ವಿಭಿನ್ನ ಕಥಾಹಂದರದ ಚಿತ್ರ ‘ಅಂದವಾದ’ ಟ್ರೈಲರ್​ ಬಿಡುಗಡೆ, ಪ್ರೇಮಕಥೆಯ ಮೂಲಕ ನಿರೀಕ್ಷೆ ಹೆಚ್ಚಿಸಿದ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಹೊಸಬರ ಚಿತ್ರಗಳು ಹೇರಳವಾಗಿ ಬರುತ್ತಿವೆ. ಅಂತಹ ಒಂದು ಹೊಸ ನಿರ್ದೇಶಕ, ನಟರ ಚಿತ್ರ ‘ಅಂದವಾದ’ ಟ್ರೈಲರ್​ ಸೋಮವಾರ ( ಅಕ್ಟೋಬರ್ 14) ರಂದು ಗುರುಕಿರಣ್​ ಯೂಟ್ಯೂಬ್​ ಚಾನೆಲ್​ ನಲ್ಲಿ ಬಿಡುಗಡೆಯಾಗಿ ಹೊಸ ಭರವಸೆ ಮೂಡಿಸಿದೆ.

ಬಿಡುಗಡೆಯಾದ ಒಂದು ದಿನದಲ್ಲೇ ಚಿತ್ರದ ಟ್ರೈಲರ್​ 5 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ಚಿತ್ರದ ನಿರೂಪಣೆ ಬಗ್ಗೆ ಜಾಲತಾಣಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೈಲರ್​ ನಲ್ಲಿ ಏನಿದೆ?

ಚಿತ್ರದ ಟ್ರೈಲರ್​ ನ ಪೂರ್ತಿ ನಾಯಕ, ನಾಯಕಿ ಆವರಿಸಿಕೊಂಡಿದ್ದಾರೆ. ಇದರ ಮೂಲಕ ಚಿತ್ರವು ಒಂದು ಸುಂದರ ಪ್ರೇಮ ಕಥನವನ್ನು ಹೇಳುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ. ಸಮುದ್ರದ ತೀರ ಪ್ರದೇಶದಲ್ಲಿ ನಾಯಕ ನಿಂತುಕೊಳ್ಳುವ ಮೂಲಕ ಟ್ರೈಲರ್​ ಪ್ರಾರಂಭವಾಗುತ್ತದೆ.

ನಾಯಕ, ನಾಯಕಿಯ ಪ್ರೇಮ ಸನ್ನಿವೇಶ, ತಾಕಲಾಟ, ಮೌನ ಸಂಭಾಷಣೆ ನೋಡುಗರನ್ನು ಸೆಳೆದಿಡುತ್ತದೆ. ನವಿರಾದ ಬಾಲ್ಯದ ಎಳೆಯೂ ಒಂದು ದೃಶ್ಯದಲ್ಲಿ ಕಾಣುತ್ತದೆ. ಒಟ್ಟಾರೆ ಚಿತ್ರವು ಯುವ ಮನಸ್ಸುಗಳಿಗೆ ಮುದ ನೀಡುತ್ತದೆ ಎಂಬುದನ್ನು ಟ್ರೈಲರ್​ ಬಿಚ್ಚಿಡುತ್ತದೆ.

ಚಿತ್ರವನ್ನು ಚಲ ಎಂಬುವವರು ನಿರ್ದೇಶನ ಮಾಡಿದ್ದಾರೆ. ಮಧುಶ್ರೀ ಗೋಲ್ಡನ್​ ಫ್ರೇಮ್ಸ್​ ಸಂಸ್ಥೆಯು ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಕ್ರಮ್​ ವರ್ಮನ್​ ರಾಗ ಸಂಯೋಜನೆ ಮಾಡಿದ್ದಾರೆ.

ಅಂದವಾದ ಚಿತ್ರದಲ್ಲಿ ಜೈ ನಾಯಕನಾಗಿದ್ದಾರೆ. ನಟಿ ಆಶಿಕಾ ರಂಗನಾಥ್​ ಅವರ ಅಕ್ಕ ಅನುಷಾ ರಂಗನಾಥ್​ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರು ಈ ಮುನ್ನ ಸೋಡಾಬುಡ್ಡಿ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆಯ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.

ಉಳಿದಂತೆ ಶ್ರೀಧರ್​, ಹರೀಶ್​ ರೈ, ಅಮರ್​ ಸಲ್ವಾ ತಾರಾಗಣದಲ್ಲಿದ್ದಾರೆ. ಅಂದವಾದ ಟ್ರೈಲರ್​ ಚಿತ್ರದ ಬಗ್ಗೆ ಭರವಸೆ ಮೂಡಿಸಿದೆ. ಚಿತ್ರವು ಇದೇ 25 ರಂದು ತೆರೆಗೆ ಅಪ್ಪಳಿಸಲಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: