Advertisements

ಅವರಿಗೊಬ್ಬರಿಗೇನಾ….ನನಗೂ ಸಿಎಂ ಆಗ್ಬೇಕು…ಪಿಎಂ ಅಗ್ಬೇಕು ಅನ್ನುವ ಕನಸಿದೆ….

ಸಿದ್ದರಾಮಯ್ಯ ಅವರಿಗೆ ಮಾತ್ರ ಸಿಎಂ ಪಟ್ಟ ಕಾದು ಕುಳಿತಿಲ್ಲ. ನನಗೂ ಸಿಎಂ ಆಗಬೇಕು, ಪಿಎಂ ಆಗಬೇಕೆಂಬ ಆಸೆ ಇದೆ. ಪ್ರತಿಯೊಬ್ಬನಿಗೂ ಉನ್ನತ ಸ್ಥಾನಕ್ಕೆ ಹೋಗಬೇಕೆಂಬ ಆಸೆ ಇದ್ದೇ ಇರುತ್ತದೆ. ಆ ಆಸೆಗಳನ್ನ ಜನರು ತೀರಿಸಬೇಕು ಎಂದು ಅನರ್ಹ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಕಾಲಿಡುವುದಿಲ್ಲ. ಆ ಪ್ರಶ್ನೆಯೇ ನನ್ನ ಮುಂದಿಲ್ಲ. ಸಿದ್ದರಾಮಯ್ಯ ಮೇಲೆ ವೈಯಕ್ತಿಕ ದ್ವೇಷವಿಲ್ಲ. ಅವರ ಮೇಲೆ ನನಗೆ ಪ್ರೀತಿ ಇತ್ತು ಅಂದಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ನಮ್ಮ ಮೇಲೆ ಕೃತಜ್ಞತೆಯಿದೆ. ನಮ್ಮಿಂದ ಸರ್ಕಾರ ಬಂತು ಎಂಬ ಅಭಿಮಾನ ನಮಗೂ ಇದೆ. ಈ ಕೃತಜ್ಞತೆ ಇದೇ ರೀತಿ ಇರುತ್ತದೆ ಅನ್ನೋ ಭಾವನೆ ಇದೆ ಎಂದ ಬಿಸಿ ಪಾಟೀಲ್, ನಮಗೆ ಸಮ್ಮಿಶ್ರ ಸರ್ಕಾರದಲ್ಲಿ ಅನ್ಯಾಯವಾಗಿತ್ತು. ಅದನ್ನು ಬಿಜೆಪಿ ಸರ್ಕಾರ ಸರಿ ಮಾಡಿದೆ ಅಂದರು.

Advertisements

Leave a Reply

%d bloggers like this: