ದುನಿಯಾ ಅನ್ನುವ ಹೆಸರೊಂದೇ ರಶ್ಮಿಯನ್ನು ಕಾಪಾಡಬೇಕು…!

ದುನಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ನೀಡಿದ ರಶ್ಮಿ 11 ಸ್ಪರ್ಧಿಯಾಗಿ ಬಿಗ್‌ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ‘ದುನಿಯಾ’ ನಂತರ ಅಷ್ಟೊಂದು ಯಶಸ್ಸು ಕಾಣದ ರಶ್ಮಿ, ಈಗ ತಮ್ಮ ವೃತ್ತಿ ಜೀವನದ ಸೆಕೆಂಡ್ ಇನಿಂಗ್ಸ್ ಶುರು ಮಾಡೋಕೆ, ಬಿಗ್ ಮನೆಗೆ ಬಂದಿದ್ದಾರೆ.

ಜಗ್ಗಿ ಜಗನ್ನಾಥ್, ಕಾರ್ನಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಶ್ಮಿಯನ್ನು ಅದ್ಯಾಕೋ ಚಂದನವನ ಒಪ್ಪಿಕೊಳ್ಳಲಿಲ್ಲ.

ಅದರೆ ಈ ಬಗ್ಗೆ ಅವರು ಹೇಳುವುದೇ ಬೇರೆ , ಪದೇ ಪದೇ ದುನಿಯಾದಲ್ಲಿ ಮಾಡಿದಂಥದ್ದೇ ಪಾತ್ರಗಳು ತಮ್ಮನ್ನು ಹುಡುಕಿಕೊಂಡು ಬಂದಿದ್ದರಿಂದ ಹೊಸ ಸ್ಕ್ರಿಪ್ಟ್‌ಗಾಗಿ ಕಾದೆ. ‘ಹೊಸ ರೀತಿಯ ಪಾತ್ರಕ್ಕೆ ಕಾದಿದ್ದರಿಂದ ಹೆಚ್ಚು ಸಿನಿಮಾಗಳಲ್ಲಿ ನಟಿಸಲಾಗಲಿಲ್ಲ ಅನ್ನುವುದು ಅವರ ಮಾತು.

ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಚಿತ್ರದಲ್ಲಿ ವಿಭಿನ್ನ ಪಾತ್ರವೊಂದಲ್ಲಿ ಅವರು ನಟಿಸಿದ್ದಾರೆ. ಜೊತೆಗೆ ಇನ್ನಷ್ಟು ಹೊಸ ರೀತಿಯ ಪಾತ್ರಗಳ ನಿರೀಕ್ಷೆಯಲ್ಲಿದ್ದ ರಶ್ಮಿಯವರಿಗೆ ಅವಕಾಶಗಳು ಸಿಕ್ಕಿದ್ದು ಕಡಿಮೆ. ಈಗ್ಲೂ ರಶ್ಮಿ ಕೈಯಲ್ಲಿ ನಾಲ್ಕೈದು ಸಿನಿಮಾಗಳಿದೆ ಆದರೆ ಅದ್ಯಾವುದು ಅವರಿಗೆ ಬ್ರೇಕ್ ಕೊಡುವ ಲಕ್ಷಣಗಳಿಲ್ಲ.

ಹೀಗಾಗಿ ಬಿಗ್ ಬಾಸ್ ಮನೆ ಮೂಲಕ ಬ್ರೇಕ್ ಸಿಗಬಹುದು ಅನ್ನುವುದು ಅವರ ಉದ್ದೇಶ. ಆದರೆ ಅವರು ಇಂದು ವೇದಿಕೆಯಲ್ಲಿ ಮಾತನಾಡಿದ ಶೈಲಿ ನೋಡಿದ ಟ್ರೋಲಿಗರು ಬ್ರೇಕ್ ಸಿಗೋ ಸಾಧ್ಯ ತುಂಬಾ ಕಡಿಮೆ ಅನ್ನುತ್ತಿದ್ದಾರೆ.

ಹಾಗಂತ ಎಲ್ಲವನ್ನೂ ಒಂದೇ ದಿನ ನಿರ್ಧರಿಸುವುದು ತಪ್ಪಾಗುತ್ತದೆ. ರಶ್ಮಿಯವರನ್ನು ನಟಿ ಎಂದು ಗುರುತಿಸುವ ಕೈಗಳು ತುಂಬಾ ಕಡಿಮೆ. ದುನಿಯಾ ರಶ್ಮಿ ಎಂದು ಪರಿಚಯ ಮಾಡಿಕೊಡಬೇಕಾದ ಅನಿವಾರ್ಯತೆ ಅವರಿಗೆ ಇರುವುದರಿಂದ ವೀಕ್ಷಕರ ಓಟು ಗಳಿಸಲು ಅವರು ತುಂಬಾ ಶ್ರಮ ಪಡಲೇಬೇಕು.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020191013184705″); document.getElementById(“div_6020191013184705”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: