Advertisements

ಮಹಾಮನೆಗೆ ಎಂಟ್ರಿ ಕೊಟ್ಟ ಚುಕ್ಕಿ : ಕನ್ನಡಿಗರ ಮನಸ್ಸು ಗೆಲ್ತಾಳ ‘ಚಂದನ’

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಗಳಾಗಿ ಒಳ ಹೋಗುತ್ತಿರುವವರ ಮುಖ ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿರುವ ಪಟ್ಟಿಯೇ ಅಂತಿಮ ಅನ್ನುವಂತಿದೆ.

ಅಚ್ಚರಿಯ ಮುಖವೊಂದು ಮನೆಯೊಳಗೆ ಪ್ರವೇಶಿಸುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ 5ನೇ ಸ್ಪರ್ಧಿಯಾಗಿ ರಾಜಾ ರಾಣಿ ಧಾರಾವಾಹಿಯ ನಾಯಕಿ ಚಂದನ ಅನಂತ ಕೃಷ್ಣ ಪ್ರವೇಶಿಸಿದ್ದಾರೆ.

ರಾಜಾ ರಾಣಿ ಧಾರಾವಾಹಿಯಲ್ಲಿ ಎಡವಟ್ಟು ಚುಕ್ಕಿಯಾಗಿ ಕಾಣಿಸಿಕೊಂಡಿದ್ದ ಅವರು ಅತ್ತ ಧಾರಾವಾಹಿ ಮುಕ್ತಾಯವಾಗುತ್ತಿದ್ದಂತೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.

ಪ್ರತಿಯೊಂದು ವಿಚಾರಕ್ಕೂ ಅವರ ಅಕ್ಕನನ್ನು ಅವಲಂಭಿಸಿರುವ ಚಂದನ ಇದೀಗ ಏಕಾಂಗಿಯಾಗಿ ಜೀವನ ನಡೆಸಬೇಕಾಗಿದೆ. ಧಾರಾವಾಹಿಯನ್ನು ದನರ ಮೆಚ್ಚಿಗೆ ಗಳಿಸಿದ್ದ ಚಂದನ ಇದೀಗ ಬಿಗ್ ಬಾಸ್ ಮನೆಯಲ್ಲಿ ಜನರಿಗೆ ಹೇಗೆ ಹತ್ತಿರವಾಗುತ್ತಾರೆಯೇ ಅನ್ನುವುದನ್ನು ಕಾದು ನೋಡಬೇಕಾಗಿದೆ.

ಚಂದನಾ ತುಂಬ ಒಳ್ಳೆಯ ಡಾನ್ಸರ್, ಸಿಂಗರ್ ಕೂಡ. ಧಾರಾವಾಹಿಯ ಕೆಲ ಎಪಿಸೋಡ್‌ಗಳಲ್ಲಿ ಹಾಡಿದ್ದರು. ಅದು ಜನರ ಮನಸ್ಸನ್ನು ಗೆದ್ದಿತ್ತು. ಚುಕ್ಕಿ ಪಾತ್ರಧಾರಿ ಚಂದನಾರಿಗೆ ಸಾಕಷ್ಟು ಅಭಿಮಾನಿಗಳಿದ್ದು, ಇನ್ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಸಾಕಷ್ಟು ಫ್ಯಾನ್ಸ್‌ಪೇಜ್‌ಗಳಿವೆ.

Advertisements

Leave a Reply

%d bloggers like this: