್ಪೆನ್ಸ್​ ಕಥೆಯ ಮೂಲಕ ಕುತೂಹಲ ಮೂಡಿಸಿದ ಹೊಸಬರ ಚಿತ್ರ

ಶೀರ್ಷಿಕೆ ಮೂಲಕ ಗಮನ ಸೆಳೆದಿರುವ ಚಿತ್ರ ‘ಐ 1’ ಟೀಸರ್​ ಬಿಡುಗಡೆ, ಭಿನ್ನ ಕಥೆಯ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರಗಳ ಸಂಖ್ಯೆ ಬೆಳೆಯುತ್ತಿದೆ. ಆ ಸಾಲಿಗೆ ಹೊಸ ಚಿತ್ರವೊಂದು ಸೇರ್ಪಡೆಯಾಗಿದೆ. ಭಿನ್ನ ಶೀರ್ಷಿಕೆಯನ್ನಿಟ್ಟುಕೊಂಡು ವಿಭಿನ್ನ ಮಾದರಿಯ ಕಥೆಯ ಹೇಳಹೊರಟಿರುವ ಚಿತ್ರ ‘ಐ 1’ ಟೀಸರ್​ ಗುರುವಾರ, ಅ.31 ರಂದು ಲಹರಿ ಮ್ಯೂಸಿಕ್​ ಯೂಟ್ಯೂಬ್​ ಚಾನೆಲ್​ ನಲ್ಲಿ ಬಿಡುಗಡೆಯಾಗಿದೆ.

ಐ 1 ಚಿತ್ರದ ಟೀಸರ್​ ಬಿಡುಗಡೆಯ ಒಂದು ದಿನದ ನಂತರ ತನ್ನ ವೀಕ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಚಿತ್ರತಂಡವು ಶುಕ್ರವಾರ, ನ.1 ರಂದು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದೆ.

ಟೀಸರ್​ ಏನು ಹೇಳುತ್ತದೆ?
ಚಿತ್ರದ ಟೀಸರ್​ ಜಾಲತಾಣಿಗರ ಗಮನ ಸೆಳೆದಿದೆ. ತನ್ನ ಭಿನ್ನ ಕಥೆಯ ಮೂಲಕ ಭರವಸೆ ಹುಟ್ಟಿಸಿದೆ. ಟೀಸರ್​ ನಲ್ಲಿ ಕಂಡು ಬರುವ ನಾಯಕನ ಚಡಪಡಿಕೆಯ ದೃಶ್ಯಗಳು, ಕೆಲವು ಕುತೂಹಲದ ದೃಶ್ಯಗಳು, ಸಸ್ಪೆನ್ಸ್​, ಥ್ರಿಲ್ಲರ್​ ಅಂಶಗಳು ಟೀಸರ್​ ನಲ್ಲಿ ಕಾಣಸಿಗುತ್ತವೆ. ಚಿತ್ರದ ನಿರ್ದೇಶಕರು ಹೊಸ ರೀತಿಯ ಕಥೆಯನ್ನು ಹೇಳಹೊರಟಿದ್ದಾರೆ ಎಂದು ಭಾಸವಾಗುತ್ತದೆ. ಚಿತ್ರದ ಬಗ್ಗೆ ಟೀಸರ್​ ಭರವಸೆ ಮೂಡಿಸಿದೆ.

ಟೀಸರ್​ ಮೆಚ್ಚಿರುವ ಪ್ರೇಕ್ಷಕ ಚಿತ್ರದ ತಾಂತ್ರಿಕ ಅಂಶಗಳ ಮೂಲಕ ಚಿತ್ರಕಥೆಯು ಉತ್ತಮವಾಗಿದೆ ಎಂದು ಹೊಗಳಿದ್ದಾರೆ. ಅಲ್ಲದೆ ಐ 1 ಟೀಸರ್​ ನೋಡಿ ಹೊಸ ತಂಡದ ಈ ಭಿನ್ನ ಪ್ರಯತ್ನಕ್ಕೆ ಶುಭ ಕೋರಿದ್ದಾರೆ.

ಚಿತ್ರಕ್ಕೆ ರಾಜ್​ ಕುಮಾರ್​ ಆರ್​ ಎಸ್​ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಎಸ್​ ಪಿ ಪಿಕ್ಚರ್ಸ್​ ಬ್ಯಾನರ್​ ನಡಿ ನಿರ್ಮಾಣವಾಗಿರುವ ಚಿತ್ರಕ್ಕೆ ಶೈಲಜಾ ಪ್ರಕಾಶ್​ ಬಂಡವಾಳ ಹೂಡಿದ್ದಾರೆ. ವಿಬಿನ್​ ಅವರ ರಾಗ ಸಂಯೋಜನೆ ಚಿತ್ರಕ್ಕಿದ್ದು ಶಿನೋಬ್​ ಅವರು ಕ್ಯಾಮರಾ ಹಿಡಿದಿದ್ದಾರೆ.

ಐ 1 ಚಿತ್ರದಲ್ಲಿ ರಂಜನ್​ ಎಂಎಸ್​, ಬಿ ಧೀರಜ್​ ಪ್ರಸಾದ್​, ಕಿಶೋರ್​ ಎಸ್​ ಮತ್ತು ಇನ್ನಿತರರು ತೆರೆ ಹಂಚಿಕೊಂಡಿದ್ದಾರೆ.

ಟೀಸರ್​ ಮೂಲಕ ಗಮನ ಸೆಳೆದಿರುವ ಚಿತ್ರತಂಡವು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಸಜ್ಜಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: