ಜೈಲಿನಲ್ಲಿದ್ದ ಸಂದರ್ಭದಲ್ಲಿ ಕಾನೂನು ಗಾಳಿಗೆ ತೂರಿದ್ದ ಡಿಕೆಶಿ – ಸಾಥ್ ಕೊಟ್ಟಿದ್ದ ಪರಮೇಶ್ವರ್

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಜೈಲು ಸೇರಿ, ಜಾಮೀನು ಮೇಲೆ ಬಿಡುಗಡೆಗೊಂಡಿರುವ ಡಿಕೆಶಿ ಜೈಲಿನಲ್ಲಿದ್ದ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.

ಇದನ್ನು ಡಿಕೆಶಿಯವರೇ ಬಹಿರಂಗಪಡಿಸಿದ್ದು, ಡಿಕೆಶಿ ಭೇಟಿಗಾಗಿ ನೂರಾರು ವಿಐಪಿಗಳು ಕ್ಯೂ ನಿಂತಿದ್ದರು. ಆದರೆ ಇಡಿ ಅಧಿಕಾರಿಗಳು ಹಾಗೂ ಜೈಲಿನ ಅಧಿಕಾರಿಗಳು ಇದಕ್ಕೆ ಅವಕಾಶ ಕೊಡುತ್ತಿರಲಿಲ್ಲ.

ಈ ನಡುವೆ ಡಾ.ಜಿ. ಪರಮೇಶ್ವರ್ ಡಾಕ್ಟರ್ ಎಂದು ಹೇಳಿ ಆಸ್ಪತ್ರೆಗೆ ತೆರಳಿ ಡಿಕೆಶಿ ಭೇಟಿ ಮಾಡಿ ಬಂದಿದ್ದಾರೆ. ಪರಮೇಶ್ವರ್ ಹೆಸರಿನ ಮುಂದಿರುವ ಡಾ. ಅನ್ನು ಗಮನಿಸಿ ಅಧಿಕಾರಿಗಳು ಒಳ ಪ್ರವೇಶಕ್ಕೆ ಅನುಮತಿ ನೀಡಿದಂತಿದೆ.

ಅವರಿಗೇನು ಗೊತ್ತಿತ್ತು ಪರಮೇಶ್ವರ್ ಅವರು ಡಾಕ್ಟರೇಟ್ ಪಡೆದಿದ್ದು ಸಸ್ಯ ಸೈಕಾಲಜಿಯಲ್ಲಿ ಎಂದು. ಆದರೆ ಡಾಕ್ಟರ್ ವೇಷ ತೊಟ್ಟ ಪರಮೇಶ್ವರ್ ಡಿಕೆಶಿ ಭೇಟಿ ಮಾಡಿ ಬಂದಿದ್ದಾರೆ. ಅಲ್ಲಿಗೆ ಜೈಲು ಮತ್ತು ಇಡಿ ಅಧಿಕಾರಿಗಳ ಕಣ್ಣಿಗೆ ಕಾನೂನು ರಚಿಸುವ ಮಂದಿಯೇ ಮಣ್ಣೆರಚಿ ಬಂದಿದ್ದಾರೆ.

ಇದನ್ನು ಡಿಕೆಶಿಯವರೇ ಹೇಳಿದ್ದು, ತಿಹಾರ್ ಜೈಲಿನ ಪೊಲೀಸರು ಪ್ರತಿಯೊಂದಕ್ಕೂ ಕಾನೂನು ಮಾತನಾಡುತ್ತಾರೆ. ಯಾರೊಬ್ಬರ ಭೇಟಿಗೂ ಅವಕಾಶ ಕೊಡುತ್ತಿರಲಿಲ್ಲ. ಆಸ್ಪತ್ರೆ ಕರೆ ತಂದ ವೇಳೆ ಪರಮೇಶ್ವರ್ ಅವರನ್ನು ಡಾಕ್ಟರ್ ಎಂದು ಹೇಳಿ ಒಳಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದೆ. ಸೂಟು ಬೂಟು ಧರಿಸಿ ಒಂದು ಸ್ಟೆತಸ್ಕೋಪ್ ಹಾಕಿಕೊಂಡು ಬನ್ನಿ ಎಂದು ಹೇಳಿದ್ದೆ. ಹಾಗೇ ಬಂದು ಭೇಟಿ ಮಾಡಿ ಹೋದರು ಎಂದು ಡಿಕೆಶಿ ಹೇಳಿದ್ದಾರೆ.

ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಿಂಬದಿಯಿಂದ ಬಂದು ಭೇಟಿ ಮಾಡಿಕೊಂಡು ಹೋಗಿದ್ದರು. ಸಿದ್ದರಾಮಯ್ಯ ಆಸ್ಪತ್ರೆಗೆ ಬಂದರೂ ಭೇಟಿ ಮಾಡಲು ಕೊಡಲಿಲ್ಲ ಎಂದು ಡಿಕೆಶಿ ತಮ್ಮ ಜೈಲು ವಾಸದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ.

ಜೈಲು ವಾಸದ ಸಂದರ್ಭದಲ್ಲೇ ಕಾನೂನು ರಚಿಸುವ ಮಂದಿ ಹೀಗೆ ಕಾನೂನು ಮುರಿಯುತ್ತಾರೆ ಅಂದ ಮೇಲೆ ಅದರ ಹಿಂದಿನ ಮತ್ತು ಮುಂದಿನ ಕಥೆಯನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: