ನ.4ರ ಮಧ್ಯರಾತ್ರಿ ಗುರು ಬದಲಾವಣೆ : ಕೊನೆಯ ಮೂರು ರಾಶಿಗಳವರ ಬಗ್ಗೆ ವಿಠ್ಠಲ್ ಭಟ್ ಹೇಳಿದ್ದೇನು…?

2019 ನವೆಂಬರ್ 4 ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಗುರು ಗ್ರಹ ಜ್ಯೇಷ್ಠ ನಕ್ಷತ್ರ 4ನೇ ಪಾದ ವೃಷ್ಚಿಕ ರಾಶಿಯಿಂದ ಮುಂದೆ ಹೋಗಿ ಮೂಲ ನಕ್ಷತ್ರ 1 ನೇ ಪಾದ ಧನು ರಾಶಿಗೆ ಪ್ರವೇಶ ಮಾಡುತ್ತಾನೆ.

ಗುರು ಗ್ರಹದ ಈ ಸಂಚಾರದಿಂದಾಗಿ ದ್ವಾದಶ ರಾಶಿಯ ಗುರು ಬಲದ ವಿಚಾರದಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ. ಈ ಕಾರಣ ಮಕರ, ಕುಂಭ, ಮೀನಾ ರಾಶಿಗಳ ಪೈಕಿ ಯಾವ ರಾಶಿಗೆ ಗುರು ಬಲ ಬರಲಿದೆ ಮತ್ತು ಯಾವ ರಾಶಿಗೆ ಗುರು ಬಲ ಮುಗಿಯಲಿದೆ ಅನ್ನುವುದನ್ನು ಖ್ಯಾತ ಜ್ಯೋತಿಷಿಗಳಾದ ವಿಠ್ಠಲ ಭಟ್ ಕೆಕ್ಕಾರು ವಿವರಿಸಿದ್ದಾರೆ.

 ( ನಿಮಗೆ ಯಾವುದಾದರೂ ಸಂಶಯಗಳಿದ್ದಲ್ಲಿ ಜ್ಯೋತಿಷಿ ವಿಠ್ಠಲ ಭಟ್ ಕೆಕ್ಕಾರು ಅವರನ್ನು 9845682380 ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ.)

ಮಕರ : ನಿಮಗೆ ಅಶುಭ ಫಲಗಳನ್ನೇ ಹೆಚ್ಚು ಹೇಳಬೇಕಾಗಿದೆ ಕಾರಣ ಅದು ಅನಿವಾರ್ಯ! ಈಗ ನಿಮಗೆ ಗುರು ಹನ್ನೆರಡನೆ ಸ್ಥಾನ ಅಂದರೆ ವ್ಯಯಸ್ಥಾನಕ್ಕೆ ಪ್ರವೇಶ ಮಾಡುತ್ತಿದ್ದಾನೆ ಇನ್ನು ಶನಿಯ ಉಪಸ್ಥಿತಿ ನಿಮ್ಮ ರಾಶಿಯಿಂದ {ಸದ್ಯಕ್ಕೆ ಅಂದರೆ ಜನವರಿ ೨೬ ೨೦೨೦ ತನಕ} ಹನ್ನೆರಡನೇ ರಾಶಿ ಅಂದರೆ ಧನುವಿನಲ್ಲಿ ಇದೆ ಆದುದರಿಂದ ವ್ಯಯದ ಸ್ಥಾನದಲ್ಲಿ ಶನಿ ಹಾಗೂ ಅಲ್ಲಿಯೇ ವ್ಯಯಸ್ಥಾನದಲ್ಲಿ ಗುರು ಆಗುತ್ತದೆ ಇದರಿಂದಾಗಿ ಉತ್ತಮ ಅವಕಾಶಗಳನ್ನು ಹಾಗೂ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು.

ನವೆಂಬರ್ ತಿಂಗಳಲ್ಲಿ ಗುರು ಬದಲಾವಣೆ : ನಿಮ್ಮ ರಾಶಿಯ ಮೇಲೆ ಬೀರಬಹುದಾದ ಪರಿಣಾಮವೇನು ಗೊತ್ತಾ…?

ಅಷ್ಟೇ ಅಲ್ಲಾ ನಿಮ್ಮಲ್ಲಿ ಮೊದಲ ಬಾರಿಗೆ ನಾಸ್ತಿಕ ಭಾವ ಹೆಚ್ಚು ಬರುತ್ತದೆ ಎಷ್ಟು ಪೂಜೆ ಮಾಡಿದರೂ ಪ್ರಯೋಜನ ಇಲ್ಲ ಎಂಬ ರೀತಿಯಲ್ಲಿ ಮಾತನಾಡಲು ಪ್ರಾರಂಭಿಸುತ್ತೀರಿ. ಮಕರ ರಾಶಿಯವರು ಮೊದಲಿನಿಂದಲು ಬಹಳ ಆಸ್ತಿಕ ಮನೋಭಾವದವರಲ್ಲೇ ಇದ್ದರೂ ದೈವ ಭಕ್ತಿ ತೀರಾ ಕಡಿಮೆ ಇರುತ್ತಿರಲಿಲ್ಲ ಆದರೆ ನಿಮ್ಮಲ್ಲಿ ಸಹ ಒಂದು ವಿಧದ ನಾಸ್ತಿಕ ಸ್ವಭಾವ ಅಥವಾ ಬುದ್ದಿ ಹೆಚ್ಚು ಆಗಿ ದೇವರ ಮೇಲಿನ ಭಕ್ತಿ ಈ ಹಿಂದಿಗಿಂತಲೂ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸುತ್ತದೆ ಇದೆಲ್ಲಾ ನೋಡಿ ನಿಮ್ಮ ಸ್ನೇಹಿತರಿಗೆ ಆಶ್ಚರ್ಯ ಆಗುತ್ತದೆ. ಇತರರು ನಿಮ್ಮ ಸೇವೆ ಮಾಡುವ ಸಮಯ ಮುಗಿದು ನೀವೇ ಎಲ್ಲರ ಸೇವೆ ಮಾಡುವ ಸ್ಥಿತಿ ಬಂದರೂ ಆಶ್ಚರ್ಯ ಇಲ್ಲ! ಅಷ್ಟೇ ಅಲ್ಲ ಮಾಡಲು ಕೆಲಸವೇ ಇಲ್ಲದೆ ನಿಮಗೆ ಆಲಸ್ಯ ವೃದ್ದಿ ಆಗುತ್ತದೆ.

ಒಂದು ಕಡೆ ದುಡಿಮೆ ಇಲ್ಲ ಇನ್ನೊಂದು ಕಡೆ ಆಲಸ್ಯ ಬೇರೆ ಜಾಸ್ತಿ ಆಗುತ್ತದೆ ಅದರಿಂದಾಗಿ ಸಿಗಬಹುದಾದ ಉದ್ಯೋಗ ಸಹ ನೀವು ಹುಡುಕದೇ ಇರುವುದರಿಂದ ಅದು ಸಿಗದು. ಇರೋ ಕೆಲಸ ಹೋಯಿತು ಇನ್ನೊಂದು ಕೆಲಸ ಸಿಗುತ್ತಾ ಇಲ್ಲ ಎನ್ನುವುದಕ್ಕಿಂತ ನೀವೆ ಸ್ವಲ್ಪ ಸುಧಾರಿಸಿಕೊಂಡು ಚುರುಕುತನ ಅಲವಡಿಸಿಕೊಂಡು ಹೊಸ ಉದ್ಯೋಗ ಹುಡುಕಿದರೆ ಉತ್ತಮ. ಚಿಕ್ಕ ಮಕ್ಕಳು ಅಥವಾ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರಬೇಕು ದುರ್ಜನರ ಸಹವಾಸ ಹೀನ ಕಾರ್ಯಗಳನ್ನು ಮಾಡಲು ಪ್ರಚೋದನೆ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಅರಿವು ಇಲ್ಲದಂತೆ ಸ್ವಲ್ಪ ಆಲಸ್ಯ ಬುದ್ದಿ ಹೆಚ್ಚಾಗುತ್ತದೆ. ಇಂದು ಮಾಡಬೇಕಾದ ಕೆಲಸವನ್ನು ಈಗಲೇ ಮಾಡು ಎಂದು ಸಾರುತ್ತಿದ್ದವರು ಈಗಲೇ ಮಾಡಬೇಕಾದ ಕೆಲಸವನ್ನೂ ಸಹ ಮಾಡದೇ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತೀರಿ. ಅಧಿಕಾರದಲ್ಲಿ ಇರುವವರು ಅದನ್ನು ಕಳೆದುಕೊಳ್ಳುವ ಭೀತಿ ಇದೆ.

ನವೆಂಬರ್ 4ರ ಮಧ್ಯರಾತ್ರಿ ಗುರು ಬದಲಾವಣೆ : ಕಟಕ,ಕನ್ಯಾ,ಸಿಂಹ ರಾಶಿಯವರ ಗತಿಯೇನು ಗೊತ್ತಾ…

ಕುಂಭ : ಗುರು ಗ್ರಹದ ಈ ಸಂಚಾರ ನಿಮಗೆ ಉತ್ತಮ ಫಲವನು ತರುತ್ತಿದೆ ಕಾರಣ ನಿಮ್ಮ ರಾಶಿಯಿಂದ ಹನ್ನೊಂದನೇ ರಾಶಿಯಾದ ವೃಶ್ಚಿಕ ರಾಶಿಗೆ ಗುರು ಸಂಚಾರ ಆಗುತ್ತಿರುವುದರಿಂದ ನಿಮಗೆ ಗುರು ಬಲ ಬರುತ್ತದೆ. ಈ ಗುರುಬಲ ಹಾಗೂ ನಿಮಗೆ ಶನಿ ಗ್ರಹದ ಸದ್ಯದ ಸ್ಥಾನದಿಂದ ನಿಮಗೆ ಇರುವ ಲಾಭ ಸ್ಥಾನದ ಶನಿ ಪ್ರಭಾವ ಈ ಎರಡೂ ಸೇರಿ ರಕ್ಷಣೆ ಸಿಗಲಿದೆ ಹಾಗು ನಿಮಗೆ ನೆಮ್ಮದಿ ನೀಡಲಿದೆ. ವ್ಯಾಪಾರದಲ್ಲಿ ಲಾಭ ಕಾಣಬಹುದು.

ಸಹಜ ಸ್ವಾಭಾವಿಕವಾಗಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮ ಆಗಲಿದೆ. ಉತ್ತಮ ಮಿತ್ರರನ್ನು ಪಡೆಯುತ್ತೀರಿ. ನಿಮ್ಮಲ್ಲಿ ಉದಾರ ಬುದ್ದಿ ಹೆಚ್ಚಾಗುತ್ತದೆ. ಸಹಾಯ ಮಾಡುವ ಮನೋಭಾವ ಈ ಹಿಂದೆಯೂ ಇತ್ತು ಈಗ ಇನ್ನೂ ಹೆಚ್ಚಾಗಬಹುದು. ಬರಿಗೈ ಬದಲಾಗಿ ಸ್ವಲ್ಪ ಹಣ ಕೂಡಿಡಲು ಅವಕಾಶ ಲಭಿಸುತ್ತದೆ. ನಿಮ್ಮನ್ನು ಇಷ್ಟು ದಿನ ಕಾಡುತಿದ್ದ ಒಂದು ವಿಧ ವಿಚಿತ್ರ ಭಯ ಏನಿದೆ ಅದು ದೂರವಾಗಲಿದೆ. ಮುಂದೆ ಎನೋ ಹೇಗೋ? ಎನ್ನುತ್ತಿದ್ದ ನೀವು ಈಗ ಎನೂ ತೊಂದರೆ ಇಲ್ಲ ಎಲ್ಲಾ ಸರಿ ಹೋಗುತ್ತದೆ ಎನ್ನಲು ಪ್ರಾರಂಭಿಸುತ್ತೀರಿ. ಸಮಸ್ಯೆ ಅಂದರೆ ಇನ್ನೂ ಎನೋ ಆಗಬೇಕಿತ್ತು ಎಂದು ಮನಸ್ಸು ಚಡಪಡಿಸುತ್ತದೆ.

ನ4ರ ಮಧ್ಯರಾತ್ರಿ ಗುರು ಬದಲಾವಣೆ :ತುಲಾ ರಾಶಿಯವರಿಗೆ ಚಿಂತೆ : ವೃಶ್ಚಿಕದವರಿಗೆ ನೆಮ್ಮದಿ : ಧನು ರಾಶಿಯವಿರಿಗೆ ನಿಟ್ಟುಸಿರು

ಇನ್ನು ಬಹಳ ಕಾಲದಿಂದ ವಾಹನ ಖರೀದಿ ಮಾಡುವ ಕನಸು ಕಂಡವರು ಈಗ ಪ್ರಯತ್ನಿಸಬಹುದು. ಇಲ್ಲಿ ದ್ವಿಚಕ್ರ ಅಥವಾ ಚತುಶ್ಚಕ್ರ ಎಂಬ ಬೇಧಗಳಿಲ್ಲ ನಿಮಗೆ ಆಸೆ ಇರುವ ವಾಹನ ನೀವು ಖರೀದಿಸಬಹುದು.ಒಂದು ಪಕ್ಷ ವಾಹನ ಖರೀದಿಯ ಆಸೆ ಆಗಲಿ ಯೋಚನೆ ಆಗಲಿ ಇಲ್ಲದವರಿಗೂ ತಮ್ಮ ಉದ್ಯೋಗ ಸ್ಥಳದಲ್ಲಿ ಆ ಸೌಕರ್ಯವನ್ನು ಒದಗಿಸಿಕೊಡಲಾಗುತ್ತದೆ ಆದುದರಿಂದ ಆ ವಿಧಾನದಲ್ಲಿ ಸಹ ವಾಹನದಲ್ಲಿ ಸಂಚರಿಸುವ ಯೋಗ ಬರುತ್ತದೆ.

ನೀವು ಪ್ರಮುಖವಾಗಿ ನೆನಪು ಇಟ್ಟುಕೊಳ್ಳ ಬೇಕಾಗಿರುವುದು ಎಂದರೆ ನಿಮಗೆ ಸಾಲ ಸುಲಭವಾಗಿ ಸಿಗುತ್ತದೆ ಹೇಗಿದ್ದರೂ ಸಿಗುತ್ತದೆ ಎಂದು ಸಾಲ ಹೆಚ್ಚು ಮಾಡಿಕೊಂಡರೆ ಗುರು ಬಲ ಮುಗಿದರೂ ನಿಮಗೆ ಮುಂದಿನ ವರ್ಷ ಅಂದರೆ ಜನವರಿ ೨೬ ೨೦೨೦ ಇಂದ ಸಾಡೆ ಸಾತ್ ಏಳೂವರೆ ವರುಷದ ಶನಿ ಪ್ರಭಾವ ಪ್ರಾರಂಭ ಆಗುತ್ತದೆ ಹಾಗೂ ಗುರು ಬಲ ಮುಗಿದರೂ ಸಾಲ ತೀರಿಸುವ ಕಾಲ ಮುಗಿಯುವುದಿಲ್ಲ.

ಮೀನ : ಗುರು ಬಲ ಕಳೆದುಕೊಂಡರೂ ಸಹ ಸಮಸ್ಯೆ ಇಲ್ಲದ ರಾಶಿಗಳಲ್ಲಿ ನಿಮ್ಮ ರಾಶಿ ಸಹ ಬರುತ್ತದೆ ಕಾರಣ ಗುರು ನಿಮ್ಮ ರಾಶಿಯಿಂದ ಇಷ್ಟು ದಿನ ಭಾಗ್ಯ ಸ್ಥಾನದಲ್ಲಿ ಇದ್ದು ಈಗ ಗುರು ಸಂಚಾರ ದಶಮಕ್ಕೆ ಅಂದರೆ ಹತ್ತನೇ ಮನೆಗೆ ಅದೂ ಸಹ ಧನು ರಾಶಿಗೆ {ಅಂದರೆ ಗುರು ಗ್ರಹ ಸ್ವಸ್ಥನಕ್ಕೆ} ಆಗುತ್ತಿದೆ ಇದರಿಂದಾಗಿ ಗುರು ಬಲ ಹೋದರೂ ನಿಮ್ಮ ಯಶಸ್ಸಿಗೆ ಅಥವಾ ಕೀರ್ತಿಗೆ ಯಾವುದೇ ಕುಂದು ಕೊರತೆಯಾಗದು.

ಸಹೋದರರ ಸಹಾಯ ಹಾಗೂ ಸಹಕಾರ ಲಭಿಸುತ್ತದೆ. ವಿವಾಹ ಆಗದ ಸಹೋದರಿ ಇದ್ದಲ್ಲಿ ಅವರ ಮದುವೆ ಮಾಡಲು ನಿಮಗೆ ಶಕ್ತಿ ಬರುತ್ತದೆ. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಅಭಿವೃದ್ದಿ ಆಗುತ್ತದೆ. ಕೆಲವರಿಗೆ ಭಡ್ತಿ ಸಹ ಸಿಗಬಹುದು ಎನೇ ಆಗಲಿ ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಗೌರವ ಮರ್ಯಾದೆ ಲಭಿಸುತ್ತದೆ.. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಸ್ವಲ್ಪ ಉತ್ತಮ ನಿಮ್ಮನ್ನು ಗುರುತಿಸುವ ನಿಮ್ಮ ಕೆಲಸ ಕಾರ್ಯ ಸಾಧನೆಗಳನ್ನು ಗುರುತಿಸುವ ಜನ ಹೆಚ್ಚಾಗುತ್ತಾರೆ.

ಆದರೆ ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳ ಬೇಕಾದ ವಿಚಾರ ಎಂದರೆ ಮಕರ ರಾಶಿಯ ಸ್ತ್ರೀಯರಿಗೆ ಸ್ವಾಭಾವಿಕವಾಗಿ ಉತ್ತಮ ಸ್ಥಿತಿ ಇದ್ದರೂ ಸಹ ಪುರುಶರು ಮಾತ್ರ ಸ್ತ್ರೀಯರಿಂದ ಅವರಿಗೆ ಸಂಬಂಧಿಸಿದ ಜಗಳ ಮನಸ್ತಾಪ ಇತ್ಯಾದಿ ವಿಚಾರಗಳಿಂದ ಆದಷ್ಟು ದೂರ ಇರಬೇಕು. ಗುರು ಬಲ ಇದ್ದಾಗ ಸಂತಾನ ಆಗಲಿಲ್ಲ ಈಗ ಇನ್ನು ಗುರು ಬಲ ಸಹ ಮುಗೀತು ಇನ್ನು ಸಂತಾನ ಅಗದು ಎನ್ನುವ ವಿಚಿತ್ರ ಚಿಂತೆಗಳಿದ್ದಲ್ಲಿ ಅದನ್ನೆಲ್ಲಾ ಬಿಡಿ ನಿಮಗೆ ಈಗ ಗುರು ಬಲ ಇಲ್ಲದಿದ್ದರೂ ಸಹ ಸಂತಾನ ಭಾಗ್ಯಕ್ಕೆ ಎನೂ ತೊಂದರೆ ಆಗುವುದಿಲ್ಲ. ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇರುವವರರೊಟ್ಟಿಗೆ ಒಡನಾಟ ಪ್ರಾರಂಭ ಆಗುತ್ತದೆ. ಉದ್ದೇಶ ಪೂರ್ವಕ ನಿಮಗೆ ಅವಮಾನ ಮಾಡಬೇಕು ಎಂದುಕೊಂಡು ಪ್ರಯತ್ನಿಸಿದರೂ ಸಹ ಅಂಥಃವರಿಗೆ ಯಶಸ್ಸು ಇಲ್ಲ. ಅನಾರೋಗ್ಯ ಇರುವವರಿಗೆ ಉತ್ತಮ ಆರೈಕೆ ಲಭಿಸುತ್ತದೆ.

ಇನ್ನು ಈ ಗುರು ಸಂಚಾರದಿಂದಾಗಿ ಗುರು ಬಲ ಕಳೆದುಕೊಂಡು ತಮ್ಮ ರಾಶಿಗೆ ಲಭಿಸಿದ ಕನಿಷ್ಠ ಫಲ ಓದಿ ಚಿಂತಿಸುವ ಅಗತ್ಯವಿಲ್ಲ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ ಇಲ್ಲಿಯೂ ಅಷ್ಟೆ. ಗುರು ಬಲ ಪಡೆದವರು ಆ ಸಂಪೂರ್ಣ ಉತ್ತಮ ಫಲ ನಿರ್ವಿಘ್ನವಾಗಿ ಅನುಭವಿಸಲು ಹಾಗೂ ಗುರು ಬಲ ಕಳೆದುಕೊಂಡವರು ಆ ಸಮಸ್ಯೆಗಳಿಂದ ಪಾರಾಗಲು ಕೆಲ ದೇವತಾ ಆರಾಧನೆಗಳನ್ನು ಮಾಡಿಕೊಳ್ಳುವುದು ಉತ್ತಮ.

ವೇದೋಕ್ತ ಗುರು ಮಂತ್ರ ಜಪ ಸಹಿತ ಗುರು ಶಾಂತಿ ಹವನ ಮಾಡಿಸುವುದು ಶೀಘ್ರ ಹಾಗು ಉತ್ತಮ ಫಲ ನೀಡುತ್ತದೆ ಪ್ರತೀ ಗುರುವಾರ ನಿಮಗೆ ಹತ್ತಿರದ ಗುರು ಸಾನಿಧ್ಯ ಇರುವ ದೇಗುಲಗಳಿಗೆ ಭೇಟಿ ಕೊಡಬಹುದು. ಈಶ್ವರ ಆರಾಧನೆ ಅಂದರೆ ರುದ್ರಾಭಿಷೇಕ ರುದ್ರ ಕ್ರಮಾರ್ಚನೆ ಭಸ್ಮಾರ್ಚನೆ ಇತ್ಯಾದಿ ಮಾಡಿಸುವುದು ಸಹ ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ಪರಿಹರಿಸುತ್ತದೆ.

ದಿವ್ಯ ಕ್ಷೇತ್ರಗಳಾದ ಗಾಣಗಾಪುರಕ್ಕೆ ಅಕ್ಕಲ್ಕೊಟೆ ಇತ್ಯಾದಿಗಳಿಗೆ ಒಮ್ಮೆ ಭೇಟಿ ಇತ್ತು ನಿಮ್ಮ ಶಕ್ತ್ಯಾನುಸಾರ ಅಲ್ಲಿ ಸೇವೆ ಪೂಜೆ ಸಲ್ಲಿಸಿ. ಜಾತಕದಲ್ಲಿ ನಿಮ್ಮ ಜನ್ಮ ಲಗ್ನದಿಂದ ಗುರು ಉತ್ತಮ ಸ್ಥಾನದಲ್ಲಿ ಇದ್ದಲ್ಲಿ ಉತ್ತಮ ಗುಣಮಟ್ಟದ ಕನಕಪುಷ್ಯರಾಗ ರತ್ನವನ್ನು ತ್ರಿದಿನ ಅಭಿಮಂತ್ರಣೆ ಪೂಜೆ ಮಾಡಿ ಗುರುವಾರದಂದು ಧರಿಸಿ. ಇನ್ನು ಆರ್ಥಿಕವಾಗಿ ಶಕ್ತರಾಗಿದಲ್ಲಿ ಪ್ರತೀ ತಿಂಗಳು ತಿಂಗಳಿಗೊಮ್ಮೆ ಗುರುವಾರದಂದು ಅರಿಶಿನ ವಸ್ತ್ರದಲ್ಲಿ ಉತ್ತಮ ಗುಣಮಟ್ಟದ ಕಡಲೆ ಕಾಳು ಹಾಕಿ ಯಥಾ ಶಕ್ತಿ ದಕ್ಷಿಣೆ ತಾಂಬೂಲ ಸಹಿತ ದಾನ ಮಾಡಿ.

ಮನೆಯ ಸನಿಹದಲ್ಲಿ ಶುದ್ದ ಭಾರತೀಯ ತಳಿಯ ದೇಸಿ ಗೋವು ಇದ್ದಲ್ಲಿ ಅದಕ್ಕೆ ಪ್ರತೀ ಗುರುವಾರ ಹುಲ್ಲು, ಅಕ್ಕಿ, ಬೆಲ್ಲ ಇತ್ಯಾದಿ ಕೊಟ್ಟು ಗೋ ಸೇವೆ ಮಾಡಿ. ಯಾವುದಕ್ಕೂ ಒಮ್ಮೆ 9845682380 ಸಂಖ್ಯೆಗೆ ಕರೆ ಮಾಡಿ ಭೇಟಿ ಮಾಡಿ ನಿಮ್ಮ ಜಾತಕ ಪರಿಶೀಲನೆ ಮಾಡಿಸಿಕೊಂಡಲ್ಲಿ ಉತ್ತಮ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_602019109180457″); document.getElementById(“div_602019109180457”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: