Peruser!!! It is a trendy supermarket: read articles on day to day basis in English & Kannada. Read,Share & Care
ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ಸ್ವಯಂಘೋಷಿತ ದೇವಮಾನವ ‘ಕಲ್ಕಿ ಭಗವಾನ್’ ವಿದೇಶದಲ್ಲಿ ₹100 ಕೋಟಿಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಹವಾಲಾ ಮಾರ್ಗದ ಮೂಲಕ ಹಣವನ್ನು ಕಲ್ಕಿ ವಿದೇಶಗಳಿಗೆ ಸಾಗಿಸಿದ್ದು, ಸುಮಾರು ₹600 ಕೋಟಿಯಷ್ಟು ಅಘೋಷಿತ ಆದಾಯವನ್ನು ಹೊಂದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಅಪ್ಪ ಮತ್ತು ಮಗ ವಿದೇಶಗಳಲ್ಲಿ ಆಸ್ತಿ ಖರೀದಿಸಿದ್ದಾರೆ ಮತ್ತು ಹೂಡಿಕೆ ಮಾಡಿದ್ದಾರೆ. ಇವು ದುಬೈ, ಆಫ್ರಿಕಾ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಗಳಲ್ಲಿವೆ. ಇತರ ದೇಶಗಳಲ್ಲಿಯೂ ಆಸ್ತಿ ಇವೆ ಎಂದು ಐಟಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
ಈ ನಡುವೆ ಕಲ್ಕಿ ಆಶ್ರಮದಿಂದ ಹೇಳಿಕೆಯೊಂದು ಪ್ರಕಟವಾಗಿದ್ದು, ಆದಾಯ ತೆರಿಗೆ ಇಲಾಖೆಯ ಶೋಧ ನಡೆದಿದೆ. ಶೋಧದ ಬಗ್ಗೆ ಪ್ರಕಟವಾಗುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶ ಇಲ್ಲ.‘ಆಶ್ರಮವು ದೇಶದ ಕಾನೂನನ್ನು ಗೌರವಿಸುತ್ತದೆ. ನಮ್ಮ ಯಾವುದೇ ಚಟುವಟಿಕೆ ಕ್ರಮಬದ್ಧವಾಗಿಲ್ಲ ಎಂದಾದರೆ ನಾವು ಸರ್ಕಾರದ ನಿಯಮಗಳನ್ನು ಪಾಲಿಸಲು ಸಿದ್ಧ. ಎಲ್ಲವನ್ನೂ ನ್ಯಾಯಾಂಗದ ಮೂಲಕ ಎದುರಿಸಲಾಗುವುದು ಎಂದು ತಿಳಿಸಲಾಗಿದೆ..
ಈ ನಡುವೆ ಕಲ್ಕಿ ಕುಟುಂಬ ಬೇನಾಮಿ ಹೆಸರುಗಳಲ್ಲಿ ಭಾರಿ ಪ್ರಮಾಣದ ಆಸ್ತಿಯನ್ನು ಮಾಡಿಕೊಂಡಿರುವುದನ್ನು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಲ್ಕಿ ಅವರು ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದರು.
ದಾಳಿ ಸಂದರ್ಭದಲ್ಲಿ 64 ಕೋಟಿ ನಗದು, 20 ಕೋಟಿ ಯುಎಸ್ ಡಾಲರ್ ಮತ್ತು 90 ಕೋಟಿಯ ಮೊತ್ತದ ಚಿನ್ನವನ್ನು ವಿವಿಧ ಕಡೆಗಳಿಂದ ವಶಪಡಿಸಿಕೊಳ್ಳಲಾಗಿತ್ತು.