Peruser!!! It is a trendy supermarket: read articles on day to day basis in English & Kannada. Read,Share & Care
ನಿರೀಕ್ಷೆಯಂತೆ ನಾಗಿಣಿ ಧಾರಾವಾಹಿಯ ದೀಪಿಕಾ ದಾಸ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅವರಿಗೆ ಒಳ್ಳೆಯ ಅಭಿಮಾನಿ ಬಳಗವಿದೆ. ಹೀಗಾಗಿ ನಾಲ್ಕೈದು ವಾರಗಳನ್ನು ಎದುರಿಸುವುದು ಇವರಿಗೆ ಕಷ್ಟವಾಗಲಾರದು. ಆದರೆ ಮುಂದಿನ ವಾರಗಳಲ್ಲಿ ಇವರ ತಾಕತ್ತು ಬಹಿರಂಗವಾಗಲಿದೆ.
ಅಲ್ಲಿ ಮಾಡುವ ಟಾಸ್ಕ್, ಉಳಿದ ಸ್ಪರ್ಧಿಗಳೊಂದಿಗೆ ಕಿತ್ತಾಟ. ಜನರನ್ನು ಹೇಗೆ ರಂಜಿಸುತ್ತಾರೆ, ಎಷ್ಟು ಗಾಸಿಪ್ ಮಾಡುತ್ತಾರೆ ಅನ್ನುವುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ.
ದೀಪಿಕಾ ದಾಸ್ ನಟ ಯಶ್ ಅವರ ಸಂಬಂಧಿ ಅನ್ನುವುದು ಗೊತ್ತಿದೆ ಬಿಟ್ಟರೆ ಮತ್ಯಾವ ಖಾಸಗಿ ವಿಚಾರಗಳು ಗೊತ್ತಿಲ್ಲ. ಹೀಗಾಗಿ ದೀಪಿಕಾ ದಾಸ್ ವೈಯುಕ್ತಿಕ ಬದುಕಿನ ಬಗ್ಗೆ ವೀಕ್ಷಕರಿಗೆ ಸಾಕಷ್ಟು ಕುತೂಹಲವಿದೆ. ಹೇಳಿ ಕೇಳಿ ಬಿಗ್ ಬಾಸ್ ಮನೆಯಿರುವುದೇ ವೈಯುಕ್ತಿಕ ಬದುಕನ್ನು ಬಟಾಬಯಲು ಮಾಡುವುದಕ್ಕೆ ತಾನೇ.
ನಾಗಿಣಿ ಪಾತ್ರದಲ್ಲಿ ಅಭಿನಯಿಸಿರುವ ದೀಪಿಕಾಗೆ ಮಾಡೆಲಿಂಗ್ ಗೊತ್ತು. ಕೃಷ್ಣ ರುಕ್ಮಿಣಿ ಅವರ ಅಭಿನಯದ ಮೊದಲ ಧಾರಾವಾಹಿಯಾಗಿತ್ತು. ದೂದ್ಸಾಗರ್, ಡ್ರೀಮ್ಗರ್ಲ್ ಸೇರಿದಂತೆ 8 ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದಾರೆ. ದೀಪಿಕಾ ದಾಸ್ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಮೋಸ್ಟ್ ಗ್ಲಾಮರಸ್ ನಟಿ ದೀಪಿಕಾ ದಾಸ್. ಡಾನ್ಸ್ ರಿಯಾಲಿಟಿ ಶೋದಲ್ಲಿ ಅದ್ಭುತವಾಗಿ ಡಾನ್ಸ್ ಮಾಡಿ ಜನರ ಮನಸ್ಸನ್ನು ಗೆದ್ದಿದ್ದರು ಈ ನಟಿ. ಅವರಿಗೆ ಸಾಕಷ್ಟು ಅಭಿಮಾನಿಗಳಿರೋದಂತೂ ನಿಜ. ಅತಿ ಹೆಚ್ಚು ಟಿಕ್ಟಾಕ್ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇವರ ಫೋಟೋಶೂಟ್, ಡ್ರೆಸ್ಸಿಂಗ್ ಸೆನ್ಸ್ಗೆ ಮಾರು ಹೋಗದಿರುವವರೇ ಇಲ್ಲ. ಸಿಕ್ಕಾಪಟ್ಟೆ ಜಾಲಿ ರೈಡ್ ಹೋಗುತ್ತಾರೆ ದೀಪಿಕಾ.
ದೂದ್ಸಾಗರ್ ಚಿತ್ರಕ್ಕೆ ಸ್ಯಾಮ್ಯೂವೆಲ್ ಟೋನಿ ನಿರ್ದೇಶನ ಮಾಡಿದ್ದರು. ಏ ಮನಸೇ ಎಂಬ ತೆಲುಗು ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ.