Advertisements

ರೌಡಿ ಶೀಟರ್ ಭೇಟಿಯಾದ ವೇಣುಗೋಪಾಲ್ : ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಎಸ್ ಯಡಿಯೂರಪ್ಪ ಅವರ ಮೇಲೂ ಸಾಕಷ್ಟು ಪ್ರಕರಣಗಳಿದೆ. ಎಲ್ಲಾ ಪಕ್ಷಗಳಲ್ಲೂ ಸಾಕಷ್ಟು ರಾಜಕಾರಣಿಗಳ ಮೇಲೆ ಕ್ರಿಮಿನಲ್, ಅತ್ಯಾಚಾರ, ದರೋಡೆ ಪ್ರಕರಣಗಳ ಆರೋಪ ಇದೆ ಅನ್ನುವ ಮೂಲಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ರೌಡಿ ಶೀಟರ್ ಇಸ್ತಿಯಾಕ್ ಅಹಮದ್ ಭೇಟಿಯನ್ನು  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.

ಇಸ್ತಿಯಾಕ್ ಮೇಲಿರುವ ಪ್ರಕರಣಗಳು ಮುಕ್ತಾಯವಾಗಿವೆ. ಪ್ರಕರಣಗಳ ಆರೋಪದ ಬಗ್ಗೆ ಅಂತಿಮ ತೀರ್ಮಾನ ಮಾಡಬೇಕಿರುವುದು ನ್ಯಾಯಾಲಯ ಹಾಗೂ ಜನರು ಅಂದ ದಿನೇಶ್ ಇಸ್ತಿಯಾಕ್ ಪತ್ನಿ ಶಿವಾಜಿನಗರದ ವಾರ್ಡ್ ಸದಸ್ಯರು. ಹೀಗಾಗಿ ಪಕ್ಷದ ಕಚೇರಿಗೆ ಅವರು ಆಗಮಿಸಿದ್ದಾರೆ. ಈ ಹಿಂದೆಯೂ ಅವರು ಕಚೇರಿಗೆ ಬಂದಿದ್ದರು ಎಂದು ಹೇಳಿದ್ದಾರೆ.

ಐಎಎಂ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಮನ್ಯೂರ್ ನಿಂದ 2 ಕೋಟಿ ಪಡೆದಿದ್ದ ಆರೋಪದ ಮೇಲೆ ಎಸ್ಐಟಿ ಇಸ್ತಿಯಾಕ್ ನನ್ನು ಬಂಧಿಸಿತ್ತು. ಅಷ್ಟು ಮಾತ್ರವಲ್ಲದೆ ಇಸ್ತಿಯಾಕ್ ಮೇಲೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 48.

ಇಂತಹ ಹಿನ್ನಲೆ ವ್ಯಕ್ತಿಯನ್ನು ಭೇಟಿಯಾದ ವೇಣುಗೋಪಾಲ್ ಉಪಚುನಾವಣೆ ಕುರಿತಂತೆ ಸಮಾಲೋಚನೆ ನಡೆಸಿದ್ದರು. ಈ ವಿಡಿಯೋ ಬುಧವಾರ ವೈರಲ್ ಆಗಿತ್ತು.

ದಿನೇಶ್ ಗುಂಡೂರಾವ್ ಮಾತು ಕೇಳಿದ್ರೆ ರೌಡಿಸಂ ಹಿನ್ನಲೆ ಮಂದಿ ರಾಜಕೀಯದಲ್ಲಿ ಇದ್ದರೇನು ಅನ್ನುವಂತಿದೆ. ಹೌದು ಎಲ್ಲಾ ಪಕ್ಷಗಳಲ್ಲೂ ರೌಡಿಸಂ ಹಿನ್ನಲೆಯ ಮಂದಿ ಇದ್ದಾರೆ.  ಹೀಗಾಗಿ ಪಕ್ಷಗಳು ಸ್ವಚ್ಛವಾಗಬೇಕು ಎಂದು ಜನ ಬಯಸುತ್ತಿರುವುದು.  ಆದರೆ ನಿಮ್ಮ ಮಾತು ಕೇಳಿದರೆ ರಾಜ್ಯ ಕಾಂಗ್ರೆಸ್ ಕ್ರಿಮಿನಲ್ ಗಳಿಂದ ಮುಕ್ತವಾಗುವ ಲಕ್ಷಣಗಳಲ್ಲಿ. ಅದರಲ್ಲೂ ಬಡವರ ದುಡ್ಡು ಲೂಟಿ ಮಾಡಿದ ಐಎಂಎ ಸಂಸ್ಥೆಯ ಮಾಲೀಕನಿಂದ ದುಡ್ಡು ಪೀಕಿದ ಆರೋಪಿಯನ್ನೇ ಪಕ್ಷದಲ್ಲಿ ಇಟ್ಟುಕೊಂಡಿಪರಿ ಅಂದ್ರೆ ಮುಂದಿನ ಚುನಾವಣೆಯಲ್ಲಿ ಐಎಂಎ ನಿಂದ ಮೋಸ ಹೋದವರು ಚಿಂತಿಸಲೇಬೇಕು.

Advertisements

Leave a Reply

%d bloggers like this: