Peruser!!! It is a trendy supermarket: read articles on day to day basis in English & Kannada. Read,Share & Care
ಬಿಗ್ ಬಾಸ್ ಮನೆಯೊಳಗೆ ಖಾವಿಧಾರಿಯೊಬ್ಬರು ಇಲ್ಲದಿದ್ದರೆ ಹೇಗೆ ಹೇಳಿ. ಹಾಗೇ ನೋಡಿದರೆ ಈ ಹಿಂದೆ ಬಂದ ಖಾವಿಧಾರಿಗಳು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಇಟ್ಟುಕೊಂಡವರಲ್ಲ. ಒಂದಲ್ಲ ಒಂದು ವಿವಾದದಲ್ಲಿ ಹೆಸರು ನೋಂದಾಯಿಸಿಕೊಂಡವರೇ.
ಆದರೆ ಸೀಸನ್ 7ಕ್ಕೆ ಬಂದಿರುವ ಖಾವಿಧಾರಿಯದ್ದು ದೊಡ್ಡ ಹೆಸರು. ಕೇವಲ ಧರ್ಮ ಪ್ರಚಾರದ ಕಾರಣಕ್ಕಲ್ಲ, ಬದಲಾಗಿ ಹಸಿರಿನ ಕಾರಣಕ್ಕೂ ಇವರದ್ದು ದೊಡ್ಡ ಹೆಸರು.
ಹಾವೇರಿಯಲ್ಲಿ ಲಕ್ಷ ಸಸಿ ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಬಿಗ್ ಬಾಸ್ ಸೀಸನ್ 7ರ ವೇದಿಕೆ ಹತ್ತಿದ್ದಾರೆ.
ಇನ್ನು ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು ಗುಟ್ಟು ಬಿಟ್ಟು ಕೊಡುವ ಹಾಗಿಲ್ಲ. ಆದರೆ ಗುರುಲಿಂಗ ಸ್ವಾಮೀಜಿಯವರು ತಮ್ಮ ಆತ್ಮೀಯರಿಗೆ ವಾಯ್ಸ್ ಸಂದೇಶ ಕಳುಹಿಸಿ ಹೆಚ್ಚು ವೋಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು ಗುರುಲಿಂಗ ಸ್ವಾಮೀಜಿಯವರು ಬಿಗ್ ಬಾಸ್ ಮನೆಯಲ್ಲಿ 50 ಲಕ್ಷ ಗೆದ್ರೆ ಅದನ್ನು ನೆರೆ ಪರಿಹಾರಕ್ಕೆ ಬಳಸುವುದಾಗಿ ಹೇಳಿದ್ದಾರೆ. ಆ ಮಟ್ಟಿಗೆ ಸ್ವಾಮೀಜಿಯವರ ಕಾಳಜಿಯನ್ನು ಮೆಚ್ಚಲೇಬೇಕು.