Advertisements

ಈ ಶನಿವಾರದ ತನಕ ಮಾತ್ರ ರವಿ ಬೆಳಗೆರೆಗೆ ಮಹಾಮನೆಯ ವಾಸ್ತವ್ಯ ಭಾಗ್ಯ…

ಸಾಕಷ್ಟು ರಂಜಿಸುತ್ತಾರೆ ಎಂದು ಮಹಾಮನೆಗೆ ಕರೆಸಿಕೊಂಡಿದ್ದ ಪತ್ರಕರ್ತ ರವಿ ಬೆಳಗೆರೆ ಆರೋಗ್ಯ ಕೈ ಕೊಟ್ಟಿರುವ ಹಿನ್ನಲೆಯಲ್ಲಿ ಅವರನ್ನು ಅತಿಥಿಯೆಂದು ಪರಿಗಣಿಸಲಾಗಿದೆ.

ಈ ಸಂಬಂಧ ಬಿಗ್ ಬಾಸ್ ಮನೆಯಲ್ಲಿ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ.

ವೈದ್ಯರ ಸಲಹೆ ಹಿನ್ನಲೆಯಲ್ಲಿ ಶನಿವಾರದ ತನಕ ಮಾತ್ರ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿಯ ತನಕ ಅವರು ಬಿಗ್ ಬಾಸ್ ಮನೆಯ ಅತಿಥಿಯಾಗಿರಲಿದ್ದು, ಅತಿಥಿಯಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾದ ಎರಡನೇ ದಿನವೇ ಅನಾರೋಗ್ಯಕ್ಕೆ ತುತ್ತಾಗಿದ್ದ ಬೆಳಗೆರೆ ಪದ್ಮನಾಭ ನಗರ ಸೇರಿಕೊಂಡಿದ್ದರು. ಬಳಿಕ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕರೆ ತರಲಾಗಿತ್ತು.

ಸಾಕಷ್ಟು ಹುಮ್ಮಸ್ಸಿನಿಂದ ಭವಿಷ್ಯ ಹೇಳ್ತಿನಿ ಎಂದು ಮಹಾಮನೆ ಪ್ರವೇಶಿಸಿದ್ದ ಬೆಳಗೆರೆ ತಮ್ಮ ಮಹಾಮನೆಯ ವಾಸ್ತವ್ಯದ ಭವಿಷ್ಯವನ್ನು ತಿಳಿಯದೇ ಹೋಗಿದ್ದು ದುರಂತವೇ ಸರಿ.

ಏನೇ ಇರಬಹುದು ರವಿಬೆಳಗೆರೆ ಮಹಾಮನೆಯಲ್ಲಿ ಇರಬೇಕಿತ್ತು, ಅವರ ಮತ್ತೊಂದು ಮುಖದ ಪರಿಚಯ ನಾಡಿಗೆ ಖಂಡಿತಾ ಆಗುವ ಎಲ್ಲಾ ಸಾಧ್ಯತೆಗಳಿತ್ತು. ಅವರ ಬರಹವನ್ನು ಮಾತ್ರ ಓದಿದ ಮಂದಿ ಅವರ ಮಾತುಗಳನ್ನು ಕೇಳಬಹುದಿತ್ತು. ಬೆಳಗೆರೆ ಬಳಿ ಅನುಭವದ ಮೂಟೆ ಇದೆ. ನಿಜ ಜೀವನದ ರೋಚಕ ಕಥೆಗಳಿವೆ. ಬೆಳಗೆರೆ ಮಾತಿಗೆ ಕುಳಿತರೆ ಹೊತ್ತು ಸಾಗುವುದೇ ಗೊತ್ತಾಗುವುದಿಲ್ಲ. ಬೆಳಗೆರೆ ಮಹಾಮನೆಯಲ್ಲಿ ಮುಂದುವರಿಯುತ್ತಿದ್ರೆ ರಾಜಕೀಯ, ಸಿನಿಮಾ, ರೌಡಿಗಳ ಲೋಕದ ಆಫ್ ದಿ ರೆಕಾರ್ಡ್ ಅನ್ನಬಹುದಾದ ಕಥೆಗಳು ಖಂಡಿತಾ ಬಹಿರಂಗವಾಗಿರುತ್ತಿತ್ತು. ಆದರೆ ಅವರನ್ನು ಕಾಡುವ ಕಾಯಿಲೆ ಎಲ್ಲದಕ್ಕೂ ತಣ್ಣೀರು ಎರಚಿತು.

Advertisements

Leave a Reply

%d bloggers like this: