Advertisements

ಆ್ಯಕ್ಟಿವಾ ಹೋಂಡಾ ಖರೀದಿಗೆ ಆತ ತಂದಿದ್ದು 83 ಸಾವಿರ ರೂಪಾಯಿಯ ನಾಣ್ಯಗಳನ್ನು

ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಹನ ಕೊಂಡರೆ ಒಳ್ಳೆಯದು ಎಂದು ಅನೇಕರು ಮುಗಿಬಿದ್ದು ವಾಹನಗಳನ್ನು ಖರೀದಿಸುತ್ತಾರೆ. ಅದರಂತೆ ಮಧ್ಯಪ್ರದೇಶದ ಸಾತ್ನಾದ ನಿವಾಸಿ ರಾಕೇಶ್‌ ಕುಮಾರ್‌ ಗುಪ್ತಾ ಎಂಬವರು, ದೀಪಾವಳಿ ಹಿನ್ನೆಲೆಯಲ್ಲಿ ಹೋಂಡಾ ಆ್ಯಕ್ಟಿವಾ ಖರೀದಿಸಿದ್ದಾರೆ.

ಅದರಲ್ಲೇನು ವಿಶೇಷ ಅಂತೀರಾ?

ಆ್ಯಕ್ಟಿವಾಗೆ ತಗುಲಿದ 83,000 ರೂ.ಗಳನ್ನು ಅವರು ಸಂಪೂರ್ಣವಾಗಿ ನಾಣ್ಯಗಳಲ್ಲಿ ಪಾವತಿಸಿದ್ದಾರೆ. ಅವರು ನೀಡಿದ್ದ ನಾಣ್ಯಗಳು ತುಂಬಿದ್ದ ಚೀಲದಲ್ಲಿ ಬಹುತೇಕ ನಾಣ್ಯಗಳು 5 ಮತ್ತು 10 ರೂ.ಗಳದ್ದಾಗಿದ್ದವು. ಇವುಗಳನ್ನೆಲ್ಲಾ ಎಣಿಸಲು ಶೋ ರೂಂನ ಸಿಬ್ಬಂದಿ ಬರೋಬ್ಬರಿ 3 ಗಂಟೆಗಳನ್ನು ವ್ಯಯಿಸಿದರಂತೆ!

Advertisements

Leave a Reply

%d bloggers like this: