ಭಾರತೀಯ ವಾಯುಸೇನೆಯನ್ನು ದೊಡ್ಡ ಅಪಾಯದಿಂದ ಕಾಪಾಡಿದ್ದು ನಾಗಪೂಜೆ….!

ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸುವ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ನಡೆಸಿದ ಶಸ್ತ್ರಪೂಜೆ ಇದೀಗ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ನಿಂಬೆ ಹಣ್ಣು, ತೆಂಗಿನಕಾಯಿಗಿಂತಲೂ ಹಲವರ ನಿದ್ದೆಗೆಡಿಸಿರುವುದು ಅವರು ಬರೆದ ಓಂ ಅಕ್ಷರ. ಹಿಂದೂ ವಿರೋಧಿಗಳಂತು ಇದನ್ನು ಟೀಕಿಸುವ ಪರಿ ನೋಡಿದರೆ ದೇಶಕ್ಕಿಂತ ಧರ್ಮವೇ ಮುಖ್ಯವಾಗಿರುವ ಹಾಗಿದೆ.

ದೇಶಕ್ಕೆ ಒಳ್ಳೆಯದಾಗುವುದಕ್ಕೆ ಯಾವ ಧರ್ಮದ ಪೂಜೆಯಾದರೇನು ಅನ್ನುವ ನಂಬಿಕೆಯೂ ಈ ಧರ್ಮಾಂಧರಿಗೆ ಇಲ್ಲದಂತಾಗಿದೆ.

ಈ ನಡುವೆ ಇಂತಹ ಅನೇಕ ನಂಬಿಕೆಗಳು ನಮ್ಮ ರಕ್ಷಣಾ ಪಡೆಯ ಬೆಂಬಲಕ್ಕೆ ಬಂದಿವೆ ಅನ್ನುವ ಸತ್ಯ ಹಲವರಿಗೆ ಗೊತ್ತೇ ಇಲ್ಲ. ಹಲವು ಬಾರಿ ಸಮಸ್ಯೆ ಬಗೆ ಹರಿಸುವ ಸಲುವಾಗಿ ಪೂಜೆ ಕಾರ್ಯವನ್ನು ನಡೆಸಿ ಸುಮ್ಮನಾಗುತ್ತಾರೆ ಅದಕ್ಕೆ ಪ್ರಚಾರದ ಅಗತ್ಯವೂ ಇರುವುದಿಲ್ಲ,

ವಾಯು ಸೇನೆಯಲ್ಲಿ ಕೆಲಸ ಮಾಡಿ ಬಂದ ಯೋಧರೊಬ್ಬರು ಹೀಗೆ ನಂಬಿಕೆ ಅನ್ನುವುದು ವಾಯುಸೇನೆಯಲ್ಲಿ ಅಪಾಯದಿಂದ ಹೇಗೆ ಪಾರು ಮಾಡಿತು ಅನ್ನುವುದನ್ನು ವಿವರಿಸಿದ್ದಾರೆ.

ರಾಜನಾಥ್ ಸಿಂಹ ರ #ರಫೇಲ್ ಪೂಜೆಯೂ….#COBRAS ಸ್ಕ್ವಾಡ್ರನ್ ನ ನಾಗ ಪೂಜೆಯೂ

“ ನಾನಿದ್ದ ಯುದ್ಧ ವಿಮಾನದ ಸ್ಕ್ವಾಡ್ರನ್ ನ ಹೆಸರು #COBRAS. ಎಲ್ಲe ವಿಮಾನಗಳ ಎರಡೂ ಬದಿಯಲ್ಲೂ ವಿವಿಧ ಭಂಗಿಗಳಲ್ಲಿ ಹೆಡೆಯೆತ್ತಿದ ಸರ್ಪಗಳು… ನಮ್ಮ ಯುನಿಟ್ ನ ಎಲ್ಲ ವಾಹನಗಳಲ್ಲಿ ಎಲ್ಲ equipment ಗಳಲ್ಲಿ ಹೆಡೆ ಬಿಡಿಸಿದ ಕರಿ ಸರ್ಪಗಳು… ಗೋಡೆಗಳಲ್ಲೂ ಕರಿ ಸರ್ಪಗಳ ಚಿತ್ರಗಳು. ಗಾರ್ಡನ್ ನ ಮಧ್ಯೆಯೂ ಸಿಮೆಂಟ್ ನಿಂದ ಮಾಡಿದ ಕಪ್ಪು ಬಣ್ಣದ ಬಿಳಿ ಪಟ್ಟಿಯ ಹೆಡೆಯೆತ್ತಿದ ಸರ್ಪಗಳು.

ಪೈಲಟ್ ಗಳ ಮತ್ತು ನಮ್ಮ ಸಮವಸ್ತ್ರ ದಲ್ಲೂ ಸರ್ಪಗಳ ಎಂಬ್ರಾಯಿಡರಿ… ನಮ್ಮ ಯನಿಟ್ ನ ಎಲ್ಲಾ ಪರಿಕರಗಳಲ್ಲಿ ಮತ್ತು ಸೈನಿಕರ ಮೈಮೇಲೆಯೂ ಮತ್ತು ಲೆಟರ್ ಹೆಡ್ ಗಳಲ್ಲೂ ಎಲ್ಲೆಲ್ಲೂ ಕರಿ ಕರಿ ಹೆಡೆಯೆತ್ತಿದ ದೊಡ್ಡ ಸಣ್ಣ ಸರ್ಪಗಳು.

ನಮ್ಮ ಸ್ಕ್ವಾಡ್ರನ್ ನ ಶೌರ್ಯದ ಪ್ರತೀಕವೇ ವಿಷಸರ್ಪ….

1990 ನೇ ಇಸವಿ..ನಮ್ಮ ಯುನಿಟ್ ನಲ್ಲಿ ತುಂಬ ತೊಂದರೆಗಳು ಉದ್ಭವವಾದವು. ವಿಮಾನಗಳ ಉಡಾವಣೆಗಳಲ್ಲಿ ಏನೇನೋ ಅಡಚಣೆಗಳು, ದುರ್ಘಟನೆಗಳು ಇನ್ನೂ ಬೇರೆಬೇರೆ ರೀತಿಯ ಹೇಳಲಾಗದಷ್ಟು ತೊಂದರೆಗಳು.

ಇದಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಹೈ ಲೆವೆಲ್ ಕಾನ್ಫರೆನ್ಸ್ ಗಳು, technical experts ಮೀಟಿಂಗ್ ಗಳು ಪರಿಹಾರಗಳು strict technical supervision ಇತ್ಯಾದಿ ಇತ್ಯಾದಿ… ಏನೇನೆಲ್ಲ ಮಾಡಬಹುದಿತ್ತೋ ಅದನ್ನೆಲ್ಲ ಮಾಡಿದರೂ ಸಮಸ್ಯೆಗಳು ಪರಿಹಾರ ಕಾಣಲೇ ಇಲ್ಲ.

ಕೊನೆಗೆ ಕೈ ಚೆಲ್ಲಿದ ಅಧಿಕಾರಿಗಳು ನಮ್ಮ ಯುನಿಟ್ ನ ಎಲ್ಲರ ಸಭೆ ಕರೆದು ಎಲ್ಲರ ಅಭಿಪ್ರಾಯ ಕೇಳಿದರು..ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಹೇಳಲೇ ಬೇಕೆಂದು ಖಡ್ಡಾಯ ಮಾಡಲಾಗಿತ್ತು.

ಕಾರ್ಪೋರಲ್ ಪಾಂಡೆ ಎನ್ನುವ ಬಿಹಾರಿ ಬ್ರಾಹ್ಮಣ ವಾಯು ಸೈನಿಕನೊಬ್ಬ ಎದ್ದು ನಿಂತು “ಸರ್, ನಾಗ್ ಪೂಜಾ ಕರಾಯಿಯೇ ಸಬ್ ಕುಛ್ ಸೀದಾ ಹೋ ಜಾಯೇಗಾ ” ಎಂದುಬಿಟ್ಟ..

ಹಿಂದೆ ಮುಂದೆ ನೋಡದೆ ಅಧಿಕಾರಿಗಳು ಪಂಡಿತ್ ಜೀ ಯವರನ್ನು ಕರೆಸಿ ಪಾಂಡೇ ಜಿಯವರ ಉಸ್ತುವಾರಿಯಲ್ಲಿ ನಾಗ ಪೂಜೆ ಮಾಡಿಸಿಯೇ ಬಿಟ್ಟರು.

ಎಲ್ಲರೂ ನಾಗಪೂಜೆಯಲ್ಲಿ ಉತ್ಸಾಹದಿಂದ ಭಾಗವಹಿಸಿದೆವು. ಯಥೋಚಿತವಾಗಿ ಮತ್ತು ಸಾಂಗವಾಗಿ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ನಂಬಿದರೆ ನಂಬಿ…
1994 ರಲ್ಲಿ ನಾನು ಅಲ್ಲಿಂದ ನಿರ್ಗಮಿಸುವ ವರೆಗೆ #COBRAS ಸ್ಕ್ವಾಡ್ರನ್ ನಲ್ಲಿ ಅತೀ ಸಣ್ಣ ದುರ್ಘಟನೆ ಕೂಡಾ ನಡೆಯಲಿಲ್ಲ.

ಈ ಲೇಖನವನ್ನು ಅವರ ಸಾಮಾಜಿಕ ಜಾಲತಾಣ ಖಾತೆಯಿಂದ ಅನುಮತಿ ಇಲ್ಲದೆ ಪಡೆಯಲಾಗಿದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_602019109180457″); document.getElementById(“div_602019109180457”).appendChild(scpt);

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: