Advertisements

ತೆಲುಗಿನ ಕ್ಯೂಟ್ ನಟಿಯ ಮಗಳೊಂದಿಗೆ ಕಾಣಿಸಿಕೊಂಡ ನಿಖಿಲ್ ಕುಮಾರಸ್ವಾಮಿ…!

ರಾಜಕೀಯ ತನಗೆ ಸಲ್ಲುವುದಿಲ್ಲ ಅನ್ನುವುದನ್ನು ಅರಿತುಕೊಂಡಿರುವ ನಿಖಿಲ್ ಕುಮಾರಸ್ವಾಮಿ ಮತ್ತೆ ಚಿತ್ರರಂಗಕ್ಕೆ ಮರಳುವ ನಿರ್ಧಾರ ಮಾಡಿದ್ದಾರೆ.

ನಿಖಿಲ್ ಅವರ ಮುಂದಿನ ಸಿನಿಮಾವನ್ನು ‘ಪೈಲ್ವಾನ್’ ಎಸ್‌. ಕೃಷ್ಣ ನಿರ್ದೇಶನ ಮಾಡುತ್ತಾರೆ ಅನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಆ ಸಿನಿಮಾಕ್ಕಾಗಿ ಪೂರ್ವಾಭಾವಿ ಕೆಲಸಗಳು ಕೂಡಾ ಪ್ರಾರಂಭವಾಗಿದೆಯಂತೆ.

ಈ ನಡುವೆ ಈ ಸಿನಿಮಾ ತೆಲುಗಿನಲ್ಲೂ ತೆರೆ ಕಾಣುವ ಸಾಧ್ಯತೆಗಳಿದೆ. ಇಂತಹುದೊಂದು ಅನುಮಾನಕ್ಕೆ ಕಾರಣವಾಗಿದ್ದು ನಿಖಿಲ್ ಕುಮಾರಸ್ವಾಮಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಕಿರುವ ಫೋಟೋ.

ಸದ್ಯ ನಿಖಿಲ್  ಹೈದರಾಬಾದ್‌ನಲ್ಲಿದ್ದು, ತೆಲುಗಿನ ಖ್ಯಾತ ನಟಿಯೊಬ್ಬರ ಮಗಳ ಜತೆಗಿರುವ  ಫೋಟೋವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಕಿದ್ದಾರೆ.

ಲಕ್ಷ್ಮೀ ಮಂಚು ಅವರ ಮಗಳೊಂದಿಗೆ ಫೋಸ್ ಕೊಟ್ಟಿರುವ ನಿಖಿಲ್, ‘ನನ್ನ ಪ್ರೀತಿಯ ಸ್ನೇಹಿತೆ ಲಕ್ಷ್ಮೀ ಮಂಚು ಅವರ ಮಗಳು ಆ್ಯಪಲ್‌ ಬ್ಯೂಟಿಯೊಂದಿಗೆ’ ಎಂದು ಬರೆದುಕೊಂಡಿದ್ದಾರೆ.

ಲಕ್ಷ್ಮೀ ಮಂಚು, ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದು. ನಟಿಯಾಗಿ, ನಿರ್ಮಾಪಕಿಯಾಗಿ, ನಿರೂಪಕಿಯಾಗಿ ಲಕ್ಷ್ಮೀ ಹೆಸರು ಮಾಡಿದ್ದಾರೆ. 2006ರಲ್ಲಿ ಅವರು ಆನಂದ್ ಶ್ರೀನಿವಾಸನ್‌ ಅವರೊಂದಿಗೆ ವಿವಾಹವಾಗಿದ್ದರು. ಅವರಿಗೆ ವಿದ್ಯಾ ನಿರ್ವಾಣ ಮಂಚು ಆನಂದ್ ಎಂಬ ಮುದ್ದಾದ ಮಗಳಿದ್ದಾಳೆ. ಅಂದ ಹಾಗೇ ಲಕ್ಷ್ಮಿ ಮಂಚು ತೆಲುಗಿನ ಖ್ಯಾತ ನಟ ಮೋಹನ್‌ ಬಾಬು ಅವರ ಪುತ್ರಿ,

ಇನ್ನು ಲಕ್ಷ್ಮೀ ಮಂಚು ಕುಟುಂಬ ಮಾತ್ರವಲ್ಲದೆ, ‘ಜಾಗ್ವಾರ್‌’ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಎಸ್‌ಎಸ್‌ ಥಮನ್ ಹಾಗೂ ಜಾಗ್ವಾರ್ ತೆಲುಗು ವರ್ಷನ್‌ಗೆ ಸಾಹಿತ್ಯ ಬರೆದಿದ್ದ ರಾಮಜೋಗಯ್ಯ ಶಾಸ್ತ್ರೀ ಅವರನ್ನು ನಿಖಿಲ್ ಭೇಟಿಯಾಗಿದ್ದಾರೆ.

ಅಲ್ಲಿಗೆ ನಿಖಿಲ್ ತೆಲುಗಿನಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ನಿಖಿಲ್ ಇಳಿಯೋದು ಪಕ್ಕಾ ಆಗಿದೆ.

Advertisements

Leave a Reply

%d bloggers like this: