Advertisements

ಬಿಎಸ್ವೈ ಸರ್ಕಾರ ಉಳಿಸೋದು ಉರುಳಿಸೋದು ನನ್ನ ಕೈಯಲ್ಲಿದೆ – ಕುಮಾರಸ್ವಾಮಿ

ಸರಕಾರ ಉರುಳಿಸುವ ಆತುರ ನನಗಿಲ್ಲ. ಆದರೆ ನೆರೆ ಸಂತ್ರಸ್ತರ ಮತ್ತು ರಾಜ್ಯದ ಜನತೆ ಹಿತೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರವನ್ನು ಉಳಿಸಿಕೊಳ್ಳುವುದು ಮತ್ತು ಬಿಡುವುದು ನನ್ನ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಶನಿವಾರ ಮಾತನಾಡಿದ ಅವರು, ಒಂದು ಸರ್ಕಾರ ಅಧಿಕಾರದಿಂದ ಕೆಳಗಿಳಿಸಿ ಚುನಾವಣೆಗೆ ಸಜ್ಜಾದರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುವವರು ಯಾರು? ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆಗೆ ಹೋಗುವುದು ಸರಿಯಲ್ಲ. ಹಾಗಾಗಿ ಸದ್ಯ ಆಡಳಿತ ನಡೆಸುತ್ತಿರುವ ಯಡಿಯೂರಪ್ಪ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಬೇಕು ಎಂಬುದು ಜನತೆ ಪರವಾಗಿ ನಾನು ಆಶಿಸುತ್ತೇನೆ ಎಂದರು. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೊಸದಾಗಿ ಚುನಾವಣೆ ನಡೆಯುವ ಕನಸು ಕಾಣುತ್ತಿದ್ದಾರೆ. ಅದು ಕೇವಲ ಹಗಲು ಗನಸಾಗಲಿದೆ ಎಂದು ತಿರುಗೇಟು ನೀಡಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆಸಲು ಸರ್ಕಾರವು ಚುನಾವಣೆ ಆಯೋಗಕ್ಕೆ 15 ಕೋಟಿ ರೂ. ನೀಡಬೇಕು. ಇನ್ನೂ 224 ಕ್ಷೇತ್ರಗಳಿಗೆ ಚುನಾವಣೆ ನಡೆಸಬೇಕಾದರೆ 240 ಕೋಟಿ ರೂ. ನೀಡಬೇಕು. ಇಂತಹ ನೆರೆ ಪರಿಸ್ಥಿತಿಯಲ್ಲಿ ಚುನಾವಣೆಗಳನ್ನು ನಡೆಸುವುದು ಅವಶ್ಯಕತೆ ಇಲ್ಲ. ಹಾಗಾಗಿ ಸರ್ಕಾರ ಉಳಿಸಿಕೊಳ್ಳುವುದು ಅಥವಾ ಬಿಡುವುದು ನನ್ನ ಕೈಯಲ್ಲಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

Advertisements

Leave a Reply

%d bloggers like this: