Advertisements

ಅಕ್ಟೋಬರ್ 25ಕ್ಕೆ ಮುಹೂರ್ತ ಫಿಕ್ಸ್ : ಡಿಕೆಶಿ ಬಿಡುಗಡೆಗೆ ಹಾರೈಸ್ತಾರ ನೊಣವಿನಕೆರೆ ಅಜ್ಜಯ್ಯ

ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಬಿಡುಗಡೆಗೆ ಇನ್ನಿಲ್ಲದ ಕಸರತ್ತು ಪ್ರಾರಂಭಗೊಂಡಿದೆ. ಜಾಮೀನು ಪಡೆಯಲು ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿರುವ ಕಾರಣ ಇದೀಗ ಮತ್ತೊಂದು ಮಾರ್ಗದಲ್ಲಿ ಪ್ರಯತ್ನ ಶುರುವಾಗಿರುವಂತಿದೆ.

ಮಾಧ್ಯಮಗಳ ವರದಿ ಪ್ರಕಾರ ನೊಣವಿನಕೆರೆ ಅಜ್ಜಯ್ಯ ಅವರನ್ನು ಭೇಟಿಯಾಗಲು ಡಿಕೆ ಶಿವಕುಮಾರ್ ಬಯಸಿದ್ದು, ಅಕ್ಟೋಬರ್ 25 ರಂದು ಅಜ್ಜಯ್ಯ ಮತ್ತು ಡಿಕೆಶಿ ಭೇಟಿ ನಡೆಯುವ ಸಾಧ್ಯತೆಗಳಿದೆಯಂತೆ.

ಡಿಕೆಶಿಯವರೇ ಭೇಟಿಯ ಇಚ್ಛೆ ವ್ಯಕ್ತಪಡಿಸಿದ್ದು, ಆಶೀರ್ವಾದ ಸಲುವಾಗಿ ದರ್ಶನ ಕೊಡಿ ಎಂದು ಡಿಕೆಶಿ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಅಜ್ಜಯ್ಯ ಅವರು ಡಿಕೆಶಿಯನ್ನು ಭೇಟಿಯಾಗುವ ಸಾಧ್ಯತೆಗಳಿದೆ.

Advertisements

Leave a Reply

%d bloggers like this: