ಕಬ್ಬಿನ ಗದ್ದೆಯಲ್ಲಿ ಪರೇಡ್ : PFI ನ 16 ಮಂದಿ ಆರೆಸ್ಟ್

ಕಬ್ಬಿನ ಗದ್ದೆಯಲ್ಲಿ ಅನುಮಾನಸ್ಪದವಾಗಿ ರಹಸ್ಯ ಸಭೆ ಮತ್ತು ಪರೇಡ್ ಗಳನ್ನು ನಡೆಸುತ್ತಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI) ಸಂಘಟನೆಯ 16 ಸದಸ್ಯರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಕೆಆರ್ ಪೇಟೆ ತಾಲೂಕಿನ ಆಲಂಬಾಡಿಕಾವಲು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಇವರ ರಹಸ್ಯ ಸಭೆ ಮತ್ತು ಪರೇಡ್ ಕುರಿತಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಈ ನಡುವೆ PFI ಚಟುವಟಿಕೆಯನ್ನು ಖಂಡಿಸಿರುವ ಹಿಂದೂ ಪರ ಸಂಘಟನೆಗಳು ಅಕ್ಟೋಬರ್ 31 ರಂದು ಕೆ ಆರ್ ಪೇಟೆ ಬಂದ್ ಗೆ ಕರೆ ನೀಡಿವೆ.

ಇನ್ನು ಈ ಸಭೆಯನ್ನು ರೌಡಿ ಶೀಟರ್ ಮುಬಾರಕ್ ಷರೀಫ್ ಎಂಬಾತ ಆಯೋಜಿಸಿದ್ದ ಎಂದು ಗೊತ್ತಾಗಿದೆ. ಕಾನೂನು ಬಾಹಿರವಾಗಿ ಸಭೆ ನಡೆಸುತ್ತಿರುವ ಮಾಹಿತಿ ಲಭಿಸುತ್ತಿರುವಂತೆ ದಾಳಿ ನಡೆಸಿದ ಪೊಲೀಸರು ಮುಬಾರಕ್ ಸೇರಿ15 ಮಂದಿ ಮಂದಿ ಯುವಕರನ್ನು ಬಂಧಿಸಿದ್ದಾರೆ. ಇವರೆಲ್ಲರು 30 ವರ್ಷದ ಒಳಗಿನ ಯುವಕರು ಎಂದು ಗೊತ್ತಾಗಿದೆ.

ಇದೀಗ ಯುವಕರ ವಿರುದ್ಧ  ಪೂರ್ವಾನುಮತಿ ಪಡೆಯದೆ ಗೌಪ್ಯ ಸಭೆ ನಡೆಸಿರುವುದು ಕ್ರಿಮಿನಲ್ ಅಪರಾಧವಾಗಿರುವುದರಿಂದ ಐಪಿಎಸ್ ಸೆಕ್ಷನ್ 117 ( 10ಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಅಕ್ರಮ ಚಟುವಟಿಕೆ ) ಮತ್ತು 153 ( ಗಲಭೆ ಉತ್ತೇಜನ ) ಆರೋಪದಡಿಯಲ್ಲಿ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು. ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ

ಈ ನಡುವೆ ಸೋಮವಾರ ಪಿಎಫ್ಐ ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಸಂಘಟನೆ ಸದಸ್ಯರು ಪ್ರತಿಭಟನೆ ಕೂಡಾ ನಡೆಸಿದರು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191029115339″); document.getElementById(“div_6020191029115339”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: